ನೀರಿನ ಅಸಮರ್ಪಕ ವಿತರಣೆ; ಪ್ರತಿಭಟನೆ
ಮಾಲೂರು: ವಾರ್ಡಿನಲ್ಲಿ ಕಳೆದ ಮೂರು ತಿಂಗಳಿಂದ ನೀರಿನ ವಿತರಣೆ ಅಸಮರ್ಪಕವಾಗಿದ್ದರೂ ಇದುವರೆಗೂ ಪುರಸಭೆ ಗಮನ ಹರಿಸದಿರುವುದನ್ನು ಖಂಡಿಸಿ ಪಟ್ಟಣದ 9ನೇ ವಾರ್ಡ್ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹೆಚ್ಚು ಬಡವರಿರುವ ಹನುಮಂತನಗರ ಸೇರಿದಂತೆ ಪಟ್ಟಣದಲ್ಲೇ ಬಹುದೊಡ್ಡ ವಾರ್ಡ್ ಆಗಿರುವ 8ನೇ ವಾರ್ಡ್ನಲ್ಲಿರುವ ಕೊಳವೆ ಬಾವಿ ಕಟ್ಟಿದ್ದು, ಕಳೆದ ಮೂರು ತಿಂಗಳಿಂದ ಅಸರ್ಮಕವಾಗಿ ನೀರಿನ ವಿತರಣೆಯಾಗುತ್ತಿದೆ. ಅಲ್ಲದೆ ನೀರಿನಲ್ಲಿ ಕೊಳಚೆ ನೀರು ಸೇರಿ ಬರುತ್ತಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ವಾರ್ಡ್ ಸದಸ್ಯೆ ಜಯಲಕ್ಷ್ಮಿ ಅವರ ಪತಿ ಕೃಷ್ಣಪ್ಪ ದೂರಿದರು.
ವಾರ್ಡ್ಗೆ ಕಳುಹಿಸುತ್ತಿದ್ದ ಟ್ಯಾಂಕರ್ ನೀರನ್ನೂ ನಿಲ್ಲಿಸಲಾಗಿದೆ. ಅದು ಬಂದರೂ ಸಿರಿವಂತರ ಮನೆಗೆ ಹೋಗುತ್ತಿದೆ. ಇದರಿಂದ ಗುಡಿಸಲಿನಲ್ಲಿ ವಾಸುತ್ತಿರುವ ಬಡವರು ತೀವ್ರವಾಗಿ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ವಾರ್ಡ್ಗೆ ನೀರಿನ ಶಾಶ್ವತ ಪರಿಹಾರ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಉಪಾಧ್ಯಕ್ಷೆ ಶ್ರೀ ವಲ್ಲಿ, ಸದಸ್ಯ ಮುರಳೀಧರ್ 8ನೇ ವಾರ್ಡ್ ನ ನೀರಿನ ಸಮಸ್ಯೆ ಬಗ್ಗೆ ಮುಖ್ಯಾಧಿಕಾರಿ ರೇಣುಕಾ ಜತೆ ಚರ್ಚಿಸಿ ಹೊಸ ಕೊಳವೆ ಬಾವಿ ಕೊರೆಯುವವರೆಗೂ ಪ್ರತಿ ನಿತ್ಯ ನಾಲ್ಕು ನೀರಿನ ಟ್ಯಾಂಕರ್ ಕಳುಹಿಸಲು ಒಪ್ಪಿಗೆ ಸೂಚಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಎಸ್.ಎಂ.ವೆಂಕಟೇಶ್, ಕೆ.ವಿಜಿ, ನಾಗರತ್ನಮ್ಮ, ಸರಸ್ವತಮ್ಮ, ಕೋಮಲಮ್ಮ, ನಜೀ ಬೇಗಂ, ನಟರಾಜ್, ಯು.ಬಿ.ನಾಗರಾಜ್, ಸುಮಿತ್ರ, ಜಯಮ್ಮ, ರಾಧಬಾಯಿ, ಸುಲೋಚನಾ, ಕಂದಾಯ ನಿವೃತ್ತ ಅಧಿಕಾರಿ ಮುನಿಸ್ವಾಮಿ, ಮುತ್ತುರಾಜ್, ಶಿವರಾಜ್ ಕುಮಾರ್, ಸೈಯದ್ ಷರೀಫ್, ರಹೀಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

