ಸುದ್ದಿ ಸಂಕ್ಷೇಪ
ಜಿಲ್ಲಾ ಜೆಡಿಎಸ್ಗೆ ಲೋಕೇಶ್ ನೇಮಕ
ಮಾಲೂರು: ಕೋಲಾರ ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿಯನ್ನಾಗಿ ಲಕ್ಕೂರು ಎಲ್.ಕೆ.ಲೋಕೇಶ್ ಅವರನ್ನು ನೇಮಿಸಲಾಗಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಈ ಸಂಬಂಧ ಪತ್ರಿಕಾ ಪ್ರಕಟಣೆ ಹೂರಡಿಸಿದ್ದು, ಅದರಂತೆ ತಾಲೂಕಿನ ಲಕ್ಕೂರು ಗ್ರಾಮದ ಜೆಡಿಎಸ್ ಮುಖಂಡ ಎಲ್.ಕೆ.ಲೋಕೇಶ್ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ತುಮಕೂರು ನಗರದಲ್ಲಿ ವಿದ್ಯುತ್ ವ್ಯತ್ಯಯ
ತುಮಕೂರು: ತುಮಕೂರು ನಗರ ಉಪ ವಿಭಾಗ-1 ವ್ಯಾಪ್ತಿಗೆ ಬರುವ ಶಾಖೆಗಳ ವಿವಿಧ ಬಡಾವಣೆಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದರಿಂದ ಏಪ್ರಿಲ್ 13 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಪರಿವರ್ತಕಗಳ ಮೇಲ್ದರ್ಜೆಗೇರಿಸುವಿಕೆ, ಮುರಿದ ಕಂಬಗಳ ಬದಲಾವಣೆ, ತಂತಿ ಬದಲಾವಣೆ, ಎಬಿ ಕೇಬಲ್ ಹಾಗೂ ಇತರೆ ಕಾಮಗಾರಿಗಳು ಒಂದು ತಿಂಗಳ ಕಾಲ ನಡೆಯುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಲಾಗಿದೆ. ಕೇಂದ್ರ ಶಾಖೆ ವ್ಯಾಪ್ತಿಗೆ ಬರುವ ಎಂಜಿ ರಸ್ತೆ, ಕೆ.ಆರ್. ಬಡಾವಣೆ, ಶ್ರೀರಾಮನಗರ, ಆರ್ ಟಿ ನಗರ, ಎನ್.ಆರ್. ಕಾಲೋನಿ, ವಿದ್ಯಾನಗರ, ವಾಲ್ಮೀಕಿನಗರ, ಬಟವಾಡಿ, ಹನುಮಂತಪುರ, ಗಣೇಶನಗರ, ವೈಸರ್ ಪಾಳ್ಯ, ಕುವೆಂಪು ನಗರ, ಜಗನ್ನಾಥಪುರ, ಶಾರದಾದೇವಿನಗರ, ಬೆಳಗುಂಬ, ಕುಂದೂ, ಭಾಗ್ಯನಗರ, ಜ್ಯೋತಿಪುರ ಹಾಗೂ ಸುತ್ತಮುತ್ತಲ ಪ್ರದೇಶಗಳು. ಉತ್ತರಶಾಖೆ ವ್ಯಾಪ್ತಿಗೆ ಬರುವ ಸ್ವಾಂದೇನಹಳ್ಳಿ, ಮುತ್ಸಂದ್ರ, ಬೀರನಕಲ್ಲು, ರೊಪ್ಪದಪಾಳ್ಯ, ಅರಕೆರೆ, ಮಲ್ಲೇನಹಳ್ಳಿ, ಯಲ್ಲಾಪುರ, ಅಂತರಸನಹಳ್ಳಿ, ಅಣ್ಣೇನಹಳ್ಳಿ ರಂಗಾಪುರ, ಡಿ.ಸಿ.ಬಂಗ್ಲೆ, ಶೇದೇವಿ ಹಾಸ್ಟೆಲ್, ರೆಡ್ಕ್ರಾಸ್, ರಿಮ್ ಆಸ್ಪತ್ರೆ, ಸತ್ಯಮಂಗಲ, ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ, ಮರಳೇನಹಳ್ಳಿ, ಮತ್ತು ಸುತ್ತಮುತ್ತಲ ಪ್ರದೇಶಗಳು. ಪಶ್ಚಿಮ ಶಾಖೆ ವ್ಯಾಪ್ತಿಗೆ ಬರುವ ದಿಬ್ಬೂರು, ಸಂತೆಪೇಟೆ, ಅಗ್ರಹಾರ, ಚಿಕ್ಕಪೇಟೆ, ಮಂಡಿಪೇಟೆ, ವಿನೋಬನಗರ, ಜಯಪುರ, ಪಿಎಚ್. ಕಾಲೋನಿ, ಹೆಗಡೆಕಾಲೋನಿ, ಸರ್ಕಾರಿ ಆಸ್ಪತ್ರೆ, ಜೆ.ಸಿ.ಆರ್ ಕಾಲೋನಿ, ಗುಬ್ಬಿ ಗೇಟ್, ವಿನಾಯಕನಗರ, ಮಳೆ ಫ್ಯಾಕ್ಟರಿ, ಶಿರಾಗೇಟ್, ಹೌಸಿಂಗ್ ಬೋರ್ಡ್, ಹೊನ್ನೇನಹಳ್ಳಿ, ಹಾಗೂ ಸುತ್ತಮುತ್ತಲ ಪ್ರದೇಶಗಳು. ಪೂರ್ವ ಶಾಖೆಗೆ ಒಳಪಡುವ ಕ್ಯಾತ್ಸಂದ್ರ, ಬಡ್ಡಿಹಳ್ಳಿ, ಗೋಕುಲ ಬಡಾವಣೆ, ಶ್ರೀನಗರ, ಬಂಡೇಪಾಳ್ಯ, ಹಳೇ ಕಾತ್ಸಂದ್ರ, ಎಚ್ಎಂಎಸ್ ಜಾಸ್ ಟೋಲ್ಗೇಟ್, ಮಂಚಕಲ್ ಕುಪ್ಪೆ, ಸಿದ್ದರಾಮೇಶ್ವರ ಬಡಾವಣೆ, ದೇವರಾಯಪಟ್ಟಣ, ಶ್ರೀ ಸಿದ್ಧಗಂಗಾ ಮಠ ಹಾಗೂ ಸುತ್ತಮುತ್ತಲ ಪ್ರದೇಶಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

