ಕೋಲಾರ

ಹಾಲು ಒಕ್ಕೂಟ ಚುನಾವಣೆ: ಕಾಂಗ್ರೆಸ್, ಜೆಡಿಎಸ್ ಪೈಪೋಟಿ

Published On :

ಬಂಗಾರಪೇಟೆ: ಮೇ 25ರಂದು ನಡೆಯಲಿರುವ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮಂಡಳಿಯ ಚುನಾವಣೆಯಲ್ಲಿ ಬಂಗಾರಪೇಟೆ ಕ್ಷೇತ್ರದಿಂದ ಜಿಪಂ ಸದಸ್ಯ ಹಾಗೂ ಹಾಲಿ ನಿರ್ದೇಶಕರ ನಡುವೆ ಭಾರಿ ಪೈಪೋಟಿ ಸಾಧ್ಯತೆ ಇದೆ. ಈಗಾಗಲೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬೇತಮಂಗಲ ಜಿಪಂ ಸದಸ್ಯ ಆ.ಮು.ಲಕ್ಷ್ಮೀನಾರಾಯಣ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ನಿಂದ ಹಾಲಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಮತ್ತೆ ಪುನರಾಯ್ಕೆ ಬಯಸಿದ್ದಾರೆ. ಕಳೆದ ಚುನಾವಣೆಯಲ್ಲಿ ಜಯಸಿಂಹ ಕೃಷ್ಣಪ್ಪ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿದ್ದರು. ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಜಯಸಿಂಹರನ್ನು ಹಾಲು ಒಕ್ಕೂಟದ ಅಧ್ಯಕ್ಷರಾಗಿ ಮಾಡಿದ್ದರು. ಆದರೂ ತಮ್ಮನ್ನು ಪಕ್ಷ ಕಡೆಗಣಿಸಿದೆ ಎಂದು ಆರೋಪಿಸಿ ಬಿಜೆಪಿ ಸೇರಿದರು. ಮತ್ತೆ ಜಯಸಿಂಹ ತಮ್ಮ ನಿಷ್ಠೆ ಬದಲಾಯಿಸಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. ಜಿಪಂ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದ ಲಕ್ಷ್ಮೀನಾರಾಯಣ ಮತ್ತು ಜಯಸಿಂಹ ಈಗ ಮತ್ತೆ ಪರಸ್ಪರ ತೊಡೆತಟ್ಟುವ ಸಾಧ್ಯತೆ ಇದೆ.
ಶ್ರೀರಾಮ ದೇಗುಲಕ್ಕೆ ಭೂಮಿ ಪೂಜೆ
ಮುಳಬಾಗಲು: ತಾಲೂಕಿನ ಟೆ.ನಡುಂಪಲ್ಲಿ ಗ್ರಾಮದಲ್ಲಿ ಭಕ್ತಾಧಿಗಳ ನೆರವಿನಿಂದ ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ದೇಗುಲಕ್ಕೆ ಭೂಮಿ ಪೂಜೆಯನ್ನು ಶಾಸಕ ಕೊತ್ತೂರು ಮಂಜುನಾಥ್ ಸೋಮವಾರ ನೆರವೇರಿಸಿದರು. ದಾನಿಗಳಾದ ಪಿ.ನಾಗರಾಜ್ ದಂಪತಿ ಪೂಜಾ ಕಾರ್ಯಕ್ರಮದಲ್ಲಿದ್ದರು. ಮುಖಂಡರಾದ ಗಂಗಿರೆಡ್ಡಿ, ಕೊತ್ತೂರು ಜಿ.ವೆಂಕಟರವಣ, ರಾಜಕುಮಾರ್, ಎನ್.ರಾಮಾಂಜಿ, ಎಂ.ಶಂಕರ್, ತಾಪಂ ಸದಸ್ಯೆ ಅರ್ಚನಾ ಮಲ್ಲಿಕಾರ್ಜುನರೆಡ್ಡಿ ಮುಂತಾದವರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.