'ವೈದ್ಯರು ಪ್ರಾಮಾಣಿಕ ಸೇವೆ ಸಲ್ಲಿಸಿ'
ಮಾಲೂರು: ವೈದ್ಯರು ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಸೆಂಟ್ ಮೇರಿಸ್ ಆಸ್ವತ್ರೆಯ ವೈದ್ಯಾಧಿಕಾರಿ ಡಾ. ಶೇಷಾದ್ರಿ ಹೇಳಿದರು.
ಇಲ್ಲಿನ ಗುಡ್ನಹಳ್ಳಿ ರಸ್ತೆಯಲ್ಲಿರುವ ಸೆಂಟ್ ಮೇರಿಸ್ ಆಸ್ವತ್ರೆಯಲ್ಲ ಭಾನುವಾರ ಹಮ್ಮಿಕೊಂಡಿದ್ದ ವೈದ್ಯಕೀಯ ತಪಾಸಣೆ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಣವಂತರು ಮಾತ್ರ ಮೆಡಿಕಲ್ ಸೀಟ್ ಪಡೆಯಲು ಸಾಧ್ಯವಿರುವುದರಿಂದ ಅವರಿಂದ ಪೂರ್ಣ ಪ್ರಮಾಣದ ಸೇವೆ ಅಪೇಕ್ಷಿಸಲು ಸಾಧ್ಯವಾಗುವುದಿಲ್ಲ ಎಂದರು.
ಆಸ್ವತ್ರೆಯ ಮುಖ್ಯ ವ್ಯವಸ್ಥಾಪಕಿ ಡಾ. ಲೂಸಿಯನ್ ಮಾತನಾಡಿ, ಗ್ರಾಮೀಣ ಜನತೆಗೆ ಸಹಕಾರವಾಗಲು ಗ್ರಾಮೀಣ ಭಾಗದಲ್ಲೇ ಆಸ್ವತ್ರೆ ನಿರ್ಮಿಸಿದ್ದು, ಸುತ್ತಮುತ್ತಲ ಗ್ರಾಮಗಳ ಜನತೆಯ ಆರೋಗ್ಯ ಕಾಪಾಡಲಾಗುತ್ತಿದೆ ಎಂದರು. ಶಿಬಿರದಲ್ಲಿ 160 ಜನರು ತಮ್ಮ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಿದ್ದರು. ಡಾ. ಶಿವಕುಮಾರ್, ಡಾ. ನವೀನ್, ಡಾ. ಸತೀಶ್, ಡಾ. ಪೌಜಿಯ, ಡಾ. ಅನ್ಬುಚೆಲಿಯನ್, ಡಾ. ನಯನತಾರ, ಡಾ. ಪ್ರನೀತ್, ಡಾ. ವಿನುತ, ಡಾ. ಪ್ರಸನ್ನಕುಮಾರ್, ಡಾ. ಪ್ರಸಾದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

