ಕೋಲಾರ

ಟೊಮೇಟೋಗೆ ಬೆಲೆ; ಕೆಂಪೇರಿದ ರೈತರ ಮೊಗ

Published On :

ಮುಳಬಾಗಲು: ಕಳೆದ ಎರಡು ತಿಂಗಳಿಂದ ಭಾರಿ ಕುಸಿತ ಕಂಡಿದ್ದ ಟೊಮೇಟೋ ಬೆಲೆ ಶುಕ್ರವಾರ ಸ್ವಲ್ಪ ಸುಧಾರಣೆ ಕಂಡು, ರೈತರ ಮುಖ ಕೆಂಪೇರುವಂತೆ ಮಾಡಿದೆ.
ಈ ವರೆಗೂ ಟೊಮೇಟೋ ಕೇಳುವವರೇ ಇರಲಿಲ್ಲ. ಹಾಗಾಗಿ ರೈತರು ತಮ್ಮ ಫಸಲನ್ನು ತೋಟಗಳಲ್ಲೇ ಹಾಗೆ ಬಿಟ್ಟಿದ್ದರು. ಬೆಲೆ ಸಿಗದೆ ಟೊಮೇಟೋ ಬೆಳೆದ ರೈತರು ಮರಕುಪಡುವುದನ್ನು ಬಿಟ್ಟ ಇನ್ನೇನೂ ಮಾಡಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. 16 ಕೆ.ಜಿ. ಬಾಕ್ಸ್ಗೆ 20 ಬೆಲೆ ಸಿಗುವುದು ಕೂಡಾ ದುರ್ಲಭವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಎನ್.ವಡ್ಡಹಳ್ಳಿ ಗ್ರಾಮದ ಆರ್ಎಂಸಿ ಟೊಮೇಟೋ ಮಾರುಕಟ್ಟೆಯಲ್ಲಿಶುಕ್ರವಾರ ಇದ್ದಕ್ಕಿದ್ದಂತೆ ಟೊಮೇಟೋ ಬೆಲೆ ಬಾಕ್ಸ್ಗೆ 60ಕ್ಕೂ ಹೆಚ್ಚಿನ ಏರಿಕೆ ಕಂಡಿದೆ. ಆದರೆ, ಟೊಮೇಟೋ ಸರಬರಾಜು ಮಾತ್ರ ಬೇಡಿಕೆಗೆ ತಕ್ಕಂತೆ ಇರಲಿಲ್ಲ. ಇದಕ್ಕೆ ಕಾರಣ ತೋಟಗಳಲ್ಲಿರುವ ಬೆಳೆಯನ್ನು ಯಾರು ಈಚೆಗೆ ತೆಗೆದಿಲ್ಲವೆಂಬುದು ಹಾಗೂ ಬೆಲೆಯ ಕುಸಿತದಿಂದ ರೈತಾಪಿಗಳು ಟೊಮೇಟೋ ಮೇಲೆ ನಿರಾಶಕ್ತರಾಗಿರುವುದು. ಕೋಲಾರ ಜಿಲ್ಲೆಯ ಬಹುತೇಕ ರೈತಾಪಿಗಳು ಟೊಮೆಟೊಗೆ ಚೆನ್ತೈ ಮೇಲೆ ಅವಲಂಭಿತರಾಗಿರುತ್ತಾರೆ. ಶುಕ್ರವಾರ ಬಂದ ಸಂದೇಶದಂತೆ ಟೊಮೇಟೋಗೆ ಬೇಡಿಕೆ ಬಂದಿದೆ. ಇರುವ ಟೊಮೇಟೋವನ್ನು ಕಳುಹಿಸಲು ಇಲ್ಲಿನ ಮಾರುಕಟ್ಟೆಯ ದಳ್ಳಾಳಿಗಳು ಮುಂದಾಗಿದ್ದಾರೆ.  ಟೊಮೇಟೋ ಬೆಳೆ ಒಂದು ಲಾಟರಿಯಂತಾಗಿದೆ ಎನ್ನುತ್ತಾರೆ ತಾಲ್ಲೂಕಿನ ಪಿ.ಗಂಗಾಪುರ ಗ್ರಾಮದ ಜಿ.ನಾರಾಯಣಸ್ವಾಮಿ.  ಆದರೆ, ಶುಕ್ರವಾರದ ದರ ಇದೇ ಮುಂದುವರಿಯಬಹುದು. ಇಲ್ಲವೇ ಮತ್ತೆ ಕುಸಿತ ಕಾಣಬಹುದು ಎನ್ನುತ್ತಾರೆ ಎನ್.ವಡ್ಡಹಳ್ಳಿ ಮಾರುಕಟ್ಟೆಯ ಪ್ರಮುಖ ವ್ಯಾಪಾರಿ ವೆಂಕಟರವಣಪ್ಪ. ತಾಲೂಕಿನ ಟೊಮೇಟೋ ರೈತರ ಹಣೆಬರಹ ದೂರದ ಚೆನ್ನೈ ಮಾರುಕಟ್ಟೆಯ ಮೇಲೆ ಅವಲಂಬಿಸಿದೆ ಎಂಬುದು ಮಾತ್ರ ಸುಳ್ಳಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.