ಕೋದಂಡಸ್ವಾಮಿ ಅದ್ಧೂರಿ ಬ್ರಹ್ಮ ರಥೋತ್ಸವ
ಬಂಗಾರಪೇಟೆ: ಪಟ್ಟಣದ ಶ್ರೀಕೋದಂಡರಾಮಸ್ವಾಮಿ ದೇವರ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ನೇರವೇರಿತು.
ಪಕ್ಕದ ಆಂಧ್ರ, ತಮಿಳುನಾಡನಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು. ಕೋದಂಡರಾಮಸ್ವಾಮಿ ದೇವಾಲಯದಿಂದ ಹೊರಟ ತೇರು ಬಜಾರ್ ರಸ್ತೆಯಲ್ಲಿ ಸಾಗಿ ಬಸ್ ನಿಲ್ದಾಣದಿಂದ ಮತ್ತೆ ದೇವಾಲಯ ಬಂದು ತಲುಪಿತು.
ಗ್ರಾಮಸ್ಥರು ಬಂಡಿಗಳಲ್ಲಿ ಪಾನಕ ಮಜ್ಜಿಗೆ ತಂದು ಹಂಚಿದ್ದು ವಿಶೇಷವಾಗಿತ್ತು. ಮುಜರಾಯಿ ಇಲಾಖೆಗೆ ಸೇರಿದ್ದ ಈ ದೇವಾಲಯ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿಸಿದ್ದು ಭಕ್ತಾಧಿಗಳನ್ನು ಮೆಚ್ಚಿಸಿತು. ಪಟ್ಟಣದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಈ ವೇಳೆ ತಹಸೀಲ್ದಾರ್ ಉಷಾ, ಪುರಸಭೆ ಅಧ್ಯಕ್ಷ ಗಂಗಮ್ಮ ರಂರಾಮಯ್ಯ, ಜಿಪಂ ಸದಸ್ಯ ಆ.ಮು.ಲಕ್ಷ್ಮೀನಾರಾಯಣ, ಸಿಐ ವೆಂಕಟಾಚಲಪತಿ, ದೇವಾಲಯ ಇಒ ಮರಿರಾಜು, ಕಸಾಪ ಅಧ್ಯಕ್ಷ ಅಶ್ವತ್ಥ್, ಪುರಸಭೆ ಸದಸ್ಯ ಬಿ.ಸಿ.ಶ್ರೀನಿವಾಸಮೂರ್ತಿ, ವೇದಾವತಿ ಪ್ರಭಾಕರ್, ದೇವಾಲಯ ಸಮಿತಿ ಸದಸ್ಯರಾದ ಸುಗೇಂದ್ರನ್, ನಾಗಪ್ರಕಾಶ್ ಮತ್ತಿತರರು ಇದ್ದರು.
ಇಂದು ಹೂವಿನ ಕರಗ: ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಶ್ರೀದ್ರೌಪದಮ್ಮ ಹೂವಿನ ಕರಗವನ್ನು ಗುರುವಾರ ರಾತ್ರಿ ನಡೆಯಲಿದೆ ಬೇತಮಂಗಲದ ಕೃಷ್ಣಮೂರ್ತಿ ಕರಗವನ್ನು ಹೊತ್ತು ದೇವಾಲಯ ಪಕ್ಕದಲ್ಲೇ ನಿರ್ಮಿಸಿರುವ ವಿಶೇಷ ವೇದಿಕೆ ಮೇಲೆ ಅರ್ಧ ಗಂಟೆ ವಿವಿಧ ಭಂಗಿಗಳಲ್ಲಿ ನರ್ತಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

