ಚುನಾವಣಾ ಅಧಿಕಾರಿಗಳ ನೇಮಕ
ಮಾಲೂರು: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪಾರದರ್ಶಕವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ತಾಲೂಕಿನಲ್ಲಿ ಚುನಾವಣಾ ನೀತಿಸಂಹಿತೆ ಜಾರಿಗೆ ತಂಡಗಳನ್ನು ರಚಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಶಿವಪ್ರಸಾದ್ ರೆಡ್ಡಿ ಹೇಳಿದರು.
ಅವರು ಪಟ್ಟಣದ ಮಿನಿ ವಿಧಾನಸೌಧದ ಚುನಾವಣಾ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ಪತ್ರಕರ್ತರೊಡನೆ ಮಾತನಾಡಿ, ವೀಡಿಯೊ ಮೇಲ್ವಿಚಾರಣೆ ತಂಡಕ್ಕೆ ಪುರಸಭೆ ಮುಖ್ಯಾಧಿಕಾರಿ ಎಂ.ರೇಣುಕಾ ಹಾಗೂ ಶಿಕ್ಷಣ ಇಲಾಖೆಯ ಗಂಗಾಧರ್ರಾವ್ ಅವರನ್ನು ನೇಮಿಸಲಾಗಿದೆ ಎಂದರು.
ವೀಡಿಯೊ ವಿಚಕ್ಷಣ ತಂಡಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೇಮಂತ್, ಲಕ್ಕೂರು ಸರ್ಕಾರಿ ಪ್ರೌಢಶಾಲೆಯ ಪವನ್, ಲೆಕ್ಕಪತ್ರಗಳ ತಂಡದಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎ.ಜಿ.ಕೃಷ್ಣಯ್ಯ ಹಾಗೂ ಪುರಸಭೆಯ ಲೆಕ್ಕಾಧಿಕಾರಿ ಮಲ್ಲೇಶ್, ಲೆಕ್ಕ ಪತ್ರಗಳ ಪರಿಶೀಲನೆ, ಕಂಟ್ರೋಲ್ ರೂಂ ಹಾಗೂ ಕಾಲ್ಸೆಂಟರ್ ತಂಡದಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್, ಮಡಿವಾಳ ಗ್ರಾಮ ಲೆಕ್ಕಿಗ ಲೋಕೇಶ್, ಸರ್ಕಾರಿ ಪ್ರೌಢಶಾಲೆಯ ರಾಮಚಂದ್ರಪ್ಪ, ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರುದ್ರೇಶ್, ಹಸಾಂಜಹಳ್ಳಿ ಪ್ರೌಢಶಾಲೆಯ ಬಾಲಕೃಷ್ಣ ಅವರನ್ನು ನೇಮಿಸಲಾಗಿದೆ. ಮಾಧ್ಯಮ ದೃಢೀಕರಣ ಉಸ್ತುವಾರಿ ಸಮಿತಿಗೆ ಜಿಪಂ ಎಂಜಿನಿಯರಿಂಗ್ ಉಪವಿಭಾಗದ ಎಇಇ ಬದ್ರಿನಾಥ್, ವರದಿಗಾರ ವಿ.ರಾಜಗೋಪಾಲ್ ಅವರನ್ನು ನೇಮಿಸಲಾಗಿದೆ ಎಂದರು.
ಟೇಕಲ್ ಹೋಬಳಿಯ ವಿಚಕ್ಷಣಾ ದಳದ ತಂಡದಲ್ಲಿ ಉಸ್ತುವಾರಿ ಅಧಿಕಾರಿಯಾಗಿ ಸಿಡಿಪಿಒ ಮಹಮದ್ ಖುರೇಶಿ, ಕೊಂಡಶೆಟ್ಟಿ ಹಳ್ಳಿ ಗ್ರಾಪಂ ಪಿಡಿಒ ವಸಂತಕುಮಾರ್, ಗ್ರಾಮ ಲೆಕ್ಕಿಗ ರಘು ಅವರನ್ನು ನೇಮಿಸಲಾಗಿದೆ. ಪಟ್ಟಣ ಹಾಗೂ ಕಸಬಾ ವಿಚಕ್ಷಣಾ ದಳದ ತಂಡದಲ್ಲಿ ಉಸ್ತುವಾರಿ ಅಧಿಕಾರಿ ತಾಪಂ ಸಿಇಒ ಕೆ.ಪಿ.ಸಂಜೀವಪ್ಪ, ಕೆ.ಜಿ.ಹಳ್ಳಿ ಪಿಡಿಒ ಗೋವಿಂದೇಗೌಡ, ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಳರೋಗಿಗಳ ಸಂಖ್ಯೆ ಏರಿಕೆ
ಕೋಲಾರ: ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಸಾಮಾಜಿಕ ಕಾಳಜಿಯಿಂದ ಕಳೆದ ಫೆ.1 ರಿಂದ ಹಲವಾರು ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಗಳನ್ನು ನೀಡುತ್ತಿರುವುದರಿಂದ ಪ್ರತಿ ದಿನ 500 ಇದ್ದ ಒಳ ರೋಗಿಗಳ ಸಂಖ್ಯೆ ಇದೀಗ 750ಕ್ಕೆ ಏರಿದ್ದು, ಇದು ಮುಂದಿನ ದಿನಗಳಲ್ಲಿ ಒಂದು ಸಾವಿರ ದಾಟುವ ಸಂಭವವಿದೆ ಎಂದು ವೈದ್ಯಕೀಯ ಅಧೀಕ್ಷಕ ಶ್ರೀರಾಮುಲು ತಿಳಿಸಿದರು.
