ಕೋಲಾರ

ಕನ್ನ ಭಾಗ್ಯ, ಚೋರ್ ಭಾಗ್ಯ ಯೋಜನೆ ಇದು ಸಿದ್ದರಾಮಯ್ಯ ಸರ್ಕಾರ ಸಾಧನೆ

Published On :

ಕ.ಪ್ರ.ವಾರ್ತೆ    ಕೋಲಾರ    ಮೇ 14
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಸಾಧನೆ ಶೂನ್ಯ. ಅನ್ನಭಾಗ್ಯವನ್ನು ಕನ್ನ ಭಾಗ್ಯವಾಗಿ ಪರಿವರ್ತಿಸಲಾಗಿದೆ. ನಕ್ಸಲ್ ಎನ್‌ಕೌಂಟರ್‌ನಲ್ಲಿ ಸತ್ತ ಗೋವುಗಳ ಕಳ್ಳನಿಗೆ 10 ಲಕ್ಷ ಪರಿಹಾರ ನೀಡುವ ಮೂಲಕ 'ಚೋರ್ ಭಾಗ್ಯ' ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು.
ಲೋಕಸಭಾ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಆತ್ಮಾವಲೋಕನಾ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, 'ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಮತಬ್ಯಾಂಕ್ ರಾಜಕಾರಣಕ್ಕಾಗಿ ಕ್ರಿಮಿನಲ್ ಮತ್ತು ಕಮ್ಯುನಿಲ್ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ' ಎಂದು ಆರೋಪಿಸಿದರು. ಅನ್ನಭಾಗ್ಯ ಯೋಜನೆಯ 10 ತಿಂಗಳ ಅವಧಿಯಲ್ಲಿ 300 ಕೋಟಿ ಅವ್ಯವಹಾರ ನಡೆದಿದೆ ಎಂದು ಲೋಕಾಯುಕ್ತರೇ ಹೇಳಿದ್ದಾರೆ. ಶಾಲಾ ಮಕ್ಕಳ ಪ್ರವಾಸ ಯೋಜನೆಗೂ ಜಾತಿ ಲೇಪನ ಹಚ್ಚಿದ ಅಪಕೀರ್ತಿ ಕಾಂಗ್ರೆಸ್ಸ್‌ರ್ಕಾರಕ್ಕೆ ಸಲ್ಲುತ್ತದೆ ಎಂದು ಟೀಕಿಸಿದರು. ಶೃಂಗೇರಿ ಎಎನ್‌ಎಫ್ ಎನ್‌ಕೌಂಟರ್ ಪ್ರಕರಣದಲ್ಲಿ ಮೃತಪಟ್ಟ ಕ್ರಿಮಿನಲ್ ಹಹಿನ್ನೆಲೆಯ ಕಬೀರ್ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನು ಯಾವ ಪುರುಷಾರ್ಥಕ್ಕೆ ನೀಡಲಾಗಿದೆ ಎಂದು ಪ್ರಶ್ನಿಸಿದರು. ಎಂ.ನಾರಾಯಣಸ್ವಾಮಿ, ವೈ.ಎ.ನಾರಾಯಣಸ್ವಾಮಿ, ಡಾ.ಶಿವಯೋಗಿಸ್ವಾವು, ವೈ.ರಾಮಕ್ಕ, ಕೃಷ್ಣಾರೆಡ್ಡಿ, ಶಿವಕುಮಾರ್, ಮೋಹನ್‌ರೆಡ್ಡಿ, ಬಿ.ಪಿ.ವೆಂಕಟಮುನಿಯಪ್ಪ, ನಿರ್ಮಲ್‌ಕುಮಾರ್, ಓಂಶಕ್ತಿ ಚಲಪತಿ, ಮಾಗೇರಿ ನಾರಾಯಣಸ್ವಾಮಿ, ಶಿಳ್ಳಂಗೆರೆ ಮಹೇಶ್, ಪ್ರಮೋದ್ ಇದ್ದರು.


ರಾಜ್ಯದಲ್ಲಿ 17ರಿಂದ 21 ಸ್ಥಾನ
ರಾಜ್ಯದಲ್ಲಿ ಬಿಜೆಪಿ 17ರಿಂದ 21 ಸ್ಥಾನ ಗೆಲ್ಲಲಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಿದ್ದು, ರಾಷ್ಟ್ರದ ಹಿತಾಸಕ್ತಿಯಲ್ಲಿ ರಾಜಿ ಇಲ್ಲದೆ ಸಮರ್ಥ ನಾಯಕತ್ವ ನೀಡಲಿದ್ದಾರೆ. 1971ರಿಂದ 2014ರವರೆಗಿನ ಚುನಾವಣೆಯಲ್ಲಿ ಸಮರ್ಥ ನಾಯಕತ್ವಕ್ಕಾಗಿಯೇ ಮತದಾರ ತೀರ್ಪು ನೀಡಿದ್ದಾರೆ. 1971ರಲ್ಲಿ  ಇಂದಿರಾ ಗಾಂಧಿ ಆಂದೋಲನ, 1977ರಲ್ಲಿ ಜೆಪಿ ಆಂದೋಲನ, 1998ರಲ್ಲಿ ವಾಜಪೇಯಿ, ಆಗ ನರೇಂದ್ರ ಮೋದಿಯವರ ಅಲೆ ಎಲ್ಲಡೆ ಎದ್ದಿದ್ದು. ಸಾಕಷ್ಟು ಟೀಕೆಗಳನ್ನು ಸಮರ್ಥವಾಗಿ ಎದುರಿಸಿದ ಜನ ನಾಯಕರಾಗಿ ಮೋದಿ ಹೊರ ಹೊಮ್ಮಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.