ಕೋಲಾರ

205 ಪಶುಗಳಿಗೆ ತಪಾಸಣೆ

Published On :

ಕೆಜಿಎಫ್: ಬಸವ ಜಯಂತಿ ದಿನಾಚರಣೆ ಪ್ರಯುಕ್ತ ಕರುಣಾ ಕಲ್ಯಾಣ ಸಂಘ, ಪಶು ವೈದ್ಯ ಇಲಾಖೆ ಮತ್ತು ಲಯನ್ಸ್ ಸಂಸ್ಥೆ ವತಿಯಿಂದ ಉಚಿತ ಪಶು ಚಿಕಿತ್ಸಾ ಶಿಬಿರವನ್ನು ಕೆಜಿಎಫ್‌ನ ಮದುರ ಕೇಸರಿ ಜೈನ್ ಗೋಶಾಲಯದಲ್ಲಿ ಆಯೋಜಿಸಲಾಗಿತ್ತು.
  ಬೆಂಗಳೂರಿನ ಪಶು ವೃದ್ಧಾಪ್ಯ ವೈದ್ಯರಾದ ಡಾ. ಮರುಸಬ್ ಪುಸೇನ್ ಮತ್ತು ಕೆಜಿಎಫ್ ಪಶು ಇಲಾಖೆಯ ವೈದ್ಯರಾದ ಡಾ. ಜಯರಾಮ್ ನೇತೃತ್ವದಲ್ಲಿ ಸುಮಾರು 205 ಪಶುಗಳಿಗೆ ಜಂತು ನಿವಾರಣೆ, ಬರಡು ರಾಸುಗಳ ತಪಾಸಣೆ, ಕೃತಕ ಗರ್ಭಧಾರಣೆ, ಫಲ ಪರೀಕ್ಷೆ ಮುಂತಾದ ಕಾಯಿಲೆಗಳ ತಪಾಸಣೆ ನಡೆಸಿ ಔಷದಿಗಳನ್ನು ವಿತರಿಸಲಾಯಿತು. ಅದೇ ರೀತಿ ಗಾಯಗೊಂಡ ಹಸುಗಳಿಗೆ ಮತ್ತು ಕರುಗಳಿಗೆ ಚಿಕಿತ್ಸೆ ಮಾಡಿ ಅವುಗಳಿಗೆ ಚುಚ್ಚುಮದ್ದು ನೀಡಿ ನಂತರ ಡಾ.ಮರುಸಬ್‌ಹುಸೇನ್  ಮಾತನಾಡಿದರು. ಈ ವೇಳೆ ಲಯನ್ಸ್ ಕ್ಲಬ್ ಸಂಸ್ಥೆ ಮುಖ್ಯಸ್ಥೆ ಶ್ರೀವಿದ್ಯಾ ಮಾತನಾಡಿ ಇದೇ ತಿಂಗಳು 2 ರಿಂದ 16ರ ವರೆಗೆ ಕರ್ನಾಟಕ ರಾಜ್ಯ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪಶು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಶಿಬಿರದಲ್ಲಿ ಡಾ. ನಂಜಪ್ಪ, ಡಾ. ಕೋಮಳ, ಸೇರಿದಂತೆ ಶ್ರೀ ಗುರು ಆಷೀಶ್ ಸೇವಾ ಟ್ರಸ್ಟ್‌ನ ಮುಖಂಡರಾದ ವಿಜಯ್, ಮಹಾವೀರ್‌ಜೈನ್, ಜೈನ್ ಗೋಶಾಲೆ ಸಂಘದ ಮುಖಂಡ ಆನಂದ್‌ಜೈನ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.