ಕೋಲಾರ

ಜನರ ಪರ ದನಿ ಎತ್ತಲು ಜೆಡಿಎಸ್ ಅಭ್ಯರ್ಥಿಯಆಶೀರ್ವದಿಸಿ

Published On :

ಟೇಕಲ್: ರಾಷ್ಟ್ರೀಯ ಪಕ್ಷಗಳು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿಲ್ಲ. ಕೇಂದ್ರದಲ್ಲಿ ಜನತೆಯ ಪರ ದನಿ ಎತ್ತಬೇಕಾದರೆ ಜೆಡಿಎಸ್ ಅಭ್ಯರ್ಥಿ ಕೇಶವ ಅವರನ್ನು ಬೆಂಬಲಿಸಬೇಕು ಎಂದು ಶಾಸಕ ಮಂಜುನಾಥಗೌಡ ಹೇಳಿದರು.
ತೊರಲಕ್ಕಿಯಲ್ಲಿ ನೂಟವೆ, ರಾಜೇನಹಳ್ಳಿ ಗ್ರಾಪಂಗಳ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಕ್ಷೇತ್ರಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಮಾಲೂರಿನ 'ಮನೆ ಮಗ' ಕೇಶವ್ ಅವರಿಗೆ ಈ ಬಾರಿ ನೀವು ಆಶೀರ್ವಾದ ಮಾಡಬೇಕು ಎಂದು ತಿಳಿಸಿದರು. ಬಳಿಕ ಅಭ್ಯರ್ಥಿ ಕೇಶವ, ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿದರು. ತೊರಲಕ್ಕಿಯಲ್ಲಿ ಜೆಡಿಎಸ್ ಯುವ ಕಾರ್ಯಕರ್ತರಿಂದ ಅಭ್ಯರ್ಥಿ ಕೇಶವ, ಶಾಸಕ ಮಂಜುನಾಥಗೌಡ, ಕೆ.ವೈ.ನಂಜೇಗೌಡರಿಗೆ ಬಾರಿ ಹೂವಿನ ಹಾರ ಹಾಕಿ ಅಭಿನಂದಿಸಲಾಯಿತು.
 ಇದೇ ಸಂದರ್ಭದಲ್ಲಿ ತೊರಲಕ್ಕಿ, ಹುಳದೇನಹಳ್ಳಿ, ಸಂತೆಹಳ್ಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಲಾಯಿತು. ಪ್ರಚಾರದ ಸಮಯದಲ್ಲಿ ಕೆಲವು ಕಡೆ, ಬಿಜೆಪಿ ತೊರೆದು  ಜೆಡಿಎಸ್ಗೆ ಸೇರ್ಪಡೆಯಾದರು. ಶಾಸಕ ಮಂಜುನಾಥಗೌಡ ಅವರನ್ನು ಬರಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.