ಬಸ್ ನಿಲ್ದಾಣ ಕಾಮಗಾರಿ ವಿಳಂಬ: ಜನರಿಗೆ ತೊಂದರೆ
ಕೆಜಿಎಫ್: ನಗರಸಭೆ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಿ ಮೂರು ತಿಂಗಳಾಗುತ್ತಿದ್ದರೂ ಕೆಲಸ ಮಾತ್ರ ಆಮಗತಿಯಲ್ಲಿ ಸಾಗುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೂಲದವರೊಬ್ಬರು ನಗರಸಭೆ ಬಸ್ ನಿಲ್ದಾಣದ ಕಾಮಗಾರಿಯ ಗುತ್ತಿಗೆ ಪಡೆದಿದ್ದಾರೆ. ಆದರೆ, ಕಾಮಗಾರಿ ಮಾತ್ರ ಚುರುಕಗೊಂಡಿಲ್ಲ. ಇದರಿಂದ ಸಾರಿಗೆ ಸಂಸ್ಥೆಯ ಬಸ್ಗಳು ಹಾಗೂ ಖಾಸಗಿ ಬಸ್ಗಳು ನಗರಸಭೆ ಮೈದಾನದಿಂದ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶಗಳಿಂದ ಬರುವ ಪ್ರಯಾಣಿಕರಿಗೆ ಮತ್ತು ವಿವಿಧ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಿಂದ ಬಂದು ಹೋಗುವ ಪ್ರಯಾಣಿಕರಿಗೆ ಭಾರಿ ತೊಂದರೆಯಾಗುತ್ತಿದೆ. ಈಗಿರುವ ಸ್ಥಳದಲ್ಲಿ ಶೌಚಾಲಯವಾಗಲಿ, ತಂಗುದಾಣವಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಇಲ್ಲ. ಅಲ್ಲದೆ, ಬಸ್ಗಳಿಗಾಗಿ ಜನರು ನಗರದ ಸೂರಜ್ಮುಲ್ ವೃತ್ತದಲ್ಲಿ ಕಾಯುತ್ತಿರುತ್ತಾರೆ. ಇದು ವಾಹನ ಸಂದಣಿಗೆ ಕಾರಣವಾಗಿದೆ. ಕಾಮಗಾರಿಯ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಆಜುಬಾಜು ಇರುವ ಅಂಗಡಿಗಳು, ಹೊಟೇಲ್ಗಳ ಸೇರಿದಂತೆ ಇತರೆ ವ್ಯಾಪಾರ ವಹಿವಾಟಕ್ಕೆ ಅಡ್ಡಿಯಾಗಿದೆ.
ಹುಟ್ಟುಹಬ್ಬಕ್ಕೆ ಗೋ ದಾನ ಮಾಡಿದ ಡಾ. ಶಿವಣ್ಣ
ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ನಿವಾಸಿ ಡಾ.ಶಿವಣ್ಣ ಅವರು ತಮ್ಮ 57ನೇ ಹುಟ್ಟಹಬ್ಬವನ್ನು ಬಡ ರೈತನಿಗೆ ಗೋ ದಾನ ಮಾಡುವ ಮೂಲಕ ಸರಳವಾಗಿ ಆಚರಿಸಿಕೊಂಡರು.ಡಾ. ಶಿವಣ್ಣ ಅವರು ಪ್ರತಿ ವರ್ಷದ ಇದೇ ರೀತಿ ಸರಳವಾಗಿ ತಮ್ಮ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಾರೆ. ದಿ. ಯಳಸಮ್ಮ ತಾಯಿಯವರ ಹೆಸರಿನಲ್ಲಿ 5 ವರ್ಷಗಳಿಂದ ಒಬ್ಬ ಬಡ ರೈತನಿಗೆ ಗೋ ದಾನ ಮಾಡುತ್ತಾರೆ. ತಾಲೂಕಿನ ಬಿಂಗಾನಹಳ್ಳಿ, ಕತ್ತರಿಗುತ್ತೆ, ಪಾಲೇಪಲ್ಲಿ, ತಿನಕಲ್ ಗ್ರಾಮಗಳಲ್ಲಿ ಬಡ ರೈತರನ್ನು ಆಯ್ಕೆ ಮಾಡಿ ನಾಟಿ ಹಸು ದಾನ ಮಾಡುತ್ತಾರೆ. ಈ ಬಾರಿ ರಾಯಪ್ಪಲ್ಲಿ ಗ್ರಾಮದ ಬಡ ರೈತ ಉಮಾಶಂಕರ್ ಅವರಿಗೆ ಗೋ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲಾ ಕೃಷಿ ರಸಗೊಬ್ಬರು ಮಾರಾಗಾರರ ಹಾಗೂ ಸಲಕರಣೆಗಳ ಜಿಲ್ಲಾಧ್ಯಕ್ಷರಾಗಿ ಮತ್ತು ರೈತಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

