ಸುದ್ದಿ ಸಂಕ್ಷೇಪ
ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ
ಟೇಕಲ್: ಮಾಲೂರು ತಾಲೂಕಿನಲ್ಲಿ ಭಾರೀ ಕುತೂಹಲ ಮೂಡಿಸಿದ ಹುಳದೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಅವಿಶ್ವಾಸ ನಿರ್ಣಯ ಸಭೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ನಡೆದು ಅವಿಶ್ವಾಸಕ್ಕೆ ಕೋಲಾರದ ಉಪವಿಭಾಗಾಧಿಕಾರಿಗಳಿಗೆ ಕೊಟ್ಟಿದ್ದ 11 ಸದಸ್ಯರು ಸಭೆಗೆ ಬಂದಿದ್ದು ನಿರ್ಣಯ ಪರ ಕೈಎತ್ತುವುದರ ಮೂಲಕ ಮತ ಹಾಕಿದರು. ಇದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ತೆರವಾಯಿತು. ಒಟ್ಟು 16 ಮಂದಿ ಸದಸ್ಯರ ಸಂಖ್ಯಾಬಲ ಹೊಂದಿದ್ದು, ಅಧ್ಯಕ್ಷರಾಗಿ ರವೀಂದ್ರ ಇದ್ದರು. ಒಟ್ಟು 11 ಜನ ಸದಸ್ಯರಾದ ಪದ್ಮಾವತಿ, ಎಚ್.ಎನ್. ವೆಂಕಟಾಚಲಪತಿ, ರಾಮಸ್ವಾಮಿ, ರಮಾದೇವಿ, ಸಾದಪ್ಪ, ರಾಮಚಂದ್ರಪ್ಪ, ಗೌರಮ್ಮ, ಮುನೇಗೌಡ, ರಾಮಕೃಷ್ಣಪ್ಪ, ರತ್ನಮ್ಮ, ಪಾರ್ವತಮ್ಮ ಸಹಿ ಮಾಡಿದ ಅವಿಶ್ವಾಸ ಕೋರಿಕೆ ಪತ್ರವನ್ನು ನೀಡಲಾಗಿತ್ತು. ಅದರಂತೆ ಉಪ ವಿಭಾಗಾಧಿಕಾರಿಗಳಾದ ಮಂಜುನಾಥ್ ಇದೇ ತಿಂಗಳ 17 ರಂದು ಅವಿಶ್ವಾಸ ನಿರ್ಣಯ ಸಭೆಗೆ ಕರೆದಿದ್ದು, ಈ 11 ಜನ ಸದಸ್ಯರು ಸಭೆಗೆ ಬಂದಿದ್ದು ಈ ಅವಿಶ್ವಾಸ ನಿರ್ಣಯದ ಸಭೆ ಅಂಗೀಕಾರವಾಯಿತು. ಸಭೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮರಿದೇವರು, ಅಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು.
ಬೆಂಕಿ ಆಕಸ್ಮಿಕ: ವೃದ್ಧೆ ಸಾವು
ಮಾಲೂರು: ತಾಲೂಕಿನ ಬಂಟಹಳ್ಳಿ ಗ್ರಾಮದಲ್ಲಿನ ಕುರಿಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಕಾರಣ ಮನೆಯೊಳಗಿದ್ದ ನಾಲ್ಕು ಕುರಿಗಳು ಸ್ಥಳದಲ್ಲಿಯೇ ಸತ್ತವಲ್ಲದೇ ಅಲ್ಲೇ ಮಲಗಿ ಸುಟ್ಟಗಾಯಗಳಿಂದ ಆಸ್ಪತ್ರೆ ಸೇರಿದ ವೃದ್ಧೆ ಆಸ್ವತ್ರೆಯಲ್ಲಿ ಸತ್ತ ಘಟನೆ ಸೋಮವಾರ ನಡೆದಿದೆ. ಮೃತ ವೃದ್ಧೆಯನ್ನು ಯಲ್ಲಮ್ಮ(80)ಎಂದು ಗುರುತಿಸಲಾಗಿದೆ. ತನ್ನ ನಾಲ್ಕು ಕುರಿಗಳ ಜತೆಯಲ್ಲ ಮಲಗಿದ್ದಾಗ ಸೋಮವಾರ ಬೆಳಗ್ಗಿನ ಜಾವ ಈ ಘಟನೆ ಸಂಭವಿಸಿದೆ. ಮನೆಯೊಳಗೆ ಹಚ್ಚಿದ ದೀಪದಿಂದ ಬೆಂಕಿ ಹತ್ತಿರಬಹುದು ಎಂದು ಅಂದಾಜಿಸಲಾಗಿದೆ. ಸುಟ್ಟ ಗಾಯಗಳಿಂದ ಒದ್ದಾಡುತ್ತಿದ್ದ ಯಲ್ಲಮ್ಮಳನ್ನು ಕೋಲಾರದ ಜಾಲಪ್ಪ ಆಸ್ವತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ವತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಯಲ್ಲಮ್ಮಳನ್ನು ಕಾಪಾಡುವ ಪ್ರಯತ್ನ ಮಾಡಿದ ನೆರೆಮನೆಯ ಆಶೋಕ್(28) ಸುಟ್ಟ ಗಾಯಗಳಿಂದ ಕೋಲಾರದ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪತ್ನಿ ಮೇಲೆ ಪತಿ ಹಲ್ಲೆ
ಮಾಲೂರು: ಶೀಲ ಶಂಕಿಸಿ ಪತ್ನಿ ಮೇಲೆ ಪತಿಯೊಬ್ಬ ಮಾರಾಣಾಂತಿಕ ಹಲ್ಲೆ ಮಾಡಿರುವ ಘಟನೆ ತಾಲೂಕಿನ ರಾಜಕೃಷ್ಣಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಸುನೀತಾ(19) ತನ್ನ ಪತಿ ಪುಟ್ಟರೆಡ್ಡಿ(30)ಯಿಂದ ತೀವ್ರವಾಗಿ ಹಲ್ಲೆಗೆ ಒಳಗಾಗಿ ಆಸ್ವತ್ರೆ ಸೇರಿದ್ದಾಳೆ. ಕತ್ತು ಸೇರಿದಂತೆ ದೇಹದ ಸೂಕ್ಷ ಜಾಗಗಳಿಗೆ ಚಾಕುವಿನಿಂದ ಕೂಯ್ದು ಹಲ್ಲೆ ಮಾಡಿದ ಪುಟ್ಟರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

