ಕೋಲಾರ

ವೀರಬ್ರಹ್ಮೇಂದ್ರ ಬ್ರಹ್ಮರಥೋತ್ಸವ

Published On :

ಚಿಕ್ಕಬಳ್ಳಾಪುರ: ನಗರದ ಹೊರವಲಯದ ಕಳವಾರ ಗ್ರಾಮದ ಹತ್ತಿರವಿರುವ ಪಾಪಾಘ್ನಿ ಪುಣ್ಯಕ್ಷೇತ್ರದಲ್ಲಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಗಳ ಬ್ರಹ್ಮ ರಥೋತ್ಸವ ನಡೆಯಿತು.
ಓಂಕಾರ ಜ್ಯೋತಿ ಆಶ್ರಮದ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮ ರಥೋತ್ಸವ ಮತ್ತು ಆಲಯದ 13ನೇ ವಾರ್ಷಿಕೋತ್ಸವ ಸಮಾರಂಭವನ್ನು ಅದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧಿಪತಿ ನಿರ್ಮಲಾನಂದನಾಥ ಮಹಾಸ್ವಾಮೀಜಿ  ಉದ್ಘಾಟಿಸಿದರು.
ಮೂಲತಃ ಪಾಪಾಗ್ನಿ ಕ್ಷೇತ್ರವೂ ವೀರಬ್ರಹ್ಮೇಂದ್ರ ಸ್ವಾಮಿಗಳ ನೆಲೆಸಿದ್ದ ಸ್ಥಳವಾಗಿದ್ದು ಈ ಪ್ರದೇಶವೂ ವಿಜ್ಞಾನಿಗಳ ಸ್ವರೂಪದಿಂದ ಕೂಡಿದೆ ಎಂದ ಅವರು, ಈ ಕ್ಷೇತ್ರದಲ್ಲಿ ಓಂಕಾರ್ ಜ್ಯೋತಿ ಆಶ್ರಮವನ್ನು ಜಯಮ್ಮ ಮರಿಯಪ್ಪಸ್ವಾಮಿಗಳ ಸ್ಥಾಪಿಸಿ ನಿರ್ಗತಿಕರಿಗೆ ಆಶ್ರಯದಾತರಾಗಿದ್ದಾರೆ ಎಂದು ತಿಳಿಸಿದರು.  ಅದಿಚುಂಚನಗಿರಿ ಮಠದ ಮಂಗಳಾನಂದನಾಥ ಸ್ವಾಮೀಜಿ, ಸಿದ್ಧೇಶ್ವರನಾಥ ಸ್ವಾಮೀಜಿ, ಮುಖಂಡ ಬಿ.ಎಸ್. ಸತ್ಯನಾರಾಯಣ ಮಾತನಾಡಿದರು. ಮಾಜಿ ಶಾಸಕ ಬಚ್ಚೇಗೌಡ ಅಧ್ಯಕ್ಷತೆ ವಹಿಸಿದ್ದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್, ಜಿ.ಪಂ. ಮಾಜಿ ಸದಸ್ಯ ಜಿ.ಆರ್. ನಾರಾಯಣಸ್ವಾಮಿ, ವಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ದಾಸಪ್ಪಗೌಡ, ತಾ.ಪಂ. ಮಾಜಿ ಉಪಾಧ್ಯಕ್ಷ ಕೆ.ಆರ್. ರೆಡ್ಡಿ, ಕೆ.ಸಿ. ರಾಜಕಾಂತ್ ಮುಂತಾದವರು ಭಾಗವಹಿಸಿದ್ದರು.

ಫಲಿತಾಂಶದಲ್ಲಿ ಶೇ. 2ರಷ್ಟು ಹೆಚ್ಚಳ
ಮಾಲೂರು: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು 2014 ನೇ ಸಾಲಿನ ದ್ವಿತೀಯ ಪಿಯುಸಿ ಯಲ್ಲಿ ಶೇ.74.15 ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿಗಿಂತ ಶೇ.2ರಷ್ಟು ಹೆಚ್ಚು ಫಲಿತಾಂಶ ಪಡೆದಿದೆ. ಪರೀಕ್ಷೆಯಲ್ಲಿ ಕುಳಿತಿದ್ದ 472 ವಿದ್ಯಾರ್ಥಿಗಳಲ್ಲಿ 350 ವಿದ್ಯಾರ್ಥಿಗಳು ಪಾಸಾಗಿದ್ದು, ಕಲಾ ವಿಭಾಗದಲ್ಲಿ ಶೇ.80.35, ವಾಣಿಜ್ಯ ವಿಭಾಗದಲ್ಲಿ 75.36 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.74.15 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ  ಚಂದ್ರಶೇಖರ್ 543, ಅರುಣ್‌ಕುಮಾರ್ 532, ಕಾರ್ತಿಕ್ ಹಾಗೂ ಅನಿಲ್‌ಕುಮಾರ್ 523 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿನಯ್‌ಕುಮಾರ್ 540, ಸಾಮ್ಸ್ ಬಾಝ್ಗಾ, ರಾಜೇಶ್ 538, ಸುಷ್ಮಾ 538 ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಅರುಣ್ ಕುಮಾರ್ 531 ಅಂಕ, ನರೇಂದ್ರ ಬಾಬು 522 ಅಂಕ ಪಡೆದಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ತಿಳಿಸಿದ್ದಾರೆ. ಕಾಲೇಜಿನ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ 18 ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ ಪ್ರಾಂಶುಪಾಲ ರಾಮಕೃಷ್ಣ ರವರು 161 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 76 ವಿದ್ಯಾರ್ಥಿಗಳು ದ್ವೀತಿಯ ಹಾಗೂ 95 ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.