ನೀತಿ ಸಂಹಿತೆ: ಸಾರ್ವಜನಿಕರಿಗೆ ಸಮಸ್ಯೆ
ಹುಳಿಯಾರು: ತಪಾಸಣೆ ವೇಳೆ ವಾಹನಗಳಲ್ಲಿ ಅಧಿಕ ಮೊತ್ತದ ಹಣ ಕೊಂಡೊಯ್ಯುತಿದ್ದ ಆರೋಪದಡಿ ಕುರಿ ವ್ಯಾಪಾರಿಗಳನ್ನು ಚುನಾವಣಾ ನೀತಿ ಸಂಹಿತೆಯಡಿ ಅಧಿಕಾರಿಗಳು ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದ ಬಳಿಕ ಸತ್ಯ ಸಂಗತಿಯನ್ನು ಅರಿತು ನಂತರ ಬಿಡುಗಡೆ ಮಾಡಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ಜರುಗಿದೆ.
ಪ್ರತಿ ಶುಕ್ರವಾರ ಹಾಸನ ಜಿಲ್ಲೆ ಅರಸೀಕೆರೆ ಹಾಗೂ ಗಂಡಸಿ ಭಾಗದ ವ್ಯಾಪಾರಸ್ಥರು ಬಳ್ಳಾರಿ ಹಾಗೂ ಹೊಸಪೇಟೆ ಸುತ್ತಮುತ್ತಲ ರೈತರಿಂದ ಕುರಿಗಳನ್ನು ಕೊಂಡು ತರಲು ಹುಳಿಯಾರು ಮೂಲಕ ಹೋಗುತ್ತಿರುವುದು ಮಾಮೂಲಿಯಾಗಿದ್ದು, ಎಂದಿನಂತೆ ಮುಂಜಾನೆ ಈ ಮಾರ್ಗವಾಗಿ ಹಣದ ಸಮೇತ ತೆರಳುತ್ತಿದ್ದರು. ಮಾದರಿ ನೀತಿ ಸಂಹಿತೆ ಜಾರಿಯಿರುವ ಹಿನ್ನೆಲೆಯಲ್ಲಿ ಚುನಾವಣಾ ವಿಶೇಷ ಜಾಗೃತ ದಳದ ಸಹಾಯಕ ಚುನಾವಣಾ ಅಧಿಕಾರಿ ಪ್ರಕಾಶ್ ತಂಡ ಸುಮಾರು 40 ಮಂದಿ ಸೇರಿದಂತೆ 10 ವಾಹನಗಳನ್ನು ಹಿಡಿದು ತಪಾಸಣೆಗೆ ಒಳಪಡಿಸಿದರಲ್ಲದೆ ಕುರಿಗಳನ್ನು ಕೊಂಡು ತರಲೆಂದು ಅವರು ತಮ್ಮ ಜೊತೆ ಒಯ್ದಿದ್ದ ರು. 23 ಲಕ್ಷವನ್ನು ವಶಪಡಿಸಿಕೊಂಡರು.
ಸ್ಪಷ್ಟನೆ: ತಾವು ಪ್ರತಿ ಶುಕ್ರವಾರ ಕುರಿಗಳನ್ನು ಕೊಳ್ಳಲು ತಮ್ಮ ವಾಹನಗಳ ಜತೆ ಹೋಗುವುದು ಮಾಮೂಲಿಯಾಗಿದ್ದು, ಆ ಬಗ್ಗೆ ಹಲವು ದಾಖಲೆಗಳನ್ನು ತೋರಿಸಿ ಸ್ಪಷ್ಟಪಡಿಸಿದರೂ ಸಹ ಸಹಾಯಕ
ಚುನಾವಣಾ ಅಧಿಕಾರಿ ಪ್ರಕಾಶ್ ಈ ಬಗ್ಗೆ ಆಲಿಸದೆ ಪೊಲೀಸ್ ಠಾಣೆಗೆ ನಮ್ಮನೆಲ್ಲಾ ಕರೆ ತಂದು ತೊಂದರೆ ನೀಡಿದರು ಎಂದು ವ್ಯಾಪಾರಸ್ಥರು ದೂರಿದರು. ನಂತರ ಹಣ ತಮ್ಮದೇ ಎಂಬುದನ್ನು ಖಾತ್ರಿ ಪಡಿಸಿ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ ನಂತರ ಅವರನ್ನು ಕಳುಹಿಸಲಾಯಿತು.
ಮುಂಜಾನೆಯಿಂದ ಘಟನೆಯ ಬಗ್ಗೆ ಗಮನಿಸುತ್ತಿದ್ದ ಸಾರ್ವಜನಿಕರು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುಗ್ಧ ಸಾರ್ವಜನಿಕರನ್ನು ಹಿಡಿದು ಈ ರೀತಿ ತೊಂದರೆ ಕೊಡುತ್ತಿರುವುದನ್ನು ಖಂಡಿಸಿದ್ದು, ಈ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಚುನಾವಣಾ ನೀತಿ ಸಂಹಿತೆ ನೆಪವೊಡ್ಡಿ ಮುದುವೆ, ಸಭೆ ಸಮಾರಂಭ, ಜಾತ್ರೆಗಳನ್ನು ನಡೆಸದಂತೆ ಮುಂದೂಡುತ್ತಾ ತೊಂದರೆ ಕೊಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

