ನಗರದ ವಾರ್ಡ್ಗಳಲ್ಲಿ ಬೋರ್ವೆಲ್: ಭಕ್ತವತ್ಸಲಂ
ಕೆಜಿಎಫ್: ಎರಡು ದಿನಗಳಿಂದ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಆದರೆ ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಮಳೆಯಿಲ್ಲ. ಬೇಸಿಗೆ ಬೇಗೆಯಲ್ಲಿ ಜನರು ನೀರಿಗೆ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ನಗರಸಭೆಗೆ ಕುಡಿಯುವ ನೀರು ಸಮಸ್ಯೆಗೆ ಬಿಡುಗಡೆ ಮಾಡಿರುವ 1.15 ಕೋಟಿ ಅನುದಾನದಲ್ಲಿ ಕೆಳವೆ ಬಾವಿಗಳನ್ನು ಕೊರೆಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆಗ ಬಗ್ಗೆ ಚರ್ಚಿಸಲು ಅಧ್ಯಕ್ಷ ಎಂ.ಭಕ್ತವತ್ಸಲಂ ನೇತೃತ್ವದಲ್ಲಿ ನಗರಸಭೆ ಆವರಣದಲ್ಲಿ ಕರೆದಿದ್ದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನೀರಿಗೆ ಹೆಚ್ಚು ಸಮಸ್ಯೆ ಇರುವ ವಾರ್ಡ್ಗಳಲ್ಲಿ ಎರಡು ಕೊಳವೆ ಬಾವಿ ಸೇರಿದಂತೆ ಒಟ್ಟು 70 ಕೊಳವೆ ಬಾವಿಗಳನ್ನು ಕೊರೆಸಿ, ಪಂಪ್ ಮತ್ತು ಮೋಟಾರ್ ಅಳವಡಿಸಲಾಗುವುದು. ಕೆಲವೆಡೆ ಬೋರ್ವೆಲ್ಗಳು ಕೆಟ್ಟಿವೆ. ಅಂಥ ಬೋರ್ವೆಲ್ಗಳನ್ನು ದುರಸ್ತಿಗೊಳಿಸಲಾಗುವುದು ಎಂದರು.
ವಿಶ್ವ ಬ್ಯಾಂಕ್ನಿಂದ ನಗರಸಭೆ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಯಾದ 22 ಕೋಟಿ ಹಣದಲ್ಲಿ 5 ಕೋಟಿ ಹಣ ಉಳಿದಿದೆ. ಈ ಹಣದಲ್ಲಿ ಕೃಷ್ಣಾವರಂ ಮತ್ತು ನಾಗಾವರಂ ಪ್ರದೇಶದಲ್ಲಿ ನೀರಿನಾಂಶ ಹೆಚ್ಚಿಗೆ ಇರುವ ಕಾರಣದಿಂದ ಈ ಭಾಗದಲ್ಲಿ 10 ಕೊಳವೆ ಬಾವಿಗಳನ್ನು ಕೊರೆಸಿ, ಓವರ್ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು ಎಂದರು.
ನಗರಸಭಾ ವ್ಯಾಪ್ತಿಯ 35 ವಾರ್ಡ್ಗಳಲ್ಲಿ ವಾಟರ್ ಪ್ಯೂರಿಫೈ ಘಟಕಗಳನ್ನು ಸ್ಥಾಪಿಸಿ, ಶುದ್ದೀಕರಣಗೊಳಿಸಿದ 20 ಲೀ. ಕ್ಯಾನ್ ನೀರು 5 ರೂಗೆ ಮಾರಾಟ ಮಾಡಲಾಗುವುದು. ಈ ಬಗ್ಗೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕೌನ್ಸಿಲ್ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು. ನಗರಸಭೆ ಉಪಾಧ್ಯಕ್ಷ ದಾಸ್ ಚಿನ್ನಸವರಿ ಮಾತನಾಡಿದರು.
ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರ ಶ್ರೀಧರ್, ವ್ಯವಸ್ಥಾಪಕ ನಂಜುಂಡಪ್ಪ, ಆರೋಗ್ಯಾಧಿಕಾರಿ ಅಖಿಲಾಬಾನು, ನಗರಸಭೆ ಸದಸ್ಯರಾದ ದಾವಿದ್, ಜಿ.ಕುಮಾರ್ ಮತ್ತಿತರರು ಹಾಜರಿದ್ದರು.
