ಏಪ್ರಿಲ್ ಪಡಿತರ ಪದಾರ್ಥ ಎತ್ತುವಳಿ
ನಾಗಮಂಗಲ: ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಏಪ್ರಿಲ್ ಪಡಿತರ ಪದಾರ್ಥಗಳನ್ನು ಎತ್ತುವಳಿ ಮಾಡುವಂತೆ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನ್ಯಾಯಬೆಲೆ ಅಂಗಡಿ ಮಾಲೀಕರ ಹಲವು ಬೇಡಿಕೆಗಳನ್ನು ಈಡೇರಿಸದ ಹೊರತು ಏಪ್ರಿಲ್ ತಿಂಗಳ ಪಡಿತರ ಪದಾರ್ಥಗಳನ್ನು ಗೋದಾಮಿನಿಂದ ಎತ್ತುವಳಿ ಮಾಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು ಎಂದರು. ರಾಜ್ಯ ಸರ್ಕಾರ ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ನಡುವಿನ ಸಂಘರ್ಷಕ್ಕೆ ಮಾತುಕತೆ ಮೂಲಕ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಆಹಾರ ಸಚಿವ ದಿನೇಶ್ಗುಂಡೂರಾವ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಏಪ್ರಿಲ್ ಪಡಿತರ ಪದಾರ್ಥಗಳನ್ನು ಗೋದಾಮಿನಿಂದ ಎತ್ತುವಳಿ ಮಾಡಿ ಎಂದಿನಂತೆ ವಿತರಿಸಲಾಗುವುದು ಎಂದು ತೀರ್ಮಾನಿಸಲಾಗಿದೆ. ಅಂತೆಯೇ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು ಗೋದಾಮಿನಿಂದ ಪಡಿತರ ಪದಾರ್ಥಗಳನ್ನು ಎತ್ತುವಳಿ ಮಾಡಿ ಕಾರ್ಡ್ದಾರರಿಗೆ ವಿತರಸುವಂತೆ ತಿಳಿಸಿದರು.
ಸ್ವಾಮೀಜಿಗೆ ಗಿಡಗಳ ಹಸ್ತಾಂತರ
ಶ್ರೀರಂಗಪಟ್ಟಣ: ಹುತಾತ್ಮ ದಿನದ ಅಂಗವಾಗಿ ಪಟ್ಟಣದ ಹೊರ ವಲಯದಲ್ಲಿರುವ ಚಂದ್ರವನ ಆಶ್ರಮಕ್ಕೆ ಹುತಾತ್ಮ ಭಗತ್ಸಿಂಗ್ ರಾಜಗುರು ಮತ್ತು ಬಲದೇವಿ ಸಿಂಗ್ ಸಂಸ್ಮರಣೆ ಮಾಡಿದ ತಾಲೂಕು ಕನ್ನಡ ಸೇನೆ ಕಾರ್ಯಕರ್ತರು 30 ಅಲಂಕಾರಿಕ ಗಿಡಗಳನ್ನು ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಸ್ವಾಮೀಜಿಗೆ ಹಸ್ತಾಂತರಿಸಿದರು.
ಉದ್ಯಾನದಲ್ಲಿ ಪರಿಸರ ನಡಿಗೆ ಕಾರ್ಯಕ್ರಮ
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾ. ಗಣಗೂರಿನ ಮೀಸಲು ಅರಣ್ಯಕ್ಷೇತ್ರದ ಬಿ.ಬಾಲಯ್ಯ ಜೀವ ವೈವಿಧ್ಯತಾ ಉದ್ಯಾನದಲ್ಲಿ ಪರಿಸರ ನಡಿಗೆ ಕಾರ್ಯಕ್ರಮ ನಡೆಯಿತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ, ಅರಣ್ಯ ಇಲಾಖೆ ಹಾಗೂ ಮಹಿಳಾ ಸರ್ಕಾ ಕಾಲೇಜಿನ ಅಡ್ವೆಂಚರ್ ಅಂಡ್ ನೇಚರ್ ಕ್ಲಬ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಲ್ಕರ್ ವಿದ್ಯಾರ್ಥಿನಿಯರಿಗೆ ಉದ್ಯಾನದಲ್ಲಿ ಬೆಳೆದಿರುವ ಗಿಡ, ಮರಗಳ ಬಗ್ಗೆ ಮಾಹಿತಿ ನೀಡಿದರು.
