ಕೋಲಾರ

' ಮುನಿಯಪ್ಪರಿಂದ ವೋಟ್ ಬ್ಯಾಂಕ್ ರಾಜಕಾರಣ'

Published On :

ಚಿಂತಾಮಣಿ: ದೇಶಾದ್ಯಂತ ಮೋದಿ ಅಲೆಯಿರುವುದರಿಂದ ವಿರೋಧ ಪಕ್ಷಗಳ ಅಭ್ಯರ್ಥಿಗಳಿಗೆ ನಡುಕ ಉಂಟಾಗಿದೆಯೆಂದು ಕೋಲಾರ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಸತ್ಯನಾರಾಯಣ ಮಹೇಶ್ ಹೇಳಿದರು.
ಅವರು ನಗರದ ಪಾಲಿಟೆಕ್ನಿಕ್ ರ್ರಸ್ತೆ ಬಳಿ ಇರುವ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಭಾರತ ದೇಶದಲ್ಲಿ ಮಾದರಿ ದೇಶವನ್ನಾಗಿ ಮಾಡಲು ಜನರು ಬಿಜೆಪಿ ಬಯಸುತ್ತಾ ಕಾಂಗ್ರೆಸ್ ಹಾಗೂ ಪ್ರಾಂತೀಯ ಪಕ್ಷಗಳನ್ನು ಜನರು ತಿರಸ್ಕರಿಸುತ್ತಿರುವುದಾಗಿ ತಿಳಿಸಿದರು.
 ಕೇಂದ್ರ ಮಂತ್ರಿ ಕೆ.ಹೆಚ್. ಮುನಿಯಪ್ಪ ಚಿಕ್ಕಬಳ್ಳಾಪುರದಿಂದ ಕೋಲಾರ ತನಕ ರೈಲ್ವೆ ಮಾರ್ಗವನ್ನು ಮಾಡಿಸುತ್ತಿರುವುದಾಗಿ ಹೇಳಿ ಓಟ್ ಬ್ಯಾಂಕ್ ಆಗಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಬಸವನಗೌಡ ಯತ್ನಾಳ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದರೆ ಕೆ.ಹೆಚ್. ಮುನಿಯಪ್ಪ ರೈಲು ಬಿಟ್ಟು ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದಾಗಿ ಹೇಳಿದರು.
ನಂತರ ಮಾಜಿ ನಗರ ಪ್ರಾದಿಕಾರ ಅಧ್ಯಕ್ಷ ನಾ. ಶಂಕರ್ ಮಾತನಾಡುತ್ತಾ ಬಿಜೆಪಿ ವತಿಯಿಂದ ಕೋಲಾರ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಬೇತಮಂಗಲ ನಾರಾಯಣಸ್ವಾಮಿ ಆಗಿರುವುದರಿಂದ ಬಿಜೆಪಿ ಎಲ್ಲಾ ಮುಖಂಡರು ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಮರೆತು ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀನಿವಾಸಪ್ಪ, ಗೋವಿಂದರಾಜ್, ಶಿವಣ್ಣ, ಮಾಡಿಕೆರೆ ಅರುಣ್, ಕುರಟಹಳ್ಳಿ ಮಂಜು, ಗೋವಿಂದರೆಡ್ಡಿ, ಹಾದಿಗೆರೆ ತಿಮ್ಮಯ್ಯ,ಮಹೇಶ್,ಪ್ರಕಾಶ್‌ಗುಪ್ತ, ಕೃಷ್ಣಮೂರ್ತಿ, ಸಿ.ಆರ್. ವೆಂಕಟೇಶ್, ರೆಡ್ಡಪ್ಪನಾಯ್ಡು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.