ಕೋಲಾರ

ಮಾತೃಭಾಷೆಯಿಂದ ಪರಿಪೂರ್ಣ ಬದುಕು: ನ್ಯಾ. ಅರವಿಂದ್

Published On :

ಗೌರಿಬಿದನೂರು: ಮಾತೃಭಾಷೆಯಿಂದ ಮಾತ್ರ ಅರ್ಥಪೂರ್ಣ ಹಾಗೂ ಪರಿಪೂರ್ಣ ಬದುಕು ಬದುಕಲು ಸಾಧ್ಯ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಅರವಿಂದ್‌ಕುಮಾರ್ ಹೇಳಿದರು.
ಅವರು ಪಟ್ಟಣದ ಡಾ. ಎಚ್.ಎನ್.ಕಲಾಭವನದಲ್ಲಿ ಸಂಕಲ್ಪ ಪ್ರಕಾಶನದ ವತಿಯಿಂದ ವಕೀಲ ಎಚ್.ಎಲ್.ವಿ.ವೆಂಕಟೇಶ್ ರಚಿಸಿರುವ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕೆಲವು ಭೂಮಿಗಳ ಪರಭಾರೆ ನಿಷೇಧ ಕಾಯ್ದೆ 1978 ಮತ್ತು 97ರ ಪರಿಷ್ಕೃತ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿದ ನಂತರ ಮಾತನಾಡಿದರು. ಕನ್ನಡ ಭಾಷೆಯಲ್ಲಿ ಬರೆದಿರುವ ಈ ಪುಸ್ತಕದ ಸಹಾಯದಿಂದ ಪ.ಜಾ.ಮತ್ತು ಪ.ಪಂಗಡದವರು ತಮಗಾಗಿರುವ ಅನ್ಯಾಯವನ್ನು ಪರಿಹರಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಲ್.ನಾರಾಯಣಸ್ವಾಮಿ ಮಾತನಾಡಿ, ಕನ್ನಡದಲ್ಲಿ ಪ್ರಕಟಗೊಂಡಿರುವ ಉಪಯುಕ್ತ ಮಾಹಿತಿಯಿರುವ ಈ ಪುಸ್ತಕದ ಸಹಾಯದಿಂದ ಕಾನೂನನ್ನು ಅರಿತು ತಮಗೆ ಆಗಿರುವ ಅನ್ಯಾಯ ಪರಿಹರಿಸಿಕೊಳ್ಳಬಹುದು ಎಂದರು.
ಹೈಕೋರ್ಟ್ ಸರ್ಕಾರಿ ಅಭಿಯೋಜಕ ಎಂ.ನಾರಯಣರೆಡ್ಡಿ ಮಾತನಾಡಿ, 1978ರಲ್ಲಿಯೇ ಈ ಕಾಯ್ದೆ ಜಾರಿಗೆ ಬಂದರೂ ಅದು ಆಂಗ್ಲ ಭಾಷೆಯಲ್ಲಿತ್ತು ಇದರಿಂದ ಸಾಮಾನ್ಯ ಜನರಿಗೆ ಸೂಕ್ತ ಮಾಹಿತಿಯೇ ಇರಲಿಲ್ಲ. 35 ವರ್ಷಗಳ ನಂತರ ಕನ್ನಡದಲ್ಲಿ ಈ ಪುಸ್ತಕ ಬರುತ್ತಿದೆ. ಈಗಲಾದರೂ ಪಿಟಿಸಿಎಲ್ ಕಾಯ್ದೆಯನ್ನು ಅರಿತು ತಮಗಾಗಿರುವ ಅನ್ಯಾಯವನ್ನು ಬಡವರು ಪರಿಹರಿಸಿಕೊಳ್ಳಿ ಎಂದರು.
ಉಚ್ಚನ್ಯಾಯಾಲಯದ ಹಿರಿಯ ವಕೀಲ ಎಂ.ಸಿದ್ದಗಂಗಯ್ಯ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನ್ಯಾಯಾಧೀಶ ಎ.ಎಸ್.ಬೆಳ್ಳುಂಕೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಂ.ಸಿದ್ದಗಂಗಯ್ಯ ಹಾಗೂ ಕೆ.ಎಚ್.ಸೋಮಶೇಖರರೆಡ್ಡಿ ಅವರನ್ನು ಸನ್ಮಾನಿಸಲಾಯಿತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.