ಹೂವಿನ ಮಾಲಮ್ಮ ಅದ್ಧೂರಿ ಉತ್ಸವ
ಮಂಡ್ಯ: ನಗರದ ಹೊಸಹಳ್ಳಿ ಮತ್ತು ರಾಮನಹಳ್ಳಿಯಲ್ಲಿ ಶ್ರೀ ಹೂವಿನ ಮಾಲಮ್ಮ ಹಾಗೂ ಮುತ್ತಿನ ಮಾಲಮ್ಮನವರ ಟ್ರಸ್ಟ್ವತಿಯಿಂದ ಗ್ರಾಮ ದೇವತಾ ಹಬ್ಬ ಮತ್ತು ದೇವರ ಉತ್ಸವ ನಡೆಯಿತು. ಉತ್ಸವದಲ್ಲಿ ಮಿಸಲು ನೀರು, ಹೂ ಹೊಂಬಾಳೆ, ಕರಗ, ತಂಬಿಟಿನ ಆರತಿಯೊಂದಿಗೆ ಮೆರವಣಿಗೆ ನಡೆಸಿ, ಹಬ್ಬ ಆಚರಿಸಲಾಯಿತು. ಸುಮಾರು 50 ಹಳ್ಳಿಗಳಿಂದ ನೆರೆದಿದ್ದ ಭಕ್ತರು ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ಸವದಲ್ಲಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮದ ಮುಖಂಡರಾದ ಶಿವು, ಮಹದೇವು, ಕುಮಾರ್, ದೇವೇಗೌಡ ಇದ್ದರು.
ಹಿಂದುಳಿದ ವರ್ಗ ಸಂಘಟನೆ ಅಗತ್ಯ
ಮಳವಳ್ಳಿ: ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಸಂಘಟಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ರಾಕೇಶ್ ಸಿದ್ದರಾಮಯ್ಯ ಅಭಿಮಾನಿ ಒಕ್ಕೂಟ ಕ್ರಿಯಾತ್ಮಕವಾಗಿ ಸಂಘಟನೆ ಮಾಡಲಾಗುತ್ತಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ತಿಳಿಸಿದರು. ತಾಲೂಕಿನ ಬಿ.ಜಿ.ಪುರ ಹೋಬಳಿ ಹೊಸದೊಡ್ಡಿ ಗವಿಸಿದ್ದಯ್ಯ ಪುತ್ರ ರವಿಯನ್ನು ಒಕ್ಕೂಟದ ಬಿ.ಜಿ.ಪುರ ಹೋಬಳಿ ಅಧ್ಯಕ್ಷರನ್ನಾಗಿ ಹಾಗೂ ಬುಗತಗಳ್ಳಿ ಗ್ರಾಮದ ಗವಿಸಿದ್ದ ಅವರನ್ನು ಮಳವಳ್ಳಿ ತಾಲೂಕು ಅಧ್ಯಕ್ಷರನ್ನಾಗಿ ಮಳವಳ್ಳಿ ಪಟ್ಟಣದ ಗುರುಪ್ರಸಾದ್ರನ್ನು ಕರ್ನಾಟಕ ಪ್ರದೇಶ ರಾಕೇಶ್ ಸಿದ್ದರಾಮಯ್ಯ ಅಭಿಮಾನಿ ಒಕ್ಕೂಟದ ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ದಲಿತರ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಒಕ್ಕೂಟ ಅಭಿವೃದ್ಧಿಪಡಿಸಿ ಬಲಪಡಿಸಲು ನಿರ್ದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

