ಬೋರ್ವೆಲ್ ಹೊಸ ಕಾಯಿದೆ ಅನುಷ್ಠಾನಕ್ಕೆ ವಿರೋಧ
ಕುಣಿಗಲ್: ಹೇಮಾವತಿ ನೀರು ನಿಗಧಿಯಂತೆ ಹಂಚಿಕೆಯಾಗದೆ, ಬೋರ್ವೆಲ್ ಕೊರೆಸಲು ಅಳವಡಿಸಿರುವ ಹೊಸ ಕಾಯಿದೆ ತಾಲೂಕಿನ ಮಾತ್ರಕ್ಕೆ ವಿಸ್ತರಿಸುವುದರಲ್ಲಿ ಅರ್ಥವಿಲ್ಲ ಎಂದು ಶಾಸಕ ಡಿ.ನಾಗರಾಜಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ನಡೆಸಿದ ಕುಡಿಯುವ ನೀರಿನ ಪೂರೈಕೆ ಪರಿಶೀಲನೆ ಸಭೆಯಲ್ಲಿ, ಬೋರ್ವೆಲ್ ಕೊರೆಸಲು ಹೊಸ ಕಾಯಿದೆ ಅನುಷ್ಠಾನಗೊಳಿಸುವಂತೆ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಸೂಚಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಅನುಷ್ಠಾನದ ಮುನ್ನ ಸಾಧಕ, ಬಾಧಕಗಳನ್ನು ಪರಿಶೀಲಿಸಬೇಕೆಂದರು.
ಸಿಪಿಎಂ ಮುಖಂಡನ ಹತ್ಯೆ: ಕೋರ್ಟ್ಗೆ ಆರೋಪಿಗಳ ಶರಣು
ಮುಳಬಾಗಲು: ಸಿಪಿಎಂ ಮುಖಂಡ ರಾಧಾಕೃಷ್ಣ ಕೊಲೆ ಆರೋಪಿಗಳು ಶನಿವಾರ ಸಂಜೆ ಪಟ್ಟಣದ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಅಸಲಿ ಅತ್ತಿಕುಂಟೆ ಗ್ರಾಮದ ಪಾಪಣ್ಣ ಮತ್ತು ಅವರ ಮಗ ಶಿವಕುಮಾರ್ ಶರಣಾದ ಆರೋಪಿಗಳು. ಏ.24ರಂದು ಪಟ್ಟಣದ ಹೊರವಲಯಲ್ಲಿ ಸಿಪಿಎಂ ಮುಖಂಡ ಟಿ.ರಾಧಾಕೃಷ್ಣ ಅವರ ಹತ್ಯೆಯಾಗಿತ್ತು. ಆರೋಪಿಗಳನ್ನು ಬಂಧಿಸುವಂತೆ ತಾಲೂಕಲ್ಲಿ ವ್ಯಾಪಕ ಪ್ರತಿಭಟನೆ ಕೂಡ ನಡೆದಿತ್ತು. ದುರ್ದೈವ ಎಂದರೆ, ರಾಧಾಕೃಷ್ಣ ಅವರ ಅಂತ್ಯ ಕ್ರಿಯೆ ಬಳಿಕ ಅವರ ಪತ್ನಿ ಸುಮಿತ್ರಾ ಹಾಗೂ ಮಗಳು ವೈಶಾಲಿ ಬಾವಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದರು.
ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ
ತುಮಕೂರು: ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಈ ಭ್ರಷ್ಟಾಚಾರ ನಿವಾರಣೆಗಾಗಿ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಬೆಂಗಳೂರು ಶಿಕ್ಷಕ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳಾದ ಸಿದ್ದಲಿಂಗಸ್ವಾಮೀಜಿ ಅವರ ಅಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ, ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಇತರೆ ಎಲ್ಲಾ ಇಲಾಖೆಗಳಿಗಿಂತ ಮೀರಿದ ಭ್ರಷ್ಟಾಚಾರ ನಡೆಯುತ್ತಿದೆ.
ಕಚೇರಿಗಳಲ್ಲಿನ ಬೋಧಕ ಮತ್ತು ಬೋಧಕೇತರ ನೌಕರರು ಐದು ವರ್ಷಗಳ ನಂತರ ಶಾಲೆಗಳಿಗೆ ಬರಬೇಕು. ಬಿಇಒ, ಡಿಡಿಪಿಐಗಳಾಗಿ ಕೆಲಸ ಮಾಡಿದ ಅಧಿಕಾರಿಗಳು ಮೂರು ವರ್ಷಗಳ ನಂತರ ಡಯಟ್ನಲ್ಲಿ ಕೆಲಸ ಮಾಡುವಂತಾಗಬೇಕು ಎಂದರು.
ಕಲ್ಪೋತ್ಸವ ಸಮಾರಂಭ
ತಿಪಟೂರು: ಪಟ್ಟಣದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಕಲ್ಪೋತ್ಸವ ಸಾಂಸ್ಕೃತಿಕ ಸಮಾರಂಭವನ್ನು ಮೇ 12ರಿಂದ 14 ರವರೆಗೆ ಏರ್ಪಡಿಸಲಾಗಿದೆ. ಮೇ 12 ಮತ್ತು 13ರಂದು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 14ರ ಬುಧವಾರ ಸಮಾರೋಪ ಸಮಾರಂಭ ಆಯೋಜಿಸಿದ್ದು, ಸಚಿವ ಟಿ.ಬಿ. ಜಯಚಂದ್ರ, ಶಾಸಕ ಕೆ. ಷಡಕ್ಷರಿ, ಸಿದ್ದಾರ್ಥ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಬಾಲಕೃಷ್ಣ ಶೆಟ್ಟಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಕೆವಿಎಸ್ ಅಧ್ಯಕ್ಷ ಕೆ.ಪಿ. ತಿಪ್ಪೇರುದ್ರಪ್ಪ ವಹಿಸಲಿದ್ದಾರೆ. ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

