ಕೋಲಾರ

ನೀತಿ ಸಂಹಿತೆ ಉಲ್ಲಂಘನೆ ತಡೆಗೆ ಅಗತ್ಯ ಕ್ರಮ

Published On :

ಕೆಜಿಎಫ್: ಚುನಾವಣೆ ಸುಸಜ್ಜಿತವಾಗಿ ನಿರ್ವಹಿಸಲು ಕಂಟ್ರೋಲ್‌ರೂಮ್, ಪ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ದೂರು ನೀಡಬಹುದು ಎಂದು ಸಹಾಯಕ ಚುನಾವಣಾಧಿಕಾರಿ ಜಗದೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.29 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಸ್ಕೂಲ್ ಆಫ್ ಮೈನ್ಸ್‌ನಲ್ಲಿ ಪಿಆರ್‌ಒ, ಎಪಿಆರ್‌ಒ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ನುರಿತ ಮಾಸ್ಟರ್ ಟ್ರೈನಿ ಅವರಿಂದ ಚುನಾವಣಾ ತರಬೇತಿ ಆಯೋಜಿಸಲಾಗಿದೆ ಎಂದರು. ಕ್ಷೇತ್ರದಲ್ಲಿ ಒಟ್ಟು 232 ಮಟಗಟ್ಟೆಗಳಿದ್ದು, ಅದರಲ್ಲಿ 134 ಸಾಮಾನ್ಯ, 60 ಸೂಕ್ಷ್ಮ ಮತ್ತು 38 ಅತಿ ಸೂಕ್ಷ್ಮ ಮತಗಟ್ಟೆಗಳಾಗಿ ಪರಿಗಣಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 1,71,416 ಮತದಾರರಿದ್ದು, ಅದರಲ್ಲಿ 86,420 ಪುರುಷರು ಮತ್ತು 84,996 ಮಹಿಳೆಯರಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ ನೂತನವಾಗಿ ಮತದಾರರು ಸೇರ್ಪಡೆಗೊಂಡಿದ್ದು ಆ ಪಟ್ಟಿಯನ್ನು ಮುಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದರು.
ಕೆಜಿಎಫ್ ಗಡಿ ಪ್ರದೇಶಗಳಾದ ಕೆಂಪಾಪುರ, ರಾಜಪೇಟೆರೋಡ್ ಮತ್ತು ಸುಂದರಪಾಳ್ಯ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆ ಕುರಿತು ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ- 18004252716, ಕಂಟ್ರೋಲ್ ರೂಮ್ ಸಂಖ್ಯೆ ಜಯಹರಿ- 8147398577, ಅಮರೇಶ್- 9964299177, ವಿಡಿಯೋ ಸರ್ವೆಲೆನ್ಸ್ ತಂಡ ಅಧಿಕಾರಿ ದಾಸೇಗೌಡ- 9880101409, ಪ್ಲೈಯಿಂಗ್ ಸ್ಕ್ವಾಡ್ ತಂಡ ರಾಬರ್ಟ್‌ಸನ್‌ಪೇಟೆ ಹೋಬಳಿ ಭೀಮನೀಡಿ 9448427411, ಬೇತಮಂಗಲ ಹೋಬಳಿ ಶಂಕರಮೂರ್ತಿ 9845602023, ಕ್ಯಾಸಂಬಳ್ಳ ಹೋಬಳಿ ರಘುನಾಥಯ್ಯಶೆಟ್ಟಿ 9480813164,  ಸ್ಟಾಟಿಕ್ ಸರ್ವೆಲನ್ಸ್ ತಂಡ ಕೆಂಪಾಪುರ ಚೆಕ್ ಪೋಸ್ಟ್ ವೆಂಕಟನಾರಾಯಣರೆಡ್ಡಿ- 9448518389,  ರಾಜಪೇಟೆರೋಡ್ ಚೆಕ್ ಪೋಸ್ಟ್ ಲಕ್ಷ್ಮೀಕಾಂತ್- 9036991112 ಹಾಗೂ ಸುಂದರಪಾಳ್ಯ ಚೆಕ್ ಪೋಸ್ಟ್ ರವೀಂದ್ರ- 9341999781 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.