ಕೋಲಾರ

ಕೂಲಿ ಕಾರ್ಮಿಕ ಸಾವು: ಪರಿಹಾರಕ್ಕೆ ಪ್ರತಿಭಟನೆ

Published On :

ಚಿಂತಾಮಣಿ: ಕೂಲಿ ಕಾರ್ಮಿಕನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮೃತ ಕಾರ್ಮಿಕನ ಪತ್ನಿ ಹಾಗೂ ಸಂಬಂಧಿಕರು, ನೂರಾರು ಕಾರ್ಮಿಕರು ಒತ್ತಾಯಿಸಿ ಪ್ರತಿಭಟನೆ ಮಾಡಿದರು. ನಗರದ ಅಶ್ವಿನಿ ಬಡಾವಣೆಯ ಶಿಕ್ಷಕ ಗಿರೀಶ್ ಎಂಬುವರಿಗೆ ಸೇರಿದ ನೂತನ ಕಟ್ಟಡಕ್ಕೆ ಬಣ್ಣ ಬಳಿಯುವಾಗ 45 ವರ್ಷದ ಕಾರ್ಮಿಕ ನರಸಿಂಹಪ್ಪ ಕೆಳಗೆ ಬಿದ್ದು ಮೃತಪಟ್ಟಿದ್ದರು. ಮೃತನ ಕುಟುಂಬಕ್ಕೆ ಮನೆ ಮಾಲೀಕರು ಪರಿಹಾರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಈ ಸುದ್ದಿ ತಿಳಿದ ತಕ್ಷಣ ನಗರ ಠಾಣೆಯ ಇನ್ಸ್‌ಪೆಕ್ಟರ್ ಮುರಳಿ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಮುಖಂಡರ ಮಾತುಕತೆ ಬಳಿಕ ಪ್ರತಿಭಟಣಾಕಾರರು ತಮ್ಮ ಪ್ರತಿಭಟನೆ ಕೈಬಿಟ್ಟರು.
ಪ್ರಸಿದ್ಧ ದ್ರೌಪತಮ್ಮ ಕರಗ ಪ್ರಾರಂಭ
ಹಲವು ಕಾರ್ಯಕ್ರಮಗಳು ನಿಗದಿ
ಮುಳಬಾಗಲು: ಪಟ್ಟಣದ ಧರ್ಮರಾಜ ಗುಡಿ ಬೀದಿಯಲ್ಲಿರುವ ದ್ರೌಪತಮ್ಮನವರ 108 ನೇ ವರ್ಷದ ಕರಗ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಅಭಿಷೇಕ, ಗಂಗಾ ಸ್ಥಾಪನೆ, ಜಲಸ್ತಂಭನ, ಆಯುಧಪೂಜೆ, ದೇವಸ್ಧಾನದಲ್ಲಿ ಹೂವಿನ ಅಲಂಕಾರ ಮಾಡಲಾಗುವುದು. 12ರಂದು ಬೆಳಿಗ್ಗೆ ಅಂಕುರಾರ್ಪಣಿ ಮತ್ತು ಧ್ವಜರೋಹಣ ನಡೆಯಲಿದ್ದು ರಾತ್ರಿ 8 ಗಂಟೆಗೆ ಜಲಸ್ತಂಭನಾ, ಹಾಗೂ ಹಸಿ ಕರಗ ನಡೆಯುವುದು. ಮೇ 13ರಂದು ಬೆಳಿಗ್ಗೆ ಯಜ್ಞ ಯಾಗಾದಿ ಹೋಮ, ದ್ರೌಪದಿ ಅಮ್ಮನವರಿಗೆ ಕಲ್ಯಾಣೋತ್ಸವ, ರಾತ್ರಿ ನಲ್ಲಂಡಹಳ್ಳಿ ಸೀನಪ್ಪನವರಿಂದ ಮಹಾಭಾರತ ಪಾರಾಯಣ ಕಾರ್ಯಕ್ರಮ ನಡೆಯಲಿದೆ. 14ರಂದು ವಹ್ನಿಕುಲ ಸಂಘದವರಿಂದ ಹೂವಿನ ಕರಗ ನಡೆಯಲಿದ್ದು ಹಗಲು ದೀಪಾರಾಧನೆ ನಡೆಯಲಿದೆ. ಮೂಲದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ. ಇದೇ ದಿವಸ ದ್ರೌಪದಿ ಅರ್ಜುನೋತ್ಸವ, ಶ್ರೀಕೃಷ್ಣ ಪಲ್ಲಕ್ಕಿ ಉತ್ಸವ, ತಿರುಪತಿ ಗಂಗಮ್ಮ ಉತ್ಸವ, ಸೋಮೇಶ್ವರ ಉತ್ಸವ, ವೀರಭದ್ರಸ್ವಾಮಿ ಉತ್ಸವ, ಕೈವಾರ ನಾರಾಯಣಸ್ವಾಮಿ ಉತ್ಸವ, ಆದಿ ನಾಂಚಾರಮ್ಮ ಉತ್ಸವ, ಎಡಿ ಪಾಳ್ಯದ ಗಂಗಮ್ಮ ಉತ್ಸವ, ಓಂಶಕ್ತಿ  ಉತ್ಸವ, ಅಂಕಾಳ ಪರಮೇಶ್ವರಿ ಉತ್ಸವ ನಡೆಯಲಿದೆ. 15ರಂದು ಕರಗ ಅಗ್ನಿ ಪ್ರವೇಶ ಕಾರ್ಯಕ್ರಮ ನಡೆಯಲಿದೆ. 16ರಂದು ವಸಂತೋತ್ಸವ, ಒನಕೆ ಕರಗ ಮತ್ತು ಪ್ರಸಾದ ವಿನಿಯೋಗ ನಡೆಯಲಿದ್ದು, ರಂಗೋಲಿ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಗುವುದು. ರಾತ್ರಿ ಪೋತರಾಜುಲು ಪೂಜೆ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಮೇ 17ರಂದು ಮರುಪೂಜೆ, ಹೂವಿನ ಅಲಂಕಾರ ನಡೆಯಲಿದೆ. ಆಂಜನಾದ್ರಿ ಬೆಟ್ಟಕ್ಕೆ ವಿದ್ಯುತ್ ಅಲಂಕಾರ ಮಾಡಲಾಗುವುದು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.