ಬಿಜೆಪಿ ಅಭ್ಯರ್ಥಿ ಆಸ್ತಿ ಮೌಲ್ಯ ರು. 71.50 ಲಕ್ಷ
ಕೋಲಾರ: ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪನವರಿಗಿಂತ ಹೆಚ್ಚು ಸಾಲಗಾರರಂತೆ. ವಿವಿಧ ಬ್ಯಾಂಕುಗಳಿಂದ ರು. 61,41,060 ಲಕ್ಷ ಸಾಲ ಪಡೆದಿದ್ದಾರಂತೆ. ಪತ್ನಿ ಸರಸ್ವತಮ್ಮ ಅವರ ಸಾಲ ರು. 18,43,083 ಎಂದು ಚುನಾವಣಾ ಆಯೋಗಕ್ಕೆ ಲೆಕ್ಕ ನೀಡಿದ್ದಾರೆ.
ಗುರುವಾರ ನಾಮಪತ್ರದೊಂದಿಗೆ ನಾರಾಯಣಸ್ವಾಮಿ ಸಲ್ಲಿಸಿರುವ ಆಸ್ತಿ ಮತ್ತಿತರ ವಿವರಗಳ ಪ್ರಕಾರ 2010-2011ನೇ ವರ್ಷದ ಅವರ ಆದಾಯ ಕೇವಲ 1,77,840 ಎಂದು ಪ್ರಾಮಾಣೀಕರಿಸಿದ್ದಾರೆ. ಎಂ. ನಾರಾಯಣಸ್ವಾಮಿ ಅವರಲ್ಲಿ ರು. 2.25 ಲಕ್ಷ ನಗದು, ಪತ್ನಿ ಸರಸ್ವತಮ್ಮ ಅವರಲ್ಲಿ ರು. 1.50 ಲಕ್ಷ ನಗದು ಇದ್ದು, ನಾರಾಯಣಸ್ವಾಮಿ ಎಲ್ಐಸಿಯಲ್ಲಿ ರು. 10 ಲಕ್ಷ ಉಳಿತಾಯ, ಪತ್ನಿ ಹೆಸರಿನಲ್ಲಿ ರು. 6 ಲಕ್ಷ 35 ಸಾವಿರ, ಬಿ.ಎನ್. ಶಶಿಕಾಂತ್ ಹೆಸರಿನಲ್ಲಿ ರು. 25 ಲಕ್ಷ ಎಲ್.ಐ.ಸಿ. ಉಳಿತಾಯವಿರುತ್ತದೆ.
ನಾರಾಯಣಸ್ವಾಮಿ ಬಳಿ 140 ಗ್ರಾಂ. ಚಿನ್ನವಿದ್ದು ಇದರ ಬೆಲೆ 3.30 ಲಕ್ಷ ರು. ಬೆಳ್ಳಿ 8.150 ಕೆಜಿ ಇದರ ಬೆಲೆ 4 ಲಕ್ಷ ರು. ಪತ್ನಿಯವರಲ್ಲಿ 880ಗ್ರಾಂ. ಚಿನ್ನ ರು.22 ಲಕ್ಷ ಬೆಲೆ, ಶಶಿಕಾಂತ್ ಅವರಲ್ಲಿ 110 ಗ್ರಾಂ. ಚಿನ್ನ 2.75 ಲಕ್ಷ ರು. ಸ್ಥಿರಾಸ್ತಿ ನಾರಾಯಣಸ್ವಾಮಿ ಹೆಸರಲ್ಲಿ 19.31 ಎಕರೆ, ಹೆಂಡತಿ ಸರಸ್ವತಮ್ಮ ಹೆಸರಲ್ಲಿ 19.18 ಎಕರೆ, ಶಶಿಕಾಂತ್ ಹೆಸರಲ್ಲಿ 1.39 ಎಕರೆ ಭೂಮಿಯನ್ನು ಹೊಂದಿರುತ್ತಾರೆ. ಇದರ ಒಟ್ಟು ಬೆಲೆ 35.10 ಲಕ್ಷ ರು.ಆಗಿರುತ್ತದೆ.
ಪತ್ನಿ ಹೆಸರಿನಲ್ಲಿ ಎ.ಪಿ.ಎಂ.ಸಿ. ಬಂಗಾರಪೇಟೆ ವ್ಯಾಪ್ತಿಯಲ್ಲಿ 3 ಲಕ್ಷ 60 ಸಾವಿರ ನಿವೇಶನ ಹೊಂದಿರುತ್ತಾರೆ. ಕಟ್ಟಡಗಳು, ನಿವೇಶನಗಳು ಸೇರಿದಂತೆ ಒಟ್ಟು ನಾರಾಯಣಸ್ವಾಮಿಯವರಲ್ಲಿ 71.50 ಲಕ್ಷ ರು.ಆಸ್ತಿ ಇರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

