ಹಂದಿ ಸಾಕಾಣೆದಾರರಿಗೆ ನೋಟಿಸ್ ಜಾರಿ
ಕೋಲಾರ: ಹಂದಿ ಸಾಕುತ್ತಿರುವ ಮಾಲೀಕರು ತಿಳಿವಳಿಕೆ ಪತ್ರ ತಲುಪಿದ 7 ದಿನಗಳೊಳಗಾಗಿ ಹಂದಿಗಳನ್ನು ನಗರದ ಒಳಭಾಗದಿಂದ ಹೊರಗೆ ಸಾಗಿಸಬೇಕೆಂದು ನಗರಸಭೆ ಪೌರಾಯುಕ್ತ ಜಗದೀಶ್ ಸೂಚಿಸಿದ್ದಾರೆ.
ನಗರದ ಒಳಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿದೆ. ಕಾನೂನು ಪ್ರಕಾರ ನಗರದ ಒಳಗಡೆ ಹಂದಿಗಳ ಸಾಕಾಣಿಕೆ ಮಾಡುವಂತಿಲ್ಲ. ನಗರದಲ್ಲಿ ಬೇಕಾಬಿಟ್ಟಿಯಾಗಿ ಹಂದಿಗಳು ಓಡಾಡುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಮತ್ತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದ್ದು ಕೂಡಲೇ ಮಾಲೀಕರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ತಿಳಿವಳಿಕೆ ಪತ್ರವನ್ನು ಉಲ್ಲಂಘಿಸಿದಲ್ಲಿ ಹಂದಿ ಮಾಲೀಕರ ವಿರುದ್ಧ ಕ್ರಮ ಜರುಗಿಸುವುದರ ಜೊತೆಗೆ ಬೀದಿಯಲ್ಲಿ ಕಾಣಿಸುವ ಎಲ್ಲಾ ಹಂದಿಗಳನ್ನು ಕಾನೂನಿನನ್ವಯ ಹೊರ ಸಾಗಿಸುವ ಅಥವಾ ನಾಶ ಪಡಿಸಲಾಗುವುದು. ಇದರಿಂದ ಹಂದಿ ಸಾಕಾಣಿಕೆದಾರರಿಗೆ ನಷ್ಟ ಉಂಟಾದರೆ ನಗರಸಭೆ ಹೊಣೆಯಲ್ಲವೆಂದು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಹಿಂದಿಗಳ ಹಾವಳಿ ಕುರಿತು ಕನ್ನಡಪ್ರಭದಲ್ಲಿ ಮಾ.24ರ ಪೌರ ಸಮಸ್ಯೆ ಅಂಕಣದಲ್ಲಿ ಉಲ್ಲೇಖವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