ಆಸ್ಪತ್ರೆಯ ಎಲ್ಲ ವಿಭಾಗಳಲ್ಲೂ ಶೇ.40 ರಷ್ಟು ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಇದರಲ್ಲಿ ಒಬಿಸಿ, ಸರ್ಜರಿ, ಕ್ಯಾನ್ಸರ್ ರೋಗಿಗಳು ಹೆಚ್ಚಾಗಿ ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಆಯ್ಕೆ
ಕೆಜಿಎಫ್: ಜಯಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್ ಹಾಗೂ ರಾಜ್ಯ ಉಪಾಧ್ಯಕ್ಷ ದಲೀಪ್ಶೆಟ್ಟಿ ನೇತೃತ್ವದಲ್ಲಿ ಕ್ಷೇತ್ರದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ನಗರದ ಕನ್ನಡ ಸಂಘದಲ್ಲಿ ಆಯೋಜಿಸಲಾಗಿತ್ತು.
ಸಭೆಯಲ್ಲಿ ಕನ್ನಡದ ಅಭಿವೃದ್ಧಿಗೆ ಹಾಗೂ ಸಂಘಟನೆ ಬೆಳವಣಿಗೆಗೆ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಜಯ ಕರ್ನಾಟಕ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್ ತಿಳಿಸಿದರು. ಅಧ್ಯಕ್ಷ ಪೂಂಡಿರಾಜ್, ಕಾರ್ಯಾಧ್ಯಕ್ಷ ಕೆ. ಶಂಷುದ್ದೀನ್, ಉಪಾಧ್ಯಕ್ಷರಾಗಿ ಎನ್. ಬಾಬು, ಡಿ. ಎಕ್ಸ್ಜಾನ್ಸನ್, ಪ್ರಧಾನ ಕಾರ್ಯದರ್ಶಿ ಸೈಯದ್ ಅಲ್ಲಾಬಕಾಶ್, ಕಾರ್ಯದರ್ಶಿ ಆರೋಗ್ಯಸ್ವಾಮಿ, ಖಜಾಂಚಿ ಬಿ. ಗಜೇಂದ್ರಕುಮಾರ್, ಸಲಹೆಗಾರರಾಗಿ ಜಾವಿದ್ಪಾಷಾ, ಜೆ.ನಯಾಜ್ಅಹಮದ್, ಸಂಘಟನಾ ಕಾರ್ಯದರ್ಶಿ ಜೆ. ವಿನ್ಸೆಂಟ್ ಜಾನ್ಸನ್, ಚಂದ್ರಾಚಾರಿ ಹಾಗೂ ಶಂಕರಾಚಾರಿ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಸಲಹೆಗಾರ ಶ್ರೀನಿವಾಸ್ಮೂರ್ತಿ, ರಾಜಣ್ಣ, ಜಿಲ್ಲಾ ಉಪಾಧ್ಯಕ್ಷ ಕೀಲುಕೋಟೆ ಆಂಜಿನಪ್ಪ, ಕಾರ್ಯದರ್ಶಿ ವೆಂಕಟಾಚಲಪತಿ, ಡಿ.ಎಸ್. ಸುಬ್ರಮಣ್ಯ, ಬಿ.ವಿ. ಶಿವಕುಮಾರ್, ಜಿಲ್ಲಾ ಸಂಚಾಲಕ ಜಿ. ಸುರೇಶ್ಬಾಬು, ಸಮಿತಿ ಸದಸ್ಯ ಕೆ.ಎಂ. ಗೋವಿಂದರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

