ಬಿಜೆಪಿ ಅಭ್ಯರ್ಥಿ ಕಂದಿಕೆರೆ ಪ್ರವಾಸ
ಚಿಕ್ಕನಾಯಕನಹಳ್ಳಿ: ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರು ಕಂದಿಕೆರೆ ಹೋಬಳಿ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ ಎಂದು ತಾಲೂಕು ಅಧ್ಯಕ್ಷ ಎಂ.ಎಂ. ಜಗದೀಶ್ ತಿಳಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಅವರು ಮಾ.29 ರಂದು ಬೆಳಿಗ್ಗೆ ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಪೂಜೆ ಸಲ್ಲಿಸಿದ ನಂತರ ಕಸಬಾ ಹೋಬಳಿಯ ಹೋಸಳ್ಳಿಯ ಗ್ರಾಮದಿಂದ ಪ್ರಾರಂಭವಾಗುವ ಪ್ರವಾಸ ಕಾತ್ರಿಕೆಹಾಲ್, ತೀರ್ಥಪುರ, ದೊಡ್ಡರಾಂಪುರ ಬರಶಿಡ್ಲಹಳ್ಳಿ, ತಿಮ್ಮನಹಳ್ಳಿ ಮಾರ್ಗವಾಗಿ ಕಂದಿಕೆರೆ ಮಾಳಿಗೇಹಳ್ಳಿಯವರೆಗೆ ನಡೆಯುವುದೆಂದು ಅವರು ತಿಳಿಸಿದ್ದಾರೆ. ಕಾರ್ಯಕರ್ತರು ತಮ್ಮ ತಮ್ಮ ಗ್ರಾಮಗಳಲ್ಲಿ ಸೇರಿ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.
ಕಂಚೀರಾಯಸ್ವಾಮಿ ರಥೋತ್ಸವ
ಚಿಕ್ಕನಾಯಕನಹಳ್ಳಿ: ತಾಲೂಕಿನ ಕಸಬಾ ಮೇಲನಹಳ್ಳಿ ಶ್ರೀ ಕಂಚೀರಾಯಸ್ವಾಮಿಯ ಮಹಾ ರಥೋತ್ಸವ ಏ.3 ರಂದು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಏ.3ರಿಂದ 5 ರವರಗೆ ನಡೆಯುವ ಕಾರ್ಯಕ್ರಮಗಳಲ್ಲಿ 3 ರಂದು ಧ್ವಜಾರೋಹಣ ಮತ್ತು ಪರ್ವತಾರೋಹಣ, 4ರಂದು ಉತ್ಸವ, 5ರಂದು ಆರತಿಕಳಸ ಧೂಪದಸೇವೆ, ರಾತ್ರಿ 8 ಗಂಟೆಗೆ ತಮ್ಮಡೀಹಳ್ಳಿ ಡಾ. ಅಭಿನವಮಲ್ಲಿಕಾರ್ಜುನ ಸ್ವಾಮೀಜಿಯವರ ಸಮ್ಮುಖದಲ್ಲಿ ಮಹಾರಥೋತ್ಸವ ಏರ್ಪಡಿಸಲಾಗಿದೆ. 6ರಂದು ರಾತ್ರಿ ಧ್ವಜಾರೋಹಣ ಮತ್ತು ಗ್ರಾಮ ಶಾಂತಿಯ ನಂತರ ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯಗೊಳ್ಳುವವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

