ಕೋಲಾರ

ವಿಷ ಆಹಾರ; ಹಲವರು ಅಸ್ವಸ್ಥ

Published On :

ಚಿಂತಾಮಣಿ: ಸೀಕಲ್ಲು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಊಟ ಮಾಡಿದ ಹಲವಾರು ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಲೂಕಿನ ಸೀಕಲ್ಲು ಗ್ರಾಮದ ಊರಹಬ್ಬದಲ್ಲಿ ಊಟ ಮಾಡಿದ ಪರಿಣಾಮ ಸುಮಾರು 7ಕ್ಕೂ ಹೆಚ್ಚು ಮಂದಿಗೆ ವಾಂತಿ-ಭೇದಿ ಆದ ಪರಿಣಾಮ ಸಾರ್ವಜನಿಕ ಆಸ್ಪತ್ರೆಗೆ ಸೇರಿದ್ದಾರೆ. ರತ್ನಮ್ಮ, ನಾಗವೇಣಿ, ಮುನಿರತ್ನ, ಕೃಷ್ಣಪ್ಪ, ಸರ್ವೇಶ್, ಸತೀಶ್, ವೆನ್ನೆಲ ಇನ್ನೂ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.


ವಚನಕಾರರ ಮಾತು ಪಾಲಿಸಿ: ಅಶ್ವತ್ಥ್



ಬಂಗಾರಪೇಟೆ: 12ನೇ ಶತಮಾನದ ವಚನಕಾರರ ಮಾತುಗಳನ್ನು 21 ನೇ ಶತಮಾನ ಸ್ವೀಕರಿಸದಿದ್ದರೆ ಇಡೀ ಸಮಾಜ ಕಲುಷಿತವಾಗುವುದರಲ್ಲಿ ಅನುಮಾನವಿಲ್ಲ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್. ಅಶ್ವತ್ಥ್ ಹೇಳಿದರು.
ತಾಲೂಕಿನ ಎಸ್.ಮಾದಮಂಗಲ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ಬಸವಲಿಂಗ ಸ್ವಾಮಿ ವಿರಕ್ತ ಮಠದ ವತಿಯಿಂದ ಏರ್ಪಡಿಸಿದ್ದ ಕೆ.ಚನ್ನಬಸವಯ್ಯ ಸ್ಮರಾಣರ್ಥ ಶಿವ ಪೂಜೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 'ಬಸವಣ್ಣನವರ ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಮಾತು ಕುಲುಷಿತವಾಗುತ್ತಿದೆ. ಮಾತು ಮತ್ತು ನಮ್ಮ ನಡೆ ಒಂದೇ ಆಗಬೇಕು. ಅಲ್ಲಮ ಪ್ರಭು ತನ್ನ ಬದುಕಿನುದ್ದಕ್ಕೂ ಗುರುವಾಗಿ ಆದರ್ಶವಾಗಿ ಇಂದಿಗೂ ಆತನ ವಚನಗಳು ಬದುಕನ್ನು ದರ್ಶಿಸುತ್ತದೆ ಎಂದರು.
ಬೆಂಗಳೂರಿನ ಪರಮ ಪೂಜ್ಯ ಶ್ರೀ ಶ್ರೀಚಿದ್ಭನಸ್ವಾಮಿಜಿಗಳು ಗಂಜಾ ಮಠ ಅವರ ಸಾನ್ನಿಧ್ಯದಲ್ಲಿ  ಶಿವಪೂಜೆ, ಪಾದ ಪೂಜೆ, ಗದ್ದುಗೆ ಪೂಜೆ, ಮಹಾ ಮಂಗಳಾರತಿ ನೇರವೇರಿಸಿ ಬಸವ ವೀಪಿಕ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾ ಸಭಾದ ಜಿಲ್ಲಾಧ್ಯಕ್ಷ ಎ.ಎನ್.ಸದಾಶಿವಯ್ಯ ವಹಿಸಿ ಮಾತನಾಡಿದರು. ಸಾಹಿತಿ ಕೋಗಿಲಹಳ್ಳಿ ಉಪನ್ಯಾಸ ನೀಡಿದರು.
ಕಸಾಪದ ಕೆ.ಸಿ. ಉಮೇಶ್ ಕುಮಾರ್, ವೆಂಕೋಬರಾವ್ ಪಡುತಾರೆ, ಶ್ರೀಮತಿ ಭಾರತಿನಂಜುಂಡಪ್ಪ, ವೆಂಕಟೇಶಪ್ಪ, ಶಶಿಕುಮಾರ್, ಶ್ಯಾಮಮೂರ್ತಿ, ಜಯರಾಮ್, ವಿಜಯಕುಮಾರ್, ಕುಮುದಿನಿ, ಕೆ.ಜಿ.ಮಂಜುನಾಥ್, ಬಿ.ಜಿ.ನಂಜಪ್ಪ, ಆ.ಪು.ಬಸವರಜು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.