ಕೋಲಾರ

ಆರ್ವಿ ರಾಜಿನಾಮೆ ನೀಡಲಿ

Published On :

ಕೋಲಾರ: ಕೈಗಾರಿಕೋದ್ಯಮಿ ಆರ್.ವಿ. ದೇಶಪಾಂಡೆ ಅವರಿಗೆ ಉನ್ನತ ಶಿಕ್ಷಣ ಇಲಾಖೆಯನ್ನು ನಿಬಾಯಿಸುವುದಕ್ಕೆ ಕಷ್ಟವಾಗಿದ್ದಲ್ಲಿ ರಾಜಿನಾಮೆ ನೀಡಲಿ ಎಂದು ಶಾಸಕ ಸಿ.ಟಿ. ರವಿ ಆಗ್ರಹಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಹಣಗಳಿಕೆ ಸಾಧ್ಯವಿಲ್ಲ  ಎಂಬ ಕಾರಣಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿಲ್ಲ ಎಂದು ಲೇವಡಿ ಮಾಡಿದರು. 'ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಡಾ. ಶಿವಯೋಗಿ ಸ್ವಾಮಿ ಇನ್ನಿತರರ ಸಲಹೆ ಮತ್ತು ಒತ್ತಾಯದಿಂದ ಬೆಂಗಳೂರು ವಿವಿಯನ್ನು ವಿಭಜಿಸಿ ಡಿವಿಜಿ ವಿಶ್ವವಿದ್ಯಾಲಯ ರಚನೆಗಾಗಿ ಕಾಯಿದೆ ರೂಪಿಸಿ ಅನುಮತಿಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜಕೀಯವೋ ಅಥವಾ ಇಚ್ಚಾಶಕ್ತಿಯ ಕೊರತೆಯೋ ಗೊತ್ತಿಲ್ಲ, ರಾಜ್ಯಪಾಲರು ಬೆಂಗಳೂರು ವಿವಿಯ ವಿಭಜನೆ ಪ್ರಸ್ತಾಪನೆಗೆ ಅಂಕಿತ ಹಾಕದೆ ಕಡಿತ ವಾಪಸ್ ಕಳುಹಿಸಿದ್ದಾರೆ. ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಹಾಲಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಗಮನ ಹರಿಸಬಹುದಾಗಿತ್ತು. ಆದರೆ, ಕೈಗಾರಿಕೋದ್ಯಮಿಯಾಗಿರುವ ಅವರು ಉನ್ನತ ಶಿಕ್ಷಣ ಸಚಿವಾಲಯಲ್ಲಿ ಹಣ ಗಳಿಕೆ ಸಾಧ್ಯವಿಲ್ಲವೆಂಬ ಕಾರಣಕ್ಕೆ ನಿರಾಸಕ್ತಿ ವಹಿಸಿದ್ದಾರೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.