ನಾಲ್ವರು ಪಕ್ಷೇತರರ ಉಮೇದುವಾರಿಕೆ ವಾಪಸ್
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಒಟ್ಟು 23 ಅಭ್ಯರ್ಥಿಗಳಲ್ಲಿ ನಾಲ್ವರು ಪಕ್ಷೇತರರು ನಾಮಪತ್ರ ವಾಪಸ್ ಪಡೆದು ಅಂತಿಮವಾಗಿ 19 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಗಂಗಪ್ಪ, ಓಬಳಪ್ಪ, ಶ್ರೀರಾಮರೆಡ್ಡಿ, ಅಂಜನಾಮೂರ್ತಿ ನಾಮಪತ್ರವನ್ನು ವಾಪಸ್ ಪಡೆದರು. ಇದರಿಂದ ಕಣದಲ್ಲಿ ಒಟ್ಟು 19 ಮಂದಿ ಕಣದಲ್ಲಿ ಉಳಿದಂತಾಗಿದೆ. ಮತದಾನದ ವಿದ್ಯುನ್ಮಾನ ಯಂತ್ರದಲ್ಲಿ 15 ಮಂದಿ ಅಭ್ಯರ್ಥಿಗಳು ಹೆಸರು ಮತ್ತು ಮೇಲಿನ ಯಾರೂ ಇಷ್ಟ ಎನ್ನುವುದಕ್ಕೆ ಸಂಬಂಧಪಟ್ಟಂತೆ ಒಂದು ಸೇರಿದಂತೆ ಒಟ್ಟು 16 ಬಟನ್ ಗಳಿರಲಿದೆ. ಆದರೆ, ಇಲ್ಲಿ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದಿರುವುದರಿಂದ ಒಟ್ಟು 20 ಬಟನ್ಗಳ ವ್ಯವಸ್ಥೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಒಂದು ಮತಗಟ್ಟೆಗೆ 2 ವಿದ್ಯುನ್ಮಾನ ಮತಯಂತ್ರಗಳು ಬೇಕಾಗಿದೆ.
ಲಿಂಗ ತಾರತಮ್ಯ ಹೋಗಲಾಡಿಸಿ: ನ್ಯಾ.ವಿ. ನಾಗಮಣಿ
ಗೌರಿಬಿದನೂರು: ಗಂಡು ಮತ್ತು ಹೆಣ್ಣು ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನು ಅರಿತು ಅಸಮತೋಲನ ಉಂಟಾಗದಂತೆ ನೋಡಿಕೊಂಡಾಗ ನವ ಸಮಾಜ ನಿರ್ಮಿಸಿದಂತಾಗುತ್ತದೆ ಎಂದು ಹೆಚ್ಚುವರಿ ಸಿವಿಲ್ನ್ಯಾಯಾದೀಶರಾದ ವಿ. ನಾಗಮಣಿ ಅಭಿಪ್ರಾಯ ಪಟ್ಟರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭ್ರೂಣ ಹತ್ಯೆ ನಿಷೇಧ ಕಾಯ್ದೆ ವಿಷಯದ ಬಗ್ಗೆ ಕಾನೂನಿನ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಸಿವಿಲ್ನ್ಯಾಯಾಧೀಶಾರಾದ ಬಿ.ಕೆ. ರವಿಕಾಂತರವರು ಮಾತನಾಡಿದರು. ಆರೋಗ್ಯ ಅಧಿಕಾರಿ ಸಿ. ಆನಂದ ಕುಮಾರ್ ಮಾತನಾಡಿದರು. ಸಹಾಯಕ ಅಭಿಯೋಜಕ ಎಂ.ವಿ. ತ್ಯಾಗರಾಜ್, ಶಿಲ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

