ಕೋಲಾರ

'ಪ್ರಥಮ'ಕ್ಕೆ ಮುನ್ನುಡಿ ಬರೆದ ದೊಡ್ಡ ತಿಮ್ಮಯ್ಯ

Published On :

ಕೆಜಿಎಫ್: ದೇಶದ ಪ್ರಥಮ ಲೋಕಸಭೆಗೆ ಕೋಲಾರ ಕ್ಷೇತ್ರದಲ್ಲಿ 1951ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಥಮ ಸದಸ್ಯರಾಗಿ ದೊಡ್ಡ ತಿಮ್ಮಯ್ಯ ಹಾಗೂ ಎಂ.ವಿ. ಕೃಷ್ಣಪ್ಪ ಆಯ್ಕೆಯಾಗಿದ್ದರು.
ಭಾರತೀಯ ಚುನಾವಣಾ ಆಯೋಗದ ನೇತೃತ್ವದಲ್ಲಿ 1951ರಲ್ಲಿ ಪ್ರಥಮ ಲೋಕಸಭೆ ಚುನಾವಣೆ ನಡೆಯಿತು. ಆಗ ಮೈಸೂರು ರಾಜ್ಯ ಆಡಳಿತದಲ್ಲಿತ್ತು. ಈ ದಿನಗಳಲ್ಲಿ ಕೋಲಾರ ಲೋಕಸಭಾ ಕ್ಷೇತ್ರ ಅಂದು ಸಾಮಾನ್ಯಕ್ಕೆ ಮೀಸಲಾಗಿತ್ತು. ಈ ಕ್ಷೇತ್ರದಲ್ಲಿ ಪ್ರಥಮ ವಿಜೇತರಾಗಿ ದೊಡ್ಡ ತಿಮ್ಮಯ್ಯ 2,03,988 ಮತ ಪಡೆದು ಜಯಗಳಿಸಿದ್ದರು. ಎರಡನೇ ವಿಜೇತರಾಗಿ ಜಿಲ್ಲೆಯ ಕ್ಷೀರಕ್ರಾಂತಿಕಾರ ಎಂ.ವಿ. ಕೃಷ್ಣಪ್ಪ 1,72,546 ಮತ ಪಡೆದು ಆಯ್ಕೆಯಾಗಿದ್ದರು.
ಪ್ರಥಮ ಲೋಕಸಭೆ 1951ರ ಡಿಸೆಂಬರ್ನಲ್ಲಿ ನಿಗದಿಯಾಗಿತ್ತು. ಆದರೆ 1952ರ ಮಾ.27ರಲ್ಲಿ ಚುನಾವಣೆ ನಡೆಸಲಾಯಿತು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 7,41,116 ಮತದಾರರಿದ್ದರು. ಇದರಲ್ಲಿ ಒಟ್ಟು 7,17,848 ಮತಗಳು ಪ್ರಥಮ ಬಾರಿಗೆ ಚಲಾವಣೆಯಾಗಿತ್ತು. ಈ ಚುನಾವಣೆಯಲ್ಲಿ ಒಟ್ಟು 7 ಮಂದಿ ಅಭ್ಯರ್ಥಿಗಳು ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅತಿ ಹೆಚ್ಚು ಮತ ಪಡೆದ ದೊಡ್ಡ ತಿಮ್ಮಯ್ಯ ಪ್ರಥಮ ವಿಜೇತರಾಗಿ ಹಾಗೂ ಎರಡನೇ ಸ್ಥಾನ ಪಡೆದ ಎಂ.ವಿ. ಕೃಷ್ಣಪ್ಪ ಎರಡನೇ ವಿಜೇತರಾಗಿ ಆಯ್ಕೆಯಾದರು.
ಪ್ರಥಮ ಸದಸ್ಯರ ಪರಿಚಯ
ಪ್ರಥಮ ವಿಜೇತರಾಗಿ ಆಯ್ಕೆಯಾದ ದೊಡ್ಡ ತಿಮ್ಮಯ ತುಮಕೂರು ಮೂಲದವರಾಗಿದ್ದು, 1942ರಲ್ಲಿ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಹೋರಾಟಗಾರರಾಗಿ ಜೈಲು ಸೆರಿದ್ದರು. ವಿದ್ಯಾರ್ಥಿ ಜೀವನದಿಂದ ಹೋರಾಟ ಹಾಗೂ ವಿದ್ಯಾರ್ಥಿ ಸಂಘಗಳ ಮೂಲಕ ಚಿರಪರಿಚರಾಗಿದ್ದರು.
ಕೋಲಾರ ಜಿಲ್ಲೆಯ ಮೋತಕಪಲ್ಲಿ ಗ್ರಾಮದ ಎಂ.ವಿ. ಕೃಷ್ಣಪ್ಪ ಜಿಲ್ಲೆಯ ಮಹಾನ್ ನಾಯಕರಾಗಿದ್ದರು. ಜಿಲ್ಲೆಯಲ್ಲಿ ಕ್ಷೀರಕ್ರಾಂತಿ ಮಾಡಿದವರಾಗಿದ್ದು, ಮೈಸೂರು ರಾಜ್ಯದ ಕಂದಾಯ ಸಚಿವ ಹಾಗೂ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕೆಜಿಎಫ್ನಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಸೇರಿದಂತೆ ಬೆಮೆಲ್ ಕಾರ್ಖಾನೆ ಅರಂಭಿಸಲು ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಕೋಲಾರ ಜಿಲ್ಲೆಯ ಜನತೆ ಎಂದೂ ಮರೆಯದಂತಹ ಮಹಾನ್ ನಾಯಕ ಇವರಾಗಿದ್ದರು.

ಆರ್. ರಜನೀಕಾಂತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.