ಪುಟ್ಟ ಮಕ್ಕಳ ಕೈಗೆ ಕಂದಮ್ಮ ಕೊಟ್ಟು ಪರಾರಿಯಾದ ತಾಯಿ!
ಕೋಲಾರ: ಐದು ತಿಂಗಳ ಕಂದಮ್ಮನನ್ನು ಆಟವಾಡುತ್ತಿದ್ದ ಇಬ್ಬರು ಪುಟ್ಟ ಹುಡುಗರ ಮಡಲಿಗೆ ಒಪ್ಪಿಸಿ ತಾಯಿ ನಾಪತ್ತೆಯಾಗಿರುವ ಸೋಮವಾರ ಇಲ್ಲಿನ ಗಾಂಧಿನಗರದಲ್ಲಿ ನಡೆದಿದೆ.
ಬೂತೆಮ ದೇವಸ್ಥಾನದ ಬಳಿ ಆಟವಾಡುತ್ತಿದ್ದ ಅರುಣ್ ಮತ್ತು ಶ್ರೀಕಾರ್ ಎಂಬ ಪುಟ್ಟ ಹುಡುಗರ ಕೈಗೆ ತನ್ನ ಮುದ್ದಾದ ಐದು ತಿಂಗಳ ಗಂಡು ಮಗುವನ್ನು ನೀಡಿ, ಊಟ ಮಾಡಿಕೊಂಡು ಬರುವವರೆಗೂ ಮಗುವನ್ನು ನೋಡಿಕೊಳ್ಳಿ ಎಂದು ಹೇಳಿ ಹಾಲಿನ ಬಾಟಲ್ ಹಾಗೂ ಮಗುವಿಗೆ ಬೇಕಾದ ಬಟ್ಟೆಗಳ ಪ್ಲಾಸ್ಟಿಕ್ ಚೀಲವನ್ನು ಕೊಟ್ಟು ಹೋದವಳು ಮತ್ತೆ ಬಂದೇ ಇಲ್ಲ.
ಸುಮಾರು ಎರಡು ಗಂಟೆ ಕಳೆದರೂ ಸಹ ಮಹಿಳೆ ವಾಪಸು ಬರಲಿಲ್ಲ. ಮಕ್ಕಳು ಪುಟ್ಟ ಕಂದಮ್ಮನ್ನು ಕಾಯುತ್ತಾ ಕುಳಿತ್ತಿದ್ದರು. ನಿದ್ದೆಯಿಂದ ಎದ್ದ ಮಗು ಆಳಲಾರಂಭಿಸಿದಾಗ ಪುಟ್ಟ ಹುಡುಗರಾದ ಅರುಣ್ ಮತ್ತು ಶ್ರೀಕಾರ್ ದೇವಾಲಯದ ಬಳಿಯಿಂದ ಓಡಿ ಹೋಗಿ ತಮ್ಮ ತಾಯಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಾಂಧಿನಗರದ ನಿವಾಸಿಗಳು ಮಗುವನ್ನು ಎತ್ತಿಕೊಂಡು ಸಮಾಧಾನಪಡಿಸಿದರಲ್ಲದೆ ಮುದ್ದು ಮಗುವನ್ನು ಮನೆಗೆ ತೆಗೆದುಕೊಂಡು ಹೋಗಲು ಪೈಪೋಟಿ ನಡೆಸಿದರು. ಕೊನೆಗೆ ಎರಡು ದಿನ ಕಾದು ಯಾರು ಬರದಿದ್ದರೆ ಪೊಲೀಸರ ಸಮ್ಮುಖದಲ್ಲಿ ಮಗುವನ್ನು ಪಡೆಯುವುದಕ್ಕೆ ಸಮ್ಮತಿಸಿದ ಮೇಲೆ ಅನಾಥ ಮಗುವನ್ನು ಪೊಲೀಸ ಠಾಣೆಗೆ ಒಪ್ಪಿಸಲಾಯಿತು. ಹೆತ್ತ ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಮಹಿಳೆಗೆ ಸಾರ್ವಜನಿಕರು ಹಿಡಿ ಶಾಪ ಹಾಕಿದರು. ಸದ್ಯಕ್ಕೆ ಮಗು ಪೊಲೀಸರ ಬಳಿ ಕ್ಷೇಮವಾಗಿದ್ದು ಈ ಕಂದಮ್ಮ ಶಾಶ್ವತವಾಗಿ ಯಾರ ಮಡಲಿಗೆ ಸೇರುತ್ತದೋ ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

