ಕೋಲಾರ

ಸೇನಾ ತುಕಡಿಗಳ ಪಥ ಸಂಚಲನ

Published On :

ಮಾಲೂರು: ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಕೇಂದ್ರ ಕೈಗಾರಿಕಾ ರಕ್ಷಣಾ ಸೇನಾ ತುಕಡಿಗಳು ಪಥ ಸಂಚಲನ ನಡೆಸಿದವು. ತಾಲೂಕಿನ ಹುಂಗೇನಹಳ್ಳಿ, ತೂರ್ನಹಳ್ಳಿ, ಜಕ್ಕಸಂದ್ರ, ಮಾಲೂರು ಪಟ್ಟಣ, ಕೋಡಿಹಳ್ಳಿ, ಲಕ್ಕೂರು ಮತ್ತಿತರ ಕಡೆ ಪಥ ಸಂಚಲನ ನಡೆಸಿದರು. ತುಕಡಿಯ ನೇತೃತ್ವ ವಹಿಸಿದ್ದ ಸ್ಥಳೀಯ ಇನ್ಸ್ಪೆಕ್ಟರ್ ಶಿವಕುಮಾರ್ ಈ ಸಂಧರ್ಭದಲ್ಲಿ ಮಾತನಾಡಿ, ಚುನವಣೆ ನ್ಯಾಯ ಸಮ್ಮತವಾಗಿ ನಡೆಯಲು ಸಹಕಾರಿಯಾಗಲು ಸೇನಾ ತುಕಡಿಗಳನ್ನು ನಿಯೋಜಿಸಲಾಗಿದ್ದು, ಸಮಾಜ ಘಾತಕರಿಗೆ ಎಚ್ಚರಿಕೆ ನೀಡುವ ಜತೆಗೆ ಮತದಾರರು ನಿರ್ಭಿತಿಯಿಂದ ಮತದಾನದಲ್ಲಿ ಪಾಲ್ಗೂಳುವಂತೆ ಮಾಡುವ ಉದ್ದೇಶದಿಂದ ಪಥ ಸಂಚಲನ ಮಾಡಲಾಗುತ್ತಿದೆ. ಮತಗಟ್ಟೆ ಸ್ಥಾಪನೆಯಾಗುವವರೆಗೂ ಕಮ್ಯಾಂಡೋ ಗಳನ್ನು ಟೋಲ್ಗೇಟ್ಗಳಲ್ಲಿ ಹಾಗೂ ಗಲಾಟೆ ಸಂಭವಿಸಬಹುದಾದ ಸ್ಥಳದಲ್ಲಿ ನಿಯೋಜಿಸಲಾಗುತ್ತದೆ ಎಂದರು.



ಕಾಡಾನೆಗಳು ಪ್ರತ್ಯಕ್ಷ; ರೈತರ ಬೆಳೆ ನಾಶ
ಟೇಕಲ್: ಮಾಲೂರು ತಾಲೂಕಿನ ತಮಿಳುನಾಡು ಗಡಿಭಾಗದಲ್ಲಿ ಸುಮಾರು 40ಕ್ಕೂ ಹೆಚ್ಚು ಕಾಡಾನೆಗಳು ಮೂರುದಿನಗಳಿಂದ ಬೀಡುಬಿಟ್ಟಿದ್ದು ಅಣಿಕರಳ್ಳಿ ಬಳಿ ಬುಧವಾರ ರಾತ್ರಿ ಕಾಣಿಸಿಕೊಂಡಿವೆ.
ಕಾಡಾನೆಗಳು ರೈತರ ಟೊಮೇಟೋ ತೋಟಗಳಿಗೆ ನುಗ್ಗಿ ನಾಶ ಮಾಡಿವೆ. ನೀರು ಹುಡುಕುತ್ತಾ ಸೊಣ್ಣಪ್ಪನಟ್ಟಿ, ದಿನ್ನಹಳ್ಳಿ ಬಳಿ ಗುರುವಾರ ರಾತ್ರಿ ಪ್ರತ್ಯಕ್ಷಗೊಂಡಿದ್ದು ದಿನ್ನಹಳ್ಳಿ ಗ್ರಾಮಸ್ಥರು ತಮಟೆ ಭಾರಿಸಿ, ಪಟಾಕಿ ಸಿಡಿಸಿ ಮತ್ತೆ ಮೂತನೂರು ಅರಣ್ಯ ಪ್ರದೇಶಕ್ಕೆ ಓಡಿಸಿದ್ದಾರೆ. ತಮಿಳುನಾಡು ಗಡಿ ಕರ್ನಾಟಕ ಮಧ್ಯಭಾಗದ ಗುಡ್ಡಗಾಡು ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಓಡಿಸಲು ಅರಣ್ಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದು ಮಾಲೂರು ತಾಲೂಕು ವಲಯ ಅರಣ್ಯಾಧಿಕಾರಿ ಶ್ರೀನಿವಾಸಮೂರ್ತಿ, ಬಂಗಾರಪೇಟೆ ತಾಲೂಕು ಅಧಿಕಾರಿ ಚಿನ್ನಪ್ಪಯ್ಯ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.