ಕೋಲಾರ

ಚಂದ್ರಬಾಬುನಾಯ್ಡು ಮತ್ತೆ ಸಿಎಂ: ವೈ. ರಾಮಕ್ಕ ವಿಶ್ವಾಸ

Published On :

ಕೆಜಿಎಫ್: ಆಂಧ್ರಪ್ರದೇಶದಲ್ಲಿ ಟಿಡಿಪಿ ಹಾಗೂ ಬಿಜೆಪಿ ಮೈತ್ರಿಕೂಟ ತೆಲಂಗಾಣ ಹಾಗೂ ಸೀಮಾಂಧ್ರ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿ ಸರ್ಕಾರವನ್ನು ರಚಿಸಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬುನಾಯ್ಡು ಮುಖ್ಯಮಂತ್ರಿಯಾಗಿ ಆಂಧ್ರಪ್ರದೇಶದ ಅಭಿವೃದ್ಧಿಯ ಮತ್ತೊಂದು ಅಧ್ಯಾಯ ಆರಂಭವಾಗಲಿದೆ ಎಂದು ಶಾಸಕಿ ವೈ. ರಾಮಕ್ಕ ತಿಳಿಸಿದರು.
 ಕ್ಷೇತ್ರದ ಆಂಧ್ರಪ್ರದೇಶದ ಗಡಿಭಾಗದ ಕುಪ್ಪಂ ರಸ್ತೆಗೆ ಸಂಪರ್ಕಿಸುವ 2.83 ಕೋಟಿ ವೆಚ್ಚದ 5.7 ಕಿಮೀ ಚೊಕ್ಕರಬಂಡೆ, ದೊಡ್ಡಕಂಬಳಿ, ಕೀಳಕಂಬಳಿ, ಬೈರೇನಹಳ್ಳಿ ಮುಖಾಂತರ ಕುಪ್ಪಂ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ದೇಶದ ಹಲವು ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಕಲ್ಪಿಸಿ ಗ್ರಾಮಗಳ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳು ಇಂದಿಗೂ ದೇಶದ ಗ್ರಾಮಿಣ ಭಾಗದ ಜನತೆ ಮರೆಯಲು ಸಾಧ್ಯವಿಲ್ಲ ಎಂದರು.
ಆಂಧ್ರಪ್ರದೇಶದ ಸೀಮಾಂಧ್ರ ಭಾಗದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬುನಾಯ್ಡು ಕೆಜಿಎಫ್ ಕ್ಷೇತ್ರದ ಗಡಿಭಾಗಕ್ಕೆ ಸಂಪರ್ಕಿಸುವ ಕುಪ್ಪಂ ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ ಆಯ್ಕೆಯಾದ ನಂತರ ಕುಪ್ಪಂ ಕ್ಷೇತ್ರದಲ್ಲಿ ಜಾರಿಗೊಂಡ ಅಭಿವೃದ್ಧಿ ಯೋಜನೆಗಳು, ಕೈಗಾರಿಕೆಗಳಿಂದ ಕೆಜಿಎಫ್ ಕ್ಷೇತ್ರದ ಸಾವಿರಾರು ನಿರುದ್ಯೋಗಗಳಿಗೆ ಈ ಭಾಗದಲ್ಲಿ ಉದ್ಯೋಗವಕಾಶ ದೊರೆತಿದೆ ಈ ಬಾರಿ ಸಹ ಕುಪ್ಪಂ ಕ್ಷೇತ್ರದಲ್ಲಿ ಅವರೇ ಜಯಗಳಿಸುವ ಮೂಲಕ ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಡಿಭಾಗದ ಗ್ರಾಮಗಳ ಅಭಿವೃದ್ಧಿಯಾಗಳಿದೆ. ಈ ಹಿಂದೆ ಚಂದ್ರಬಾಬುನಾಯ್ಡು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕುಪ್ಪಂನಿಂದ ಕೆಜಿಎಫ್ ಕ್ಷೇತ್ರದ ಮೂಲಕ ಸಂಪರ್ಕಿಸುವ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾನ ರಸ್ತೆ ಅಭಿವೃದ್ಧಿಯಾಗಲು ಅವರ ಕೊಡುಗೆ ಅಪಾರ ಎಂದರು.
ಈ ವೇಳೆ ಮಾಜಿ ಶಾಸಕ ವೈ. ಸಂಪಂಗಿ, ಮುಖಂಡರಾದ ಧಶರತರೆಡ್ಡಿ, ಮುನಿಸ್ವಾಮಿರೆಡ್ಡಿ, ಕೃಷ್ಣಮೂರ್ತಿ, ರಾಮಕೃಷ್ಣರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.