ಕೋಲಾರ

ಇಂದು ನಗರಸಭಾ ಅಧ್ಯಕ್ಷ ಚುನಾವಣೆ

Published On :

ಚಿಕ್ಕಬಳ್ಳಾಪುರ: ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಾ.19 ರಂದು ಚುನಾವಣೆ ನಡೆಯುತ್ತಿದ್ದು ನಗರಸಭೆಯ ಆಡಳಿತವನ್ನು ಹಿಡಿಯುವಲ್ಲಿ ಯಾರು ಸಫಲರಾಗುತ್ತಾರೆ ಎಂಬ ಪ್ರಶ್ನೆ ಕುತೂಹಲವನ್ನು ಮೂಡಿಸಿದೆ.
ಮಾ.19 ರಂದು ಮಧ್ಯಾಹ್ನ 1 ಗಂಟೆಗೆ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. 1.15 ಕ್ಕೆ ನಾಮಪತ್ರಗಳ ಪರಿಶೀಲನೆ, ನಂತರ ಆಸಕ್ತ ಅಭ್ಯರ್ಥಿಗಳು ನಾಮಪತ್ರಗಳನ್ನು ಪಡೆಯಬಹುದು. ಒಂದು ವೇಳೆ ಒಂದಕ್ಕಿಂತ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 31 ನಗರಸಭಾ ಸದಸ್ಯರನ್ನು ಹೊಂದಿರುವ ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬ) ಮತ್ತು ಉಪಾಧ್ಯಕ್ಷ ಸ್ಥಾನ (ಹಿಂದುಳಿದ ವರ್ಗ) ಅ ( ಮಹಿಳಾ) ಮೀಸಲಾತಿಗೆ ನಿಗದಿಯಾಗಿದೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿನ 31 ಸದಸ್ಯರಲ್ಲಿ ಜೆಡಿಎಸ್ 11, ಕಾಂಗ್ರೆಸ್ 9, ಬಿಎಸ್‌ಆರ್ 1 ಮತ್ತು ಪಕ್ಷೇತರ 11 ಮಂದಿ ಸದಸ್ಯರಿದ್ದಾರೆ. ಇಲ್ಲಿ ಕೇವಲ ಪಕ್ಷಗಳು ನಾಮಕಾವಸ್ತೆಗೆ ಮಾತ್ರ ಸೀಮಿತವಾಗಿದ್ದರೂ ಪ್ರತಿಷ್ಠೆಯಾಗಿ ಸ್ವೀಕರಿಸಿ ಯಾವ ಪಕ್ಷಗಳು ಅಧಿಕಾರವನ್ನು ಪಡೆದು ಹಿಡಿತವನ್ನು ಸಾಧಿಸಲು ಯಶಸ್ವಿಯಾಗುತ್ತದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಸದ್ಯ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದು ಕಂಡು ಬರುತ್ತಿದೆಯಾದರೂ ಇಲ್ಲಿ ತಿರುವು ಪಡೆದುಕೊಳ್ಳುವುದರ ಬಗ್ಗೆ ಹೇಳುವುದೇ ಕಷ್ಟವಾಗಿದೆ. ಈಗಾಗಲೇ ಬಹುಮತಕ್ಕೆ ಸದಸ್ಯರ ಒಗ್ಗೂಡಿಸುವಲ್ಲಿ ಆಕಾಂಕ್ಷಿಗಳ ತಂತ್ರ ಪ್ರತಿತಂತ್ರ ರೂಪಿಸಿದ್ದು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಕೆಲ ಸದಸ್ಯರನ್ನು ಟೂರ್ ಕರೆದುಕೊಂಡು ಹೋಗುವಂತಹುದು ಸಂಪ್ರದಾಯದಂತೆ ಈ ಬಾರಿಯೂ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.