ಕೋಲಾರ

ನ್ಯಾಯಾಲಯ ತಡೆಯಾಜ್ಞೆ

Published On :

ನಗರಸಭಾ ಸದಸ್ಯರ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಮಾಹಿತಿಯ ಅಫಿಡವಿಟ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ನಗರದ 30 ನೇ ವಾರ್ಡಿನ ಸದಸ್ಯ ಎನ್.ಶ್ರೀನಿವಾಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಮತ ಚಲಾಯಿಸಲು ಸ್ಥಳೀಯ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. 30 ನೇ ವಾರ್ಡಿನ ನಿವಾಸಿ, ನಗರಸಭಾ ಮಾಜಿ ಸದಸ್ಯ ಮಿಲ್ಟನ್ ವೆಂಕಟೇಶ್ ಸಹೋದರ ವಿ.ನಾರಾಯಣಸ್ವಾಮಿ, ಸ್ಥಳೀಯ ನ್ಯಾಯಾಲಯದಲ್ಲಿ ಸದಸ್ಯ ಎನ್. ಶ್ರೀನಿವಾಸ್ ಅವರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. 30 ನೇ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿದ್ದ ಎನ್. ಶ್ರೀನಿವಾಸ್ ಮತ್ತು ಮಿಲ್ಟನ್ ವೆಂಕಟೇಶ್ ಒಟ್ಟು 1,036 ಮತಗಳಲ್ಲಿ ತಲಾ 518 ಸಮಮತಗಳನ್ನು ಪಡೆದುಕೊಂಡಿದ್ದು ಇದರಿಂದ ಲಾಟರಿ ಎತ್ತಲಾಯಿತು. ಇದರಲ್ಲಿ ಎನ್.ಶ್ರೀನಿವಾಸ್ ವಿಜೇತರಾದರು. ಆದರೆ, ಈ ಆಯ್ಕೆ ಲೋಷದೋಷದಿಂದ ಕೂಡಿದೆ. ಮೊದಲಿಗೆ ಎನ್. ಶ್ರೀನಿವಾಸ್ ತಮ್ಮ ಆಸ್ತಿ ಘೋಷಣೆಯ ಬಗ್ಗೆ ಚುನಾವಣಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಕಾನೂನು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ತಮ್ಮ ಪತ್ನಿಯ ಹೆಸರು ಒಂದು ಕಡೆ ಶಿವಮ್ಮ, ಮತ್ತೊಂದು ಕಡೆ ಶಿವರಂಜನಿ ಎಂದು ತಿಳಿಸಿದ್ದು ಅದರಲ್ಲೂ ಆಸ್ತಿ ಸರಿಯಾಗಿ ಘೋಷಣೆ ಮಾಡದೇ ಬಚ್ಚಿಟ್ಟಿದ್ದಾರೆ. ಲಾಟರಿ ಆಯ್ಕೆಯಲ್ಲೂ ಎಡವಟ್ಟು ನಡೆದಿದೆ ಎಂದು ಆರೋಪಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ, ಸದಸ್ಯ ಎನ್. ಶ್ರೀನಿವಾಸ್ ಮತ ಚಲಾಯಿಸುವುದಕ್ಕೆ ತಡೆಯಾಜ್ಞೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.