ರಾಜೀವ್ ದೂರದೃಷ್ಟಿಯ ನಾಯಕ: ಮುಖಂಡರ ಬಣ್ಣನೆ
ಮಾಲೂರು: ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ತಮ್ಮದೇ ಆದ ದೂರದೃಷ್ಟಿ ಹೊಂದಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಂಥ ನಾಯಕತ್ವದ ಕೊರತೆ ನಮ್ಮೆನ್ನೆಲ್ಲ ಕಾಡುತ್ತಿದೆ ಎಂದು ಯುವಕಾಂಗ್ರೆಸ್ ಮುಖಂಡ ಮೋಹನ್ಕೃಷ್ಣ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ ಆಚರಣೆಯಲ್ಲಿ ಮಾತನಾಡಿದ ಅವರು, ಯುವ ವಯಸ್ಸಿನಲ್ಲೇ ದೇಶದ ಚುಕ್ಕಾಣಿ ಹಿಡಿದಿದ್ದ ರಾಜೀವ್ ಗಾಂಧಿ ಅವರು ದೇಶವನ್ನು ಪ್ರಪಂಚದಲ್ಲೇ ಮುಂಚೂಣಿಗೆ ತಂದಿದ್ದರು. ತಾಂತ್ರಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದರು. ಅವರ ದೂರದೃಷ್ಟಿ-ಬಡವರ ಬಗ್ಗೆಯ ಕಾಳಜಿ ಅವರನ್ನು ಮಹಾನ್ ನಾಯಕನ್ನಾಗಿ ಮಾಡಿತ್ತು. ಅವರ ಮಾರ್ಗದರ್ಶನದ ಕೊರತೆ ನಮ್ಮ ಪಕ್ಷ-ದೇಶ ಕಾಣುತ್ತಿದೆ. ಅವರು ಹಾಕಿಕೊಟ್ಟಿದ್ದ ಮಾರ್ಗದಲ್ಲೇ ನಡೆಯುವ ಪ್ರವೃತ್ತಿ ಎಲ್ಲ ಕಾಂಗ್ರೆಸಿಗರು ಬರಬೇಕಾಗಿದೆ ಎಂದರು. ಯುವ ಕಾಂಗ್ರೆಸ್ನ ಶಬ್ಬೀರ್, ಸಂಪತ್ಕುಮಾರ್, ಬೋರ್ ರಮೇಶ್, ಜೂಡೋ ರಮೇಶ್ ಇದ್ದರು.
ರಾಜೀವ್ ಸ್ಮರಣೆ
ಕೋಲಾರ: ದೇಶಕ್ಕೆ ತನ್ನದೇ ಆದ ಮಹತ್ತರ ಕೊಡುಗೆಗಳನ್ನು ನೀಡಿ ಯುವ ಸಬಲೀಕರಣಕ್ಕೆ ಶ್ರಮಿಸಿದ ಹಾಗೂ ಪಂಚಾಯತ್ರಾಜ್ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ ಕೀರ್ತಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ವೆಂಕಟಪತೆಪ್ಪ ತಿಳಿಸಿದರು.
ಅವರು ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಕೋಲಾರ ಬ್ಲಾಕ್ ಕಾಂಗ್ರೆಸ್ ಮಿತಿ ವತಿಯಿಂದ ರಾಜೀವ್ ಗಾಂಧಿಯವರ 23ನೇ ಪುಣ್ಯತಿಥಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿರವರ ಭಾವಚಿತ್ರಕ್ಕೆ ಪುಷ್ಪಮಾಲೆಯನ್ನು ಅರ್ಪಿಸಿ ಮಾತನಾಡುತ್ತಾ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಯಾಗಿದ್ದು, ಇದಕ್ಕೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳಿಂದ ಜಯಗಳಿಸಿರುವುದೇ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು, ಮಾಜಿ ಸಚಿವ ಕೆ. ನಿಸಾರ್ ಅಹಮದ್, ಹಿರಿಯ ಕಾಂಗ್ರೆಸ್ ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಅಥಾವುಲ್ಲಾಖಾನ್, ಮೊಹಮದ್ ಪ್ಯಾರೇಜಾನ್, ಎಕ್ಬಾಲ್, ಸಜ್ಜಾದ್, ಗುಪ್ತಾ, ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ವೆಂಕಟಸ್ವಾಮಿ ಇದ್ದರು.
ರಾಜೀವ್ ಗಾಂಧಿಗೆ ನಮನ
ಕೆಜಿಎಫ್: ಮಾಜಿ ಪ್ರಧಾನಿ ದಿ.ರಾಜೀವ್ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ರಾಜೀವ್ಗಾಂಧಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ಡಿಯಜಯಪಾಲ್ ಹಾಗೂ ಯುವ ಜಿಲ್ಲಾಧ್ಯಕ್ಷ ಶಾಹೀದ್ ಶಾಜ್ಜಾದ್, ದಿ.ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರು ದೇಶದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ ಎಂದರು. ಆನಂದಕೃಷ್ಣನ್, ಕೃಷ್ಣಮೂರ್ತಿ, ಪಾಂಡುರಂಗನ್, ಜಾನ್, ರಂಗನಾಥ್, ನಗರಸಭೆ ಸದಸ್ಯರಾದ ಮಾಣಿಕ್ಯಂ, ಜಯಂತಿ ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

