ಕೋಲಾರ

ಬಂಗಾರಪೇಟೆ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪಿಚ್ಚಳ್ಳಿ

Published On :

ಕೋಲಾರ: ಬಂಗಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೇತಮಂಗಲ ಹೋಬಳಿ ಕೇಂದ್ರದಲ್ಲಿ ಜೂನ್ 13 ರಂದು ನಡೆಸಲು ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ತಿಳಿಸಿದರು.
ತಾಲೂಕಿನ 4ನೇ ಸಾಹಿತ್ಯ ಸಮ್ಮೇಳನವನ್ನು ಹೋಬಳಿ ಮಟ್ಟದಲ್ಲಿ ಮಾಡುವುದರ ಮೂಲಕ ಪರಿಷತ್ತನ್ನು ಹಳ್ಳಿಗಳ ಕಡೆಗೆ ವಿಸ್ತರಿಸುವುದರ ಮೂಲಕ ಕನ್ನಡದ ಮನಸುಗಳನ್ನು ಗಟ್ಟಿ ಗೊಳಿಸುವುದು ನಮ್ಮ ಆಶಯ ಎಂದು ಅವರು ತಿಳಿಸಿದರು.
ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಖ್ಯಾತ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅವರನ್ನು ಸಮಿತಿ ಆಯ್ಕೆ ಮಾಡಿದೆ ಎಂದು ಹೇಳಿದರು.
ಸಮ್ಮೇಳನಕ್ಕೆ ಸಾವಿರದ ಐನೂರು ಸಾಹಿತ್ಯಾಸಕ್ತರು ನಿರೀಕ್ಷೆ ಇದ್ದು 500 ಪ್ರತಿನಿಧಿಗಳನ್ನು ಮಾಡಿಕೊಳ್ಳಲಾಗುವುದು, ಪ್ರತಿನಿಧಿ ಶುಲ್ಕ ನೂರು ರು. ಸ್ವೀಕರಿಸಿ ಅವರಿಗೆ ಬ್ಯಾಗು, ಪುಸ್ತಕ, ಪೆನ್ನು ನೆನಪಿಗಾಗಿ ನೀಡಲಾಗುವುದು ಎಂದರು.
ಇದೇ ವೇದಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 123 ಅಂಕಗಳಿಗಿಂತ ಹೆಚ್ಚು ಹಾಗೂ ಪಿಯುಸಿಯಲ್ಲಿ 98 ಅಂಕಗಳಿಗಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರನ್ನು ಗೌರವಿಸಲಾಗುವುದು ಜೀವಮಾನದ ಸಾಧಕರನ್ನು ಸನ್ಮಾನಿಸಲಾಗುವುದು.
ಸಮ್ಮೇಳನದಲ್ಲಿ ಕವಿಗೋಷ್ಠಿ ಜೊತೆಗೆ ಸ್ಥಳೀಯ ಸಮಸ್ಯೆಗಳನ್ನು ಕುರಿತು ಗೋಷ್ಠಿ ಇದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆ ತಂಡಗಳನ್ನು ಆಯೋಜಿಸಲಾಗುವುದು. ಸಮ್ಮೇಳನದಲ್ಲಿ ಸರಳವಾದ ಊಟ ಮತ್ತು ಶುದ್ಧ ನೀರು ನೀಡಲಾಗುವುದು, ಪ್ಲಾಸ್ಟಿಕ್‌ನ್ನು ನಿಷೇಧಿಸಲಾಗುವುದು.
ಸಮ್ಮೇಳನದ ಅಂಗವಾಗಿ ನೆನಪಿನ ಸಂಚಿಕೆ ಹೊರತರಲಾಗುವುದು ಇದಕ್ಕೆ ಸಾಹಿತಿಗಳ ಕವನ, ಲೇಖನಗಳನ್ನು ಇದೇ ತಿಂಗಳ 25 ನೇ ತಾರೀಕಿನೊಳಗೆ ತಾಲೂಕು ಅಧ್ಯಕ್ಷರಾದ ಅಶ್ವಥ್ ಅವರಿಗೆ ಸೇರಿಸಬೇಕೆಂದರು. ಸಮ್ಮೇಳನವನ್ನು ಬೇತಮಂಗಲ ಗ್ರಾಮೀಣ ಪ್ರೌಢಶಾಲೆಯ ಆವರಣದಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ ಎಂದರು.
ಬಂಗಾರಪೇಟೆ ಕಸಾಪ ತಾಲೂಕು ಅಧ್ಯಕ್ಷ ಆರ್.ಅಶ್ವಥ್ ಅವರಿಂದ ಪ್ರಾಸ್ತಾವಿಕ ನುಡಿ, ನೆರ್‌ನಹಳ್ಳಿ ಶಂಕರ್ ಸ್ವಾಗತಿಸಿ, ಲಕ್ಷ್ಮೀನಾರಾಯಣ ವಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ತೇಸಿ ಬದ್ರಿನಾಥ್, ಬಂಗಾರಪೇಟೆ ಕಸಾಪ ತಾಲೂಕು ಅಧ್ಯಕ್ಷ ಆರ್.ಅಶ್ವಥ್, ನಾರಾಯಣಪ್ಪ, ವೀರವೆಂಕಟಪ್ಪ, ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗಾನಂದ ಕೆಂಪರಾಜ್, ಅಪ್ಪಯ್ಯಗೌಡ, ಬಾಲಕೃಷ್ಣೇಗೌಡ, ನಾಗರಾಜ್, ಹೋಬಳಿ ಕಸಾಪ ಅಧ್ಯಕ್ಷ ಎಲ್.ಎ. ವಿಜಯಕುಮಾರ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.