ಪಕ್ಷಭೇದವಿಲ್ಲದೆ ಕೆಲಸ ಮಾಡಿ: ಮುನಿಯಪ್ಪ
ಚಿಂತಾಮಣಿ: ನಾಗರಿಕರಿಗೆ ಕುಡಿಯುವ ನೀರು ಕಲ್ಪಿಸಲು ನಗರಸಭೆ ಪ್ರಥಮ ಆದ್ಯತೆ ನೀಡಬೇಕೆಂದು ಕೇಂದ್ರ ಮಾಜಿ ಸಚಿವ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಗರದ ನಗರಸಭೆ ಕಾರ್ಯಾಲಯದಲ್ಲಿ ಗುರುವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿ, 31 ವಾರ್ಡ್ಗಳಿಗೂ ಪಕ್ಷಭೇದ ಕುಡಿಯುವ ನೀರು ಪೂರೈಸಬೇಕು. ಸರ್ಕಾರದ ಅನುದಾನವನ್ನು ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ ಕಾಮಗಾರಿಗೆ ಬಳಸಿಕೊಳ್ಳುವ ಸಂಬಂಧ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.
ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ನಗರಸಭೆಯ ಉತ್ತಮ ಆಡಳಿತ ನಡೆಸಲು ಸಲಹೆ ಸೂಚನೆಗಳನ್ನು ನೀಡಿದರು. ವಿರೋಧ ಪಕ್ಷದ ಹಲವು ಸದಸ್ಯರು ನೀರಿನ ಬಗ್ಗೆ ಸಭೆಯಲ್ಲಿ ಗೊಂದಲ ಮೂಡಿಸಿದರು. ತಮ್ಮ ವಾರ್ಡ್ಗಳಲ್ಲಿ ಬೋರ್ವೆಲ್ ಕೊರೆಸುವಂತೆ ಪಟ್ಟಹಿಡಿದಿದ್ದರು. ಈ ವೇಳೆ, ನಗರಸಭೆ ಅಧ್ಯಕ್ಷ ಜಿಯಾವುಲ್ಲಾ ರೆಹಮಾನ್, ಉಪಾಧ್ಯಕ್ಷೆ ತುಳಸಿ ರವಿ, ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಡಿ.ಸಾದಪ್ಪ, ವೆಂಕಟರವಣಪ್ಪ, ಶ್ರೀರಾಮಪ್ಪ, ಬಾಬುರೆಡ್ಡಿ, ಸುಜಾತಮ್ಮ ಶಿವಣ್ಣ, ತೌಡ್ ಮಂಜು, ಭಾಸ್ಕರ್, ದೇವರಾಜ್ ಸೇರಿ ಅನೇಕರಿದ್ದರು.
ಕೆಎಚ್ಚೆಂ ಜತೆ ಜೆಡಿಎಸ್ ಸದಸ್ಯರು!
ಚಿಂತಾಮಣಿ: ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿತ ಪಕ್ಷದ ನಗರಸಭಾ ಸದಸ್ಯರು ಸೆಡ್ಡು ಹೊಡೆದು ಕಾಂಗ್ರೆಸ್ನ ಸಂಸದ ಕೆ.ಹೆಚ್.ಮುನಿಯಪ್ಪ ವಿಜಯೋತ್ಸವದಲ್ಲಿ ಹಾಗೂ ಪಾದಯಾತ್ರೆ ಮೂಲಕ ಜೊತೆಯಲ್ಲಿ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮುನಿಯಪ್ಪ ಅವರು ಗುರವಾರ ನಗರಕ್ಕೆ ಭೇಟಿ ನೀಡಿದಾಗ ಜೆಡಿಎಸ್ನ ನಗರಸಭೆ ಸದಸ್ಯರಾದ ಆರ್.ಪ್ರಕಾಶ್, ಮುಂಜುನಾಥ್, ಷಫೀಕ್ ಉದ್ದೀನ್ ಅವರು ಶಾಸಕ ಕೃಷ್ಣಾರೆಡ್ಡಿಗೆ ಸೆಡ್ಡು ಹೊಡೆದು ಮುನಿಯಪ್ಪ ಅವರ ಪಾದಯಾತ್ರೆಯಲ್ಲಿ ಕಾಣಿಸಿಕೊಂಡರು. ಮಾಜಿ ಶಾಸಕ ಸುಧಾಕರ್ ಹಾಗೂ ಶಾಸಕ ಕೃಷ್ಣಾರೆಡ್ಡಿ ಅವರು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೇಶವ್ಪ್ರವಾಗಿ ಕೆಲಸ ಮಾಡಿದ್ದಕ್ಕೆ ನಗರಸಭೆ ಸದಸ್ಯರು ವಿರೋಧಿಸಿ, ಈ ನಡೆ ಪ್ರದರ್ಶಿಸಿದ್ದಾರೆ. ಇವರಷ್ಟೇ ಅಲ್ಲದೆ, ಇನ್ನೂ ಹಲವು ಸದಸ್ಯರು ಮುನಿಯಪ್ಪ ಜತೆ ಸಂಪರ್ಕದಲ್ಲಿದ್ದಾರೆಂದು ಗೊತ್ತಾಗಿದೆ. ಜೆಡಿಎಸ್ ಸದಸ್ಯರ ಈ ಕ್ರಮ ಪಟ್ಟಣದಲ್ಲಿ ಬಹುಚರ್ಚೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

