ಕೋಲಾರ

800 ವರ್ಷಗಳ ಹಿಂದಿನ ಪೂಜಾ ಸಾಮಗ್ರಿಗಳು!

Published On :

ಮುಳಬಾಗಲು: ತಾಲೂಕಿನ ಕುರುಡುಮಲೆ ಗ್ರಾಮದ ಪುರಾತನ ಚನ್ನಕೇಶವಸ್ವಾಮಿ ದೇವಾಲಯದ ಜೀಣೋದ್ಧಾರದ ವೇಳೆ ಸುಮಾರ 800 ವರ್ಷಗಳ ಹಿಂದಿನ ಪೂಜಾ ಸಾಮಗ್ರಿಗಳು ದೊರೆತಿವೆ.
ಶುಕ್ರವಾರ ದೇವಾಲಯದ ಮುಂಭಾಗದಲ್ಲಿ ಅಗಿಯುವ ವೇಳೆಯಲ್ಲಿ ಒಂದು ಕೆಜಿಗೂ ಹೆಚ್ಚಿನ ತೂಕದ ಶಟಗೋಪುರ, ಕಾಲು ಕೆಜಿ ತೂಕದ ಎರಡು ತುಪ್ಪದ ಆರತಿ ತಟ್ಟೆ, ಕರ್ಪೂರದ ಆರತಿ ತಟ್ಟೆ ಹಾಗೂ ಗಂಟೆ ಸಿಕ್ಕಿದೆ. ಇವೆಲ್ಲವೂ ಸುಂದರವಾಗಿ ಕಲಾತ್ಮತವಾಗಿ ಮತ್ತು ಆಕರ್ಷಕವಾಗಿದ್ದು, ಪಂಚಲೋಹಗಳಿಂದ ಮಾಡಲಾಗಿದೆ ಎಂದು ಗ್ರಾಮದ ಕೆ.ವಿ. ವಿಜಯಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಸುಮಾರು ಎಂಟು ನೂರು ವರ್ಷಗಳ ಹಿಂದೆ ಇಳುವಂಜಿ ವಾಸುದೇವರಾಯ ಮತ್ತು ಆತನ ಮಕ್ಕಳು ದೇವಾಲಯ ಚನ್ನಕೇಶವ ದೇವಾಲಯ ನಿರ್ಮಿಸಿದ್ದರು. ಕುರುಡುಮಲೆಯು ಹೊಯ್ಸಳ ರಾಜರ ಎರಡನೇ ರಾಜದಾನಿಯಾಗಿದ್ದ. ಆಗಿನ ಕಾಲ ವೈಷ್ಣವ ಸಾಂಪ್ರದಾಯದ ಉಚ್ಛ್ರಾಯ ಸ್ಥಿತಿಯ ಕಾಲವಾಗಿತ್ತು ಕೋಲಾರ ಪುರಾತನ ದೇವಾಲಯಗಳ ಕುರಿತು ಸಂಶೋಧನೆ ನಡೆಸಿರುವ ಪ್ರೊ. ಕೆ.ಆರ್.ನರಸಿಂಹನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.