ಕೋಲಾರ

ಹಂದಿಗಳು ಸಾರ್ ಹಂದಿಗಳು...

Published On :

ಕೋಲಾರ ನಗರದ 12 ಮತ್ತು 13ನೇ ವಾರ್ಡಿನಲ್ಲಿ ಹಂದಿಗಳ ಹವಾಳಿ ಹೆಚ್ಚಾಗಿದೆ. ಹಿಂಡು ಹಿಂಡಾಗಿ ಓಡಾಡುವ ಹಂದಿಗಳು ಚರಂಡಿಗಳಲ್ಲಿ ಮತ್ತು ಕಸದ ರಾಶಿ ಇರುವ ಕಡೆ ಹೊರಳಾಡುವುದರಿಂದ ಪರಿಸರ ಹಾಳಾಗುತ್ತಿರುವುದಲ್ಲದೆ, ದುರ್ವಾನೆಯಿಂದ ಜನತೆ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಬೇಸಿಗೆ ದಿನ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಬೇಗನೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆಗಳು ಇರುವುದರಿಂದ ನಗರಸಭೆಯವರು ಹಂದಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಬೀದಿಗಳಿಗೆ, ಗಲ್ಲಿಗಳಿಗೆ ಹಂದಿಗಳು ಬರದಂತೆ ಎಚ್ಚರವಹಿಸಲು ಸೂಚಿಸಬೇಕು.ಒಂದು ವೇಳೆ ಹಂದಿ ಸಾಕಾಣೆ ಮಾಡುತ್ತಿರುವವರು ಸೂಚನೆ ಉಲ್ಲಂಘಿಸಿದಲ್ಲಿ ಹಂದಿಗಳನ್ನು ಹಿಡಿದು ಊರ ಹೊರಗಿನ ಕಾಡಿನಲ್ಲಿ ಬಿಟ್ಟು ಜನತೆಯ ಆರೋಗ್ಯ ಕಾಪಾಡಬೇಕು.
ಟಿ ವೆಂಕಟೇಶಪ್ಪ, ಪಿಸಿ ಬಡಾವಣೆ, ಕೋಲಾರ

ಕಾಲುವೆ ದುರಸ್ತಿ ಯಾವಾಗ?
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗಡಿ ಗ್ರಾಮವಾದ ತಾಯಲೂರಿನ ದಲಿತರ ಕಾಲೋನಿಯಲ್ಲಿ ವೈಯುಕ್ತಿಕ ಶೌಚೌಲಯಗಳ ನಿರ್ಮಾಣಕ್ಕೆ ಜಾಗ ಮತ್ತು ನೀರಿನ ಸಮಸ್ಯೆ ಇರುವುದರಿಂದ ಜಿಪಂನವರು ಕಾಲೋನಿಯ ಪಕ್ಕದ ರಸ್ತೆ ಬದಿಯಲ್ಲಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ, ಮಲ-ಮೂತ್ರ ಹರಿಯಲು ಒಳಚರಂಡಿಯ ವ್ಯವಸ್ಥೆ ಮಾಡಿಲ್ಲ. ಸಾಮೂಹಿಕ ಶೌಚಾಲಯಗಳ ಪಕ್ಕದಲ್ಲೇ ಇರುವ ಕಾಲುವೆಗೆ ಕೊಳಚೆ ನೀರು ಹರಿಸಲಾಗುತ್ತಿದೆ. ಇದರಿಂದ ಗುಬ್ಬುನಾತ ಉಂಟಾಗಿದೆ. ಸಂಬಂಧಪಟ್ಟವರು ಕಾಲುವೆಯನ್ನು ಸರಿಯಾಗಿ ದುರಸ್ತಿಗೊಳಿಸಿ ಶೌಚಾಲಯಗಳ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು, ಜೊತೆಗೆ ಯಾವುದೇ ಕಾರಣಕ್ಕೂ ಈ ನೀರು ಅಂತರ್ಜಲದ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಎಚ್ಚರವಹಿಸಬೇಕು.
ಟಿ ಮುಕುಂದ, ಮುಳಬಾಗಿಲು


ಎಂ.ಬಿ. ರಸ್ತೆಯ ಸೌಂದರ್ಯ ಹಾಳು
ಕೋಲಾರದ ಎಂ.ಬಿ. ರಸ್ತೆಯ ಆಗಲೀಕರಣವೇನೋ ಆಗಿದೆ. ಆದರೆ, ಚರಂಡಿಗಳಲ್ಲಿ ಕಸ ಸುರಿಯುತ್ತಿರುವುದರಿಂದ ಹಾಗೂ ರಸ್ತೆಗಳನ್ನೇ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿರುವುದರಿಂದ ರಸ್ತೆಯ ಸೌಂದರ್ಯ ಹಾಳಾಗುತ್ತಿದೆ. ಕಸ ಸುರಿಯುವ ಜಾಗಕ್ಕೆ ಹತ್ತಿದರಲ್ಲೇ ಪೊಲೀಸ್ ವಸತಿ ಗೃಹ, ಡಿಎಆರ್ ಕಚೇರಿ, ಪ್ರಾರ್ಥನಾ ಮಂದಿರ, ದೇವಾಲಯ, ಶಾಲೆ ಹಾಗೂ ವಾಣಿಜ್ಯ ಮಳಿಗೆಗೆಳು ಇದ್ದು, ಕಸದ ರಾಶಿಯಿಂದಾಗಿ ಜನತೆಯ ನೆಮ್ಮದಿಗೆ ಭಂಗ ಉಂಟಾಗಿದೆ.    ನಗರಸಭೆಯವರು ಕಸ ಸುರಿಯುವವರಿಗೆ ತಿಳುವಳಿಕೆ ನೀಡಬೇಕು, ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು, ಘನತ್ಯಾಜ್ಯ ವಿಲೇವಾರಿಗಾಗಿ ಸೂಕ್ತವಾದ ಯೋಜನೆ ರೂಪಿಸಿ ಜಾರಿಗೆ ತರದಿದ್ದರೆ ಎಂ.ಬಿ ರಸ್ತೆ ಮಾತ್ರವಲ್ಲ, ಇಡೀ ಕೋಲಾರ ಕಸದ ತೊಟ್ಟಿಯಾಗಿ ಮಾರ್ಪಡುವುದರಲ್ಲಿ ಅನುಮಾನವಿಲ್ಲ.
ಟಿ ನಾಗರಾಜ ಶೆಣೈ, ಕೋಲಾರ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.