ಚುನಾವಣಾ ಏಜೆಂಟರ ನೇಮಕ
ಚಿಕ್ಕಬಳ್ಳಾಪುರ: ತಾಪಂ ಮಾಜಿ ಉಪಾಧ್ಯಕ್ಷ ಕೆ.ಆರ್. ರೆಡ್ಡಿಯವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಚುನಾವಣಾ ಏಜೆಂಟರನ್ನಾಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇಮಕ ಮಾಡಿದ್ದಾರೆಂದು ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ತಿಳಿಸಿದ್ದಾರೆ.
ನೂತನ ಪದಾಧಿಕಾರಿಗಳ ಆಯ್ಕೆ
ಬಾಗೇಪಲ್ಲಿ: ಪಟ್ಟಣದ ಕೆ.ವಿ. ವಿದ್ಯಾಶಾಲೆಯಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಗಂಗಾಧರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಘದ ಬಾಗೇಪಲ್ಲಿ ಯುವ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಲಕ್ಷ್ಮಣರೆಡ್ಡಿ, ಉಪಾಧ್ಯಕ್ಷರಾಗಿ ಎಸ್.ಎಸ್. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಜಬೀವುಲ್ಲಾ, ಕಾರ್ಯದರ್ಶಿ ಮುನಿರಾಜು, ಖಜಾಂಚಿ ನಾಗೇಂದ್ರ, ಸಂಘಟನಾ ಸಲಹೆಗಾರರಾಗಿ ಸಿದ್ದಿಕ್, ಸದಸ್ಯರಾಗಿ ವಿಷ್ಣುವರ್ಧನ, ಮಂಜುನಾಥ, ಮುನಿರಾಜು, ರೆಡ್ಡಪ್ಪ, ಮಹಮ್ಮದ್ ಜೆ.ಬಿ, ಮಹೇಶ್ ಬಾಬು,ಶ್ರೀಕಾಂತ್,ಭಾಷಾ ಆಯ್ಕೆಯಾಗಿದ್ದಾರೆ.
ಚಿಕ್ಕಬಳ್ಳಾಪುರ: ಕಣದಲ್ಲಿರುವ ಅಭ್ಯರ್ಥಿಗಳು
ಎಂ. ವೀರಪ್ಪ ಮೊಯ್ಲಿ(ಕಾಂಗ್ರೆಸ್), ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್), ಬಿ.ಎನ್. ಬಚ್ಚೇಗೌಡ (ಬಿಜೆಪಿ), ಆರ್ಕೇಶ್ (ಎಎಪಿ), ರಾಮಕೃಷ್ಣಾರೆಡ್ಡಿ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಯಾಕುಬ್ ಶರೀಫ್ (ಬಹುಜನ ಮುಕ್ತಿ ಪಾರ್ಟಿ), ಜಿ.ಕೆ.ಸಿ. ರೆಡ್ಡಿ (ಜೆಡಿಯು), ಜಿ.ವಿ.ಶ್ರೀರಾಮರೆಡ್ಡಿ (ಸಿಪಿಐಎಂ), ರಾಬಿನ್ ಮಾಥ್ಯೂಸ್ ನರೆಕಟ್ಟು(ಎಸ್ಪಿ), ಚಿತ್ರಪ್ರಸಾದ್ (ಬಿಎಸ್ಪಿ), ವೆಂಕಟರಮಣ(ಆರ್ಪಿಐ) ಪಕ್ಷೇತರ ಗೋಪಾಲಗೌಡ, ಜಿ.ಎನ್. ರವಿ, ನರಸಿಂಹಮೂರ್ತಿ, ಡಿ.ಟಿ. ವೆಂಕಟೇಶ್, ಟಿ.ವಿ. ಮಂಜುನಾಥ್ ಗೌಡ, ಜಯಪ್ರಕಾಶ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

