'ಭೂಗಳ್ಳರ ಜೊತೆ ಗ್ರಾಪಂ ಕಾರ್ಯದರ್ಶಿ ಶಾಮೀಲು'
ಕನ್ನಡ ಪ್ರಭವಾರ್ತೆ, ಮಾಲೂರು. ಮೇ.22
ತಾಲೂಕಿನ ಮಡಿವಾಳ ಪಂಚಾಯ್ತಿಯ ಕಾರ್ಯದರ್ಶಿ ವಿಶ್ವನಾಥ್ ಭೂಗಳ್ಳರ ಜತೆ ಶಾಮೀಲಾಗಿ ದಲಿತ ಕುಟುಂಬಕ್ಕೆ ತೊಂದರೆಯಾಗುವ ರೀತಿಯಲ್ಲಿ ಸರ್ಕಾರಿ ಜಮೀನು ಪರಭಾರೆ ಮಾಡುತ್ತಿದ್ದಾರೆ. ಈ ತಕ್ಷಣ ಪಂಚಾಯ್ತಿಯ ಕಾರ್ಯದರ್ಶಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ಅರಳೇರಿ ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ವೈಟ್ ಗಾರ್ಡನ್ ಲೇಜೌಟ್ನಲ್ಲಿನ ಅಕ್ರಮದಿಂದಾಗಿ ಸೇವೆಯಿಂದ ಸಸ್ಪೆಂಡ್ ಆಗಿದ್ದ ವಿಶ್ವನಾಥ್ ಅ ಸಮಯದಲ್ಲೇ ಅಕ್ರಮ ದಾಖಲೆ ಸೃಷ್ಠಿಸಿ ತನ್ನ ಹೆಂಡತಿ ಹೆಸರಿನಲ್ಲಿ ನಿವೇಶನ ಹೊಂದಿದ್ದಾರೆ.
ಕಳೆದ ಜನವರಿಯಲ್ಲಿ ಅದೇ ರೀತಿಯ ನಕಲಿ ದಾಖಲೆ ಮೂಲಕ ಮಾರಾಟ ಮಾಡಿದ್ದಾರೆ.
ಈಗ ಮಡಿವಾಳ ಪಂಚಾಯ್ತಿಗೆ ಕಾರ್ಯದರ್ಶಿಯಾಗಿ ಬಂದ ಮೇಲೆ ಗ್ರಾಮದಲ್ಲಿರುವ ಸರ್ಕಾರಿ ನಿವೇಶನಕ್ಕೆ ಬೇಲಿ ಹಾಕಿಕೊಳ್ಳಲು ಖಾಸಗಿ ವ್ಯಕ್ತಿಯೂಬ್ಬರಿಗೆ ಅನುಮತಿ ನೀಡಿದ್ದು, ಬೇಲಿ ಹಾಕುವುದರಿಂದ ದಲಿತ ರಾಮಚಂದ್ರ ಎಂಬುವರ ಮನೆಗೆ ಹೋಗಲು ತೊಂದರೆಯಾಗುತ್ತದೆಎಂದು ಅಪಾದಿಸಿದರು.
ಇವೆರಡು ಪ್ರಕರಣಗಳಲ್ಲದೇ ಗ್ರಾಮದ ವ್ಯಾಪ್ತಿಯಲ್ಲಿ ನೂತನವಾಗಿ ನಿಮಾರ್ಣವಾಗುತ್ತಿರುವ ಬಿಎಸ್ಎನ್ಎಲ್ ಬಡಾವಣೆಗೆ ಹೊಂದಿಕೊಡಂತೆ ಇರುವ ಸರ್ಕಾರಿ ಗೋಮಾಳ ಜಾಗವನ್ನು ಬಡಾವಣೆಯವರಿಗೆ ಕಾಂಪೌಂಡ್ ಹಾಕಿಕೊಳ್ಳಲು ಅಕ್ರಮ ಅನುಮತಿ ನೀಡಿದ್ದಾರೆ.
ಇಂಥ ಸರ್ಕಾರಿ ಭೂಗಳ್ಳರನ್ನು ಸೇವೆಯಿಂದ ವಜಾ ಮಾಡಿ ದಲಿತರ ಕುಟುಂಬಗಳು ಹಾಗೂ ಸರ್ಕಾರಿ ಜಮೀನುಗಳನ್ನು ಉಳಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಜಿಲ್ಲಾಡಳಿತದಿಂದ ನ್ಯಾಯ ಸಿಗದಿದ್ದರೆ ಸಂಘಟನೆ ಜಿಲ್ಲಾದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ರಾಮಚಂದ್ರ ಅಕ್ರಮದ ದಾಖಲೆಗಳನ್ನು ತೋರಿಸಿದರು. ನಾರಾಯಣಸ್ವಾಮಿ, ಮಡಿವಾಳ ನಾರಾಯಣಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

