ಮಫ್ತಿಯಲ್ಲಿದ್ದ ಅಬಕಾರಿ ಅಧಿಕಾರಿಗಳಿಗೆ ಧರ್ಮದೇಟು
ಶಿಡ್ಲಘಟ್ಟ: ಮಫ್ತಿಯಲ್ಲಿದ್ದ ಅಬಕಾರಿ ಅಧಿಕಾರಿಗಳನ್ನು ದರೋಡೆಕೋರರೆಂದು ಭಾವಿಸಿದ ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿದ ಪ್ರಸಂಗ ಪಟ್ಟಣಕ್ಕೆ ಸಮೀಪದ ಅಂಗತಟ್ಟಿ ಗೇಟ್ ಬಳಿ ನಡೆದಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ಮದುವೆಗೆ ಒಡವೆ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಸಂಶಯಗೊಂಡು ಬೈಕ್ ತಡೆದು ತನಿಖೆಗೆ ಸಹಕರಿಸದ ಭಕ್ತರಹಳ್ಳಿಯ ಹನುಮೇಗೌಡ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಭಕ್ತರಹಳ್ಳಿಯ ಹನುಮೇಗೌಡ ಎಂಬುವರು ಯಡಾಳದಿಂದ ಭಕ್ತರಹಳ್ಳಿಗೆ ಮದುವೆಗಾಗಿ ಒಡವೆ ತೆಗೆದುಕೊಂಡು ಅಂಗತಟ್ಟಿ ಮಾರ್ಗವಾಗಿ ಹೊರಟಿದ್ದಾಗ ಮಫ್ತಿಯಲ್ಲಿದ್ದ ತಾಲೂಕು ಅಬಕಾರಿ ನಿರೀಕ್ಷಕ ವಿಶ್ವನಾಥ್ ಮತ್ತು ಸಿಬ್ಬಂದಿ ತಡೆದು ನಿಲ್ಲಿಸಿದ್ದು, ದರೋಡೆಕೋರರೆಂಬ ಅನುಮಾನದಿಂದ ಗಾಬರಿಗೊಂಡು ಓಡಲು ಪ್ರಯತ್ನಿಸಿದಾಗ ಇಲಾಖೆಯವರು ಹಿಡಿದು ಥಳಿಸಿ ವಿಚಾರಿಸಿದರು. ಆ ಸಮಯದಲ್ಲಿ ಹನುಮೇಗೌಡ ತಪ್ಪಿಸಿಕೊಂಡು ಓಡಿಹೋಗಿ ಅಂಗತಟ್ಟಿ, ಭಕ್ತರಹಳ್ಳಿ ಮತ್ತು ಕಾಕಚೊಕ್ಕಂಡಹಳ್ಳಿ ಗ್ರಾಮಸ್ಥರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಸ್ಥಳಕ್ಕೆ ಗುಂಪಾಗಿ ಆಗಮಿಸಿದ ಗ್ರಾಮಸ್ಥರು ದರೋಡೆಕೋರರೆಂಬ ಸಂಶಯದಿಂದ ಅಬಕಾರಿ ವೃತ್ತ ನಿರೀಕ್ಷಕ ವಿಶ್ವನಾಥಬಾಬು ಹಾಗೂ ಸಿಬ್ಬಂದಿಗೆ ಧರ್ಮದೇಟು ನೀಡಿದ್ದಾರೆ.
ವಿಷಯ ಅರಿತು ಸರ್ಕಲ್ಇನ್ಸ್ಪೆಕ್ಟರ್ ಶ್ರೀನಿವಾಸ ಮೂರ್ತಿ ಮತ್ತು ಸಬ್ಇನ್ಸ್ಪೆಕ್ಟರ್ ಹನುಮಂತಪ್ಪ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಶಾಸಕ ಎಂ. ರಾಜಣ್ಣ ಸ್ಥಳಕ್ಕೆ ಬಂದು ಅಬಕಾರಿ ಅಧಿಕಾರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸಿಬ್ಬಂದಿಯನ್ನು ವೈದ್ಯ ತಪಾಸಣೆಗೆ ಕರೆದೊಯ್ಯಲಾಯಿತು. ಗ್ರಾಮಾಂತರ ಠಾಣೆಯಲ್ಲಿ ಅಬಕಾರಿ ಅಧಿಕಾರಿಗಳು, ಗ್ರಾಮಸ್ಥರನ್ನು ಕೂರಿಸಿ ತಪ್ಪು ತಿಳುವಳಿಕೆಯಿಂದಾಗಿ ನಡೆದ ಅವಘಡದ ಬಗ್ಗೆ ವಿವರಿಸಿ ಸಮಾಧಾನಗೊಳಿಸಿ ಸಮಸ್ಯೆ ಬಗೆಹರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