ಐತಿಹಾಸಿಕ ಪಲ್ಲಕ್ಕಿ ಉತ್ಸವ ನಾಳೆ
ಟೇಕಲ್: ಟೇಕಲ್ ಮತ್ತು ತೊರಲಕ್ಕಿ ಗ್ರಾಮದಲ್ಲಿ ಐತಿಹಾಸಿಕ ಶ್ರೀ ಚೌಡೇಶ್ವರಿದೇವಿ, ಸಾಕಮ್ಮದೇವಿ ಮತ್ತು ಗಂಗಮ್ಮದೇವಿಯ 37ನೇ ವರ್ಷದ ಪಲ್ಲಕ್ಕಿ ಉತ್ಸವಗಳು ಮೇ 9ರಂದು ನೆಡಯಲಿವೆ. ಶುಕ್ರವಾರ ಬೆಳಿಗ್ಗೆ 11-30 ಗಂಟೆಯಿಂದ 12-30 ಗಂಟೆಯೊಳಗೆ ಅಭಿಜಿತ್ ಲಗ್ನದಲ್ಲಿ ಚೌಡೇಶ್ವರಿದೇವಿ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ಸಮಸ್ತ ನಂದವರಿಕಬ್ರಾಹ್ಮಣ ಕುಟುಂಬಗಳಾದ ತೊರಲಕ್ಕಿ, ನಲ್ಲತಿಮ್ಮನಹಳ್ಳಿ, ದಿನ್ನಹಳ್ಳಿ, ನಿಡಮಾಕನಹಳ್ಳಿ ಹಾಗೂ ಜಿಲ್ಲಾ ನಂದವರಿಕ ಸಂಗ ಶ್ರೀ ಲಕ್ಷ್ಮೀನಾರಾಯಣಶಾಸ್ತ್ರಿಗಳು, ವಿಶೇಷ ಅರ್ಚಕರಾದ ಟಿ.ಎ.ಮುರುಳಿಧರ್ ಶರ್ಮಾ ಅವರು ನಡೆಸಿಕೊಡಲಿದ್ದಾರೆ. ಸಕಲ ದೇವರುಗಳ ಪಲ್ಲಕ್ಕಿ ಉತ್ಸವ ಕರಗಮಹೋತ್ಸವ ನಡೆಯಲಿದೆ. ಈ ಉತ್ಸವಕ್ಕೆ ತೊರಲಕ್ಕಿ, ಚಿಕ್ಕತೊರಲಕ್ಕಿ, ಗುರುವಗೊಲ್ಲಹಳ್ಳಿ, ಹಿಂದೂ ಮುಸ್ಲಿಂ ಮೈತ್ರಿಕೂಟ ಮತ್ತು 44 ಗ್ರಾಮಗಳ ಪಾಳೆಪಟ್ಟು ಸೇರಿ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಲೆಂದು ದೇವಾಲಯದ ಸಮಿತಿ ತಿಳಿಸಿದೆ.
ಚಾರಣ ಮುಗಿಸಿದ ವಿದ್ಯಾರ್ಥಿಗಳು
ಮುಳಬಾಗಲು: ತಾಲೂಕಿನ ಅವಣೆ ಗ್ರಾಮದ ಹಳೇ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಅವಣೆ ಬೆಟ್ಚದಲ್ಲಿ ಮಂಗಳವಾರ ರಾತ್ರಿ ಚಾರಣ ಮುಗಿಸಿ ಮರಳಿದರು. ದೈಹಿಕ ಸಂಘದ ವತಿಯಿಂದ ಚಾರಣ ಏರ್ಪಡಿಸಲಾಗಿತ್ತು. ಶಿಬಿರದ ಕುರಿತು ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಣ ಸಂಯೋಜಕ ಲಕ್ಷಣಪ್ಪ, ಮುಖ್ಯ ಶಿಕ್ಷಕ ಬ್ಯಾಟಪ್ಪ, ನಿವೃತ್ತ ಸಿಆರ್ಪಿ ರಾಧಕೃಷ್ಣ, ಶಿಕ್ಷಕರಾದ ಪ್ರಕಾಶ್, ಚಂದ್ರಪ್ಪ, ಕೋಲಾರ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ರಾಜ್ಯ ಪ್ರತಿನಿಧಿ ಆರ್.ನಾರಾಯಣಸ್ವಾಮಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ದೈಹಿಕ ಶಿಕ್ಷಕರಾದ ಎನ್.ನಾಗೇಶ್, ಲೀಲಾ, ಶಶಿಕಲಾ, ರಮೇಶ್, ವಿನೋದಬಾಬು ಮುಂತಾದವರು ಭಾಗವಹಿಸಿದ್ದರು.
ಸ್ವಾತಂತ್ರ್ಯ ಹೋರಾಟಗಾರ
ಚೆಂಗಲರಾವ್ ನಿಧನ
ಶಿಡ್ಲಘಟ್ಟ: ಸ್ವಾತಂತ್ರ್ಯ ಹೋರಾಟಗಾರ ಬಿ.ಕೆ. ಚೆಂಗಲರಾವ್(97) ಅವರು ಬುಧವಾರ ಹೃದಯಾಘಾತದಿಂದ ನಿಧನರಾದರು. ಕೊತ್ತನೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಬಚ್ಚಹಳ್ಳಿ ಗ್ರಾಮದಲ್ಲಿ ಅವರು ಅಸುನೀಗಿದ್ದು, 4 ಗಂಡು
ಮಕ್ಕಳು, 5 ಹೆಣ್ಣು ಮಕ್ಕಳು ಇದ್ದಾರೆ. ಚೆಂಗಲರಾವ್ ಆತ್ಮಕ್ಕೆ ಶಾಂತಿ ಕೋರಿ ಕಾರ್ಯನಿರತ ಪರ್ತಕರ್ತರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ರೂಪಸಿ ರಮೇಶ್ ಮತ್ತಿತರರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

