ಶಾಂತಿಯುತ ಚುನಾವಣೆಗೆ ಸಹಕಾರ ಅಗತ್ಯ
ಮಾಲೂರು: ಶಾಂತಿಯುತ ಚುನಾವಣೆ ನಡೆಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಸಹಾಯಕ ಚುನಾವಣಾಧಿಕಾರಿ ಪ್ರಸಾದ್ರೆಡ್ಡಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೂಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲಾವರು ಕ್ರಮಗಳನ್ನು ಕೈಗೊಂಡಿದೆ ಎಂದರು. ಏ.5 ಹಾಗೂ 6 ರಂದು ತಾಲೂಕಿನಲ್ಲಿ ಅತಿ ಕಡಿಮೆ ಮತದಾನವಾಗಿದ್ದ 10 ಗ್ರಾಪಂಗಳಲ್ಲಿ ಕಲಾ ತಂಡದವರ ಮೂಲಕ ಬೀದಿ ನಾಟಕ ಪ್ರದರ್ಶನ ಮಾಡಲಾಗುತ್ತದೆ. ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಚುನಾವಣಾ ಆಯೋಗದ ನೀತಿ-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಎಚ್ಡಿಕೆಗೆ ವಂತಿಗೆ ನೀಡಿದ ಸಾರ್ವಜನಿಕರು
ಚಿಕ್ಕಬಳ್ಳಾಪುರ: ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಕ್ಷೇತ್ರದಲ್ಲಿ ಬುಧವಾರ ರ್ಯಾಲಿ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಜನರು ತಮ್ಮ ಕೈಯಲ್ಲಾದಷ್ಟು ವಂತಿಗೆ ನೀಡಿದ್ದು ವಿಶೇಷವಾಗಿತ್ತು. ನಗರದ ಬಿ.ಬಿ. ರಸ್ತೆ ಮತ್ತು ಎಂ.ಜಿ. ರಸ್ತೆಯ ಪ್ರಮುಖ ವೃತ್ತಗಳಲ್ಲಿ ರ್ಯಾಲಿ ವಾಹನ ಮುಂಭಾಗಕ್ಕೆ ಬಂದ ಕೆಲವರು ಕುಮಾರಸ್ವಾಮಿಗೆ ನೋಟುಗಳನ್ನು ನೀಡಲು ಮುಂದಾದರು. ಇದರಿಂದ ಉತ್ಸಾಹಗೊಂಡ ಪಕ್ಷದ ಮುಖಂಡರು ಜನರು ನೀಡುವ ಹಣ ಗೋಣಿ ಚೀಲವೊಂದಕ್ಕೆ ಹಾಕಿಕೊಂಡರು. ನನ್ನ ಮೇಲೆ ಇಷ್ಟು ಅಭಿಮಾನವಿಟ್ಟು ಜನರು ವಂತಿಗೆ ನೀಡುತ್ತಿರುವುದರಿಂದ ಸಂತಸವಾಗಿದೆ ಎಂದರು.
ಜನರಿಗೆ ಟೋಪಿ ಹಾಕಿರುವ ಕೇಶವ್: ಶಿವಾರೆಡ್ಡಿ
ಚಿಂತಾಮಣಿ: ಕೋಲಾರ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್ ಅವರು ಅನೇಕರಿಗೆ ಜನರಿಗೆ 'ಟೋಪಿ' ಹಾಕಿದ್ದಾರೆ. ಅವರನ್ನು ಜನ ತಿರಸ್ಕರಿಸುತ್ತಾರೆ ಎಂದು ಮಾಳಪಲ್ಲಿ ಎಂ.ಎನ್.ಶಿವಾರಡ್ಡಿ ಕಿಡಿ ಕಾರಿದರು. ನಗರದ ಹೊರ ವಲಯದ ಬೂರಮಾಕಲಹಳ್ಳಿ ಸಂಜೀವ ಸಮುದಾಯ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಶವ್ ಅವರು ಎಸ್ಟೇಟ್ ದಂಧೆಯಲ್ಲಿ ಜನರಿಗೆ ನಿವೇಶ ನೀಡುವುದಾಗಿ ಹೇಳಿ, ಜನರಿಗೆ ಮೋಸ ಮಾಡಿದ್ದಾರೆ. ಅವರ ವಿರುದ್ಧ ಬೆಂಗಳೂರಿನಲ್ಲಿ ಅನೇಕ ಪ್ರಕರಣಗಳಿವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

