ಏ.3, 4 ರಂದು ನೂತನ ದೇಗುಲ ಆರಂಭೋತ್ಸವ
ಹುಳಿಯಾರು: ಹೋಬಳಿ ಜೋಡಿತಿರುಮಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕೊಲ್ಲಾಪುರ ಮಹಾಲಕ್ಷ್ಮೀದೇವಿ ದೇವಾಲಯದ ವಿಮಾನಗೋಪುರದ ಮಹಾಕುಂಭಾಭಿಷೇಕ ಮಹೋತ್ಸವ ಏಪ್ರಿಲ್ 3, 4ರಂದು ಜರುಗಲಿದೆ.
ಕರ್ನೂಲು ಜಿಲ್ಲೆಯ ಯಾದವಗಿರಿ ಅದವಾನಿ ಮಠಾಧೀಶರಾದ ಶ್ರೀ ಸುಬ್ರಮಣ್ಯ ಭಾರತೀ ಮಹಾಸ್ವಾಮೀಜಿಯವರು ವಿಮಾನ ಗೋಪುರ ಪ್ರತಿಷ್ಠಾಪಸಲಿದ್ದಾರೆ.
ಏ.3ರ ಸಂಜೆ ಗ್ರಾಮದೇವತೆಗಳಾದ ಹುಳಿಯಾರಿನ ದುರ್ಗಮ್ಮ, ಹೊಸಹಳ್ಳಿ ಕೊಲ್ಲಾಪುರದಮ್ಮ, ಪಾಳ್ಯದ ಅಂತರಗಟ್ಟೆ ಅಮ್ಮನವರ ಆಗಮನದೊಂದಿಗೆ ಭೇಟಿ ಕಾರ್ಯ ನಡೆಯಲಿದೆ. ನಂತರ ಮಹಾಗಳಾರತಿ ಪ್ರಾರ್ಥನೆ, ವೇದಪಾರಾಯಣ, ಪುರಸ್ಸರ ಯಾಗಶಾಲಾ ಪ್ರವೇಶ, ಗಂಗಾಪ್ರವೇಶ, ಗಣಪತಿಪೂಜೆ, ಸ್ವಸ್ತಿವಾಚನ, ದೇವನಾಂದಿ, ಮಹಾಪರಿಷತ್, ಆಚಾರ್ಯಾದಿ ಋತ್ವಿಕ್ವರಣ, ಕಲಶಸ್ಥಾಪನೆ, ಅಂಕುರಾರ್ಪಣೆ, ಧ್ವಜಾರೋಹಣ, ಪಂಚಗವ್ಯ ಮೇಳ, ರಕ್ಷ ಸೂತ್ರ ಬಂಧನ, ಕಳಶಶುದ್ಧಿ, ವಾಸ್ತು, ರಾಕ್ಷೋಘ್ನ ಹೋಮ, ಅಧಿವಾಸಾದಿಗಳು, ಕಳಶಾಭಿಷೇಕ, ಅರ್ಚನೆ,ಅಷ್ಟದಿಕ್ಪಾಲಕ ಬಲಿ ಪ್ರಧಾನದೊಂದಿಗೆ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಏ.4ರಂದು ಶ್ರೀಕ್ಷೇತ್ರ ಬೆಲುಗೂರಿನ ಶ್ರೀಬಿಂದು ಮಾಧವ ಶರ್ಮ ಸ್ವಾಮಿಗಳ ಸಾನಿಧ್ಯದಲ್ಲಿ ಬೆಳಗಿನ ಜಾವ,
ಗುರುಪ್ರಾರ್ಥನೆ, ಮಹಾಗಣಾಪತಿಪೂಜೆ, ಕಲಶಾರ್ಚನೆ, ಶ್ರೀಸೂಕ್ತಹೋಮ, ನವಗ್ರಹ, ಪುರಸ್ಸರ ಷೋಡಶ ಕಲಾ ಹೋಮ ನಡೆದು, ಸುಹಾಸಿನಿಯರಿಂದ ಶ್ರೀಲಲಿತಾ ಸಹಸ್ರನಾಮ ಪಾರಾಯಣ, ಶ್ರೀಚಂಡಿಕಾಹವನ ಕಾರ್ಯದೊಂದಿಗೆ ಪಂಚಾಮೃತಾಭಿಷೇಕ ಸೇವೆಗಳು ಜರುಗಲಿವೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

