ಕಾಂಗ್ರೆಸ್ ಗೆಲವು ಖಚಿತ: ವಾಣಿಕೃಷ್ಣಾರೆಡ್ಡಿ
ಚಿಂತಾಮಣಿ: ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ನೋಡಿ ಲೋಕಸಭಾ ಚುನಾವಣೆಯಲ್ಲಿ ಜನರು ಬಹುಮತ ನೀಡಲಿದ್ದಾರೆಂದು ಕಾಂಗ್ರೆಸ್ ಮುಖಂಡರಾದ ವಾಣಿಕೃಷ್ಣಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಟ್ಯಾಂಕ್ಬಂಡ್ ರಸ್ತೆಯ ಕುರ್ಲಕೃಪ ನಿವಾಸದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರವಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ರಾಯಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಯಲ್ ರಾಮಕೃಷ್ಣಾರೆಡ್ಡಿ ಮಾತನಾಡಿ, ಕಾಂಗ್ರೆಸ್ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದು ದೀನದಲಿತರ ಪರ ಆಡಳಿತ ರೂಪಿಸುವುದಾಗಿ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕಾರ್ಯಕರ್ತರು ತಾಲೂಕಿನ ಎಲ್ಲ 248 ಮತಗಟ್ಟೆಗಳಲ್ಲಿ ಸಕ್ರಿಯವಾಗಿ ಮತದಾನ ಮಾಡಿಸುವ ಮೂಲಕ ಕಾಂಗ್ರೆಸ್ಗೆ ಬಹುಮತ ತರಲು ಮುಂದಾಗಬೇಕೆಂದರು.
ತಾಪಂ ಮಾಜಿ ಸದಸ್ಯ ಕುರುಟಹಳ್ಳಿ ರಾಧಾಕೃಷ್ಣ ಮಾತನಾಡಿ, ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಹಾವು ಮುಂಗಸಿಯಂತೆ ಇದ್ದ ಮಾಜಿ ಶಾಸಕ ಎಂ.ಸಿ.ಸುಧಾಕರ್ ಹಾಗೂ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಗ್ಧ ಮತದಾರರಿಗೆ ಹಣದ ಆಸೆ ತೋರಿಸಿ ರಾಜಕಾರಣ ಮಾಡಿದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಇಬ್ಬರೂ ಒಂದಾಗಿ ದಲಿತವರ್ಗಕ್ಕೆ ಸೇರಿದ ಹಿರಿಯ ರಾಜಕಾರಣಿ ಕೆ.ಎಚ್.ಮುನಿಯಪ್ಪ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಿಲ್ಲವೆಂದರು.
ಕಾಂಗ್ರೆಸ್ ಮುಖಂಡರಾದ ಹಾದಿಗೆರೆ ಚೌಡರೆಡ್ಡಿ, ಆನೂರು ಸುಬ್ಬಣ್ಣ, ಸೀಕಲ್ ರಾಜಕುಮಾರ್, ನಟರಾಜ್, ಬುಲೆಟ್ ರಮೇಶ್, ಗ್ಯಾಸ್ ಶ್ರೀನಿವಾಸ್, ದೇವಳಂ ಶಂಕರ್, ಅಗ್ರಹಾರ ಮುರಳಿ, ಹತಾವುಲ್ಲಾ, ವೆಂಕಟೇಗೌಡ, ಬಿರ್ಜೇನಹಳ್ಳಿ ವೆಂಕಟರೆಡ್ಡಿ, ಸಲೀಂವುಲ್ಲಾ, ಸಿ.ಎಂ.ಇಬ್ರಾಹಿಂ, ರಾಜಾರಾಮ್, ಹಾದಿಗೆರೆ ಕಲೀಂ, ಅಲ್ತಾಫ್ ಪಾಷ, ನಿಜಾಮುದ್ದೀನ್, ತಿನಕಲ್ ಪದ್ದಪ್ಪಯ್ಯ ಸೇರಿದಂತೆ ಹಲವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

