ಕೋಲಾರ

ಬಾಡಿಗೆ ಪಾವತಿಸದಿದ್ದರೆ ಅಂಗಡಿ ಮುಟ್ಟುಗೋಲು

Published On :

ಮಾಲೂರು: ಈ ತಿಂಗಳ 30ರ ಒಳಗೆ ಮಳಿಗೆ ಮಾಲೀಕರು ಬಾಡಿಗೆ ಪಾವತಿಸದಿದ್ದರೆ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ ತಾ.ಪಂ.ವಾಣಿಜ್ಯ ಸಂಕೀರ್ಣ ಮಳಿಗೆ ಬಾಡಿಗೆದಾರರ ಸಭೆಯಲ್ಲಿ ಎಚ್ಚರಿಸಿದರು.
ಕಳದೆ ವರ್ಷದ ಆಗಸ್ಟ್‌ವರೆಗೆ ವಾಣಿಜ್ಯ ಸಂಕೀರ್ಣದ 27 ಅಂಗಡಿಗಳಿಂದ 20 ಲಕ್ಷ ರು.ಗಳ ಬಾಡಿಗೆ ಬಾಕಿ ಇದೆ. ಅದಲ್ಲದೇ ಹರಾಜು ಆದ ವರ್ಷದಿಂದ ನಿಯಮದಂತೆ ಬಾಡಿಗೆ ಹಂತಹಂತವಾಗಿ ಹೆಚ್ಚಬೇಕಾದ ಬಾಡಿಗೆಯನ್ನು ಇದುವರೆಗೂ ಹೆಚ್ಚಿಸಿಲ್ಲ. ಈ ನಿಟ್ಟಿನಲ್ಲಿ ಶಾಸಕ ಮಂಜುನಾಥ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಗದಿ ಪಡಿಸಿದ ಬಾಡಿಗೆ ದರವನ್ನು ಸಹ ಬಾಡಿಗೆದಾರರು ಇದುವರೆಗೂ ಕಟ್ಟಲಿಲ್ಲ. ಇದರಿಂದ ತಾಪಂ ವರಮಾನಕ್ಕೆ ತೊಂದರೆಯಾಗಿದೆ. ಕ್ರಮ ಕೈಗೊಳ್ಳದೆ ವಿಧಿಯಿಲ್ಲ ಎಂದರು. ತಾ.ಪಂ.ಅಧ್ಯಕ್ಷೆ ಆಶಾ ರಾಜಪ್ಪ ಮಾತನಾಡಿ ