ಕೋಲಾರದಲ್ಲಿ 22 ಅಭ್ಯರ್ಥಿಗಳು ಕಣದಲ್ಲಿ
ಕೋಲಾರ: ಜೆಡಿಎಸ್ ಬಂಡಾಯ ಅಭ್ಯರ್ಥಿ ಎಸ್.ಬಿ. ಮುನಿವೆಂಕಟಪ್ಪರನ್ನು ಚುನಾವಣಾ ಕಣದಿಂದ ವಾಪಸ್ ಕರೆಸಿಕೊಳ್ಳುವಲ್ಲಿ ಪಕ್ಷದ ಮುಖಂಡರು ಸಫಲರಾಗಿದ್ದಾರೆ.
ನಿನ್ನೆವರೆಗೂ ಯಾವುದೇ ಮುಖಂಡರು ಸಂಪರ್ಕಿಸದ ಕಾರಣ ಕಣದಲ್ಲಿ ಉಳಿಯಲು ಜಿಪಂ ಸದಸ್ಯರೂ ಆದ ಎಸ್.ವಿ. ಮುನಿವೆಂಕಟಪ್ಪ ನಿರ್ಧರಿಸಿದ್ದರಾದರೂ ಶನಿವಾರ ಜೆಡಿಎಸ್ ಜಿಲ್ಲಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಜಿಪಂ ಸದಸ್ಯೆ ಮಂಗಮ್ಮ ಮುನಿಸ್ವಾಮಿ, ನಗರಸಭೆ ಸದಸ್ಯರಾದ ಮುರಳಿಗೌಡ, ರವೀಂದ್ರ, ಅಪ್ರೋಜ್ಪಾಷ ಇತರರು ಎಸ್.ಬಿ.ಎಂ ಮನೆಗೆ ತೆರಳಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಭರವಸೆ ಹಾಗೂ ಸಂದೇಶ ತಿಳಿಸಿ ಪಕ್ಷಕ್ಕೆ ಸಹಾಯ ಕೋರಿದ್ದರಿಂದ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.
ಇದರಿಂದಾಗಿ ಜೆಡಿಎಸ್ ಅಭ್ಯರ್ಥಿ ಕೆ. ಕೇಶವರವರಿಗೆ ಕೊಂಚ ಮಟ್ಟಿಗೆ ರಿಲೀಪ್ ಸಿಕ್ಕಿದಂತಾಗಿದೆ. ಎಸ್.ಬಿ. ಮುನಿವೆಂಕಟಪ್ಪ ಪಕ್ಷದ ಮುಖಂಡರ ಮಾತಿಗೆ ಮಣಿದು ನಾಮಪತ್ರ ಹಿಂದಕ್ಕೆ ಪಡೆದಿರುವುದಲ್ಲದೆ, ಕೇಶವ ಪರ ಪ್ರಚಾರ ಮಾಡುವುದಕ್ಕೂ ಒಪ್ಪಿದ್ದಾರೆ.
ಇನ್ನು ಚಿಂತಾಮಣಿಯ ಕೆ. ಕೇಶವ ಎಂಬುವರು ನಾಮಪತ್ರ ಹಿಂದಕ್ಕೆ ಪಡೆದಿರುವುದರಿಂದ ಜೆಡಿಎಸ್ ಮುಖಂಡರು ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟು 26 ಅಭ್ಯರ್ಥಿಗಳ ಪೈಕಿ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದ ಎಸ್.ಬಿ. ಮುನಿವೆಂಕಟಪ್ಪ, ಚಿಂತಾಮಣಿ ಕೆ. ಕೇಶವ, ಎಸ್. ಮುನಿಸ್ವಾಮಿ ಹಾಗೂ ನಾರಾಯಣಸ್ವಾಮಿ ಎಂಬುವರು ನಾಮಪತ್ರ ಹಿಂದಕ್ಕೆ ಪಡೆದಿರುವುದರಿಂದ ಅಂತಿಮ ಕಣದಲ್ಲಿ 22 ಮಂದಿ ಉಳಿದಂತಾಗಿದೆ.
ಸಧ್ಯದ ಪರಿಸ್ಥಿತಿ ಗಮನಿಸಿದರೆ ಕೋಲಾರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಆಮ್ಆದ್ಮಿಯನ್ನು ಲಘುವಾಗಿ ಪರಿಣಿಸುವಂತಿಲ್ಲ, ಯುಗಾದಿ ಹಬ್ಬದ ನಂತರ ಕ್ಷೇತ್ರದಲ್ಲಿ ಚುನಾವಣೆಯ ಕಾವು ಬಿರುಸಾಗುವ ಸಾಧ್ಯತೆಗಳಿದ್ದು ಈ ಬಾರಿ ಕ್ಷೇತ್ರದ ಒಡೆಯ ಯಾರಾಗುತ್ತಾರೆಂಬುದು ಕುತೂಹಲ ಕೆರಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

