ಕೋಲಾರ

ಚಿನ್ನದ ಗಣಿ ಕಾಲೋನಿಗಳ ಮನೆಗಳಿಗೆ ಸೌಲಭ್ಯ'

Published On :

ಕೆಜಿಎಫ್: ಬಿಜಿಎಂಎಲ್ ಕಾರ್ಮಿಕರು ವಾಸಿಸುವ ಚಿನ್ನದ ಗಣಿ ಕಾಲೋನಿಗಳ ಮನೆಗಳನ್ನು ಖಾಲಿ ಮಾಡಿಸಲು ಬಿಡುವುದಿಲ್ಲ. 2001ರಲ್ಲಿ ಚಿನ್ನದ ಗಣಿ ಮುಚ್ಚಿದ ನಂತರ ಕೆಜಿಎಫ್ ನಗರಸಭೆ ಆಡಳಿತ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಅನುಮೋದನೆಯಿಲ್ಲದೆ ಚಿನ್ನದ ಗಣಿ ಕಾರ್ಮಿಕರು ಮನೆಗಳನ್ನು ಖಾಲಿ ಮಾಡಲು ಸಾಧ್ಯವಿಲ್ಲ ಎಂದು ಕಾರ್ಮಿಕ ಮುಖಂಡ ದಾಸ್ ಚಿನ್ನಸವರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2001ರಲ್ಲಿ ಚಿನ್ನದ ಗಣಿಗಳನ್ನು ಕೇಂದ್ರ ಸರ್ಕಾರ ಮುಚ್ಚಿದ ನಂತರ 2,817 ಕಾರ್ಮಿಕರು ವಾಸಿಸುತ್ತಿರುವ ಮನೆಗಳು ಸೇರಿದಂತೆ ಇತರೆ 8 ಸಾವಿರ ಚಿನ್ನದ ಗಣಿ ಕಾರ್ಮಿಕರಿಗೆ ಸ್ವಂತ ಮಾಡಬೇಕು ಮತ್ತು ಕಾರ್ಮಿಕರ ಕಾಲೋನಿಗಳನ್ನು ಕೊಳಚೆ ಪ್ರದೇಶವೆಂದು ಘೋಷಿಸಿ ರಾಜೀವ್ ಅವಾಸ್ ಯೋಜನೆಯಡಿ ಅಭಿವೃದ್ಧಿ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗಣಿ ಸಚಿವ ದಿನ್‌ಷಾಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ. ಚಿನ್ನದ ಗಣಿಗಳನ್ನು ಗ್ಲೋಬಲ್ ಟೆಂಡರ್ ಮೂಲಕ ಪುನರಾರಂಭಿಸಲು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಚಿನ್ನದ ಗಣಿ ಕಾರ್ಮಿಕರ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಿಲ್ಲ. ಈ ಹಿನ್ನಲೆಯಲ್ಲಿ ಬಿಜಿಎಂಎಲ್ ಕಾರ್ಮಿಕರ ಕಾಲೋನಿಗಳನ್ನು ರಾಜ್ಯ ಸರ್ಕಾರ ರಾಜೀವ್ ಅವಾಸ್ ಯೋಜನೆಯಡಿ ಅಭಿವೃದ್ಧಿ ಮಾಡಿ ನಗರಸಭೆ ಎಲ್ಲಾ ಮೂಲ ಸೌಲಭ್ಯಗಳು ಒದಗಿಸುವುದು ಖಚಿತ. ಆದ್ದರಿಂದ ಕಾರ್ಮಿಕರು ಯಾವುದೇ ಆತಂಕ ಪಡಬೇಕಿಲ್ಲ ಎಂದರು.
ಬಿಜಿಎಂಎಲ್ ಚಿನ್ನದಗಣಿಯನ್ನು ಓಪನ್‌ಕಾಸ್ಟ್ ಮೈನ್ಸ್ ಮೂಲಕ ನಡೆಸಲು ಅನುಮತಿ ನೀಡಬಾರದು, ಇದರಿಂದ ಕ್ಷೇತ್ರದ ಜನತೆಗೆ ತೊಂದರೆ ಮತ್ತು ಪರಿಸರ ಹಾನಿಯಾಗುವ ಸಾಧ್ಯತೆ ಹೆಚ್ಚು. ಗ್ಲೋಬಲ್ ಟೆಂಡರ್ ಪಡೆದು ಬಿಜಿಎಂಎಲ್ ಚಿನ್ನದ ಗಣಿ ಪುನರಾರಂಭಿಸುವ ಕಂಪನಿಗಳು ಇಲ್ಲಿನ ಜನತೆಗೆ ಹೆಚ್ಚು ಉದ್ಯೋಗವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ನರಗಸಭೆ ಅಧ್ಯಕ್ಷ ಎಂ. ಭಕ್ತವತ್ಸಲಂ, ಮಾಜಿ ಶಾಸಕ ವೈ. ಸಂಪಂಗಿ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಸೇರಿದಂತೆ ಹಲವಾರು ಸಾರ್ವಜನಿಕರ ಸಮಸ್ಯೆಗಳ ಅಭಿವೃದ್ಧಿ ಮಾಡುವಂತೆ ತಮ್ಮ ತಾಯಿ ವೈ. ರಾಮಕ್ಕ ಅವರಿಗೆ ಹೇಳಲಿ ಎಂದರು. ಗೋಷ್ಠಿಯಲ್ಲಿ ಅಯ್ಯಪ್ಪಗೌಡ, ತಿಲಗರಾಜ್, ಅಬ್ದುಲ್ ಹಾನೀಫ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.