ನಾಯಿಗಳ ದಾಳಿ: 7 ಕುರಿ ಸಾವು
ಗೌರಿಬಿದನೂರು: ನಾಯಿಗಳ ಹಠಾತ್ ದಾಳಿಯಿಂದ 7 ಕುರಿಗಳು ಸತ್ತಿದ್ದು, 3 ಕುರಿಗಳಿಗೆ ತೀವ್ರ ಗಾಯವಾಗಿರುವ ಘಟನೆ ತೊಂಡೇಬಾವಿ ಹೋಬಳಿ ಬೆಳಚಿಕ್ಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಬೆಳಚಿಕ್ಕನಹಳ್ಳಿಯ ನಿವಾಸಿ ತಿಮ್ಮಾರೆಡ್ಡಿ ಎಂದಿನಂತೆ ತನ್ನ ಮನೆ ಎದುರಿನ ಕುರಿ ಕೊಪ್ಪಲಿನಲ್ಲಿ ಕುರಿಗಳನ್ನು ಬೆಳಗ್ಗೆ ಮೇಯಿಸಲು ಬಂದು ನೋಡಿದಾಗ ಕುರಿಗಳ ಮೇಲೆ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. 7 ಕುರಿಗಳು ಸತ್ತಿದ್ದು, 3 ಗಾಯಗಳಾಗಿದ್ದು, ಕುರಿಗಳನ್ನು ಸ್ಥಳದಲ್ಲಿಯೇ ತಿಂದಿದ್ದು, ಮತ್ತೆ ಕೆಲವನ್ನು ಸಾಯಿಸಿದೆ ಎಂದು ಅಲವತ್ತುಕೊಂಡಿದ್ದಾರೆ.
ಈ ಘಟನೆಯಿಂದ ಕಂಗಾಲಾಗಿರುವ ರೈತ ಗ್ರಾಮ ಪಂಚಾಯ್ತಿ ಮತ್ತು ಪಶುವೈದ್ಯಾಧಿಕಾರಿಗಳಿಗೆ ದೂರು ನೀಡಿದ್ದು ಸರ್ಕಾರ ಬಡರೈತನಾದ ನನಗೆ ಸೂಕ್ತ ಸಹಾಯ ಮಾಡಬೇಕೆಂದು ಕೋರಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

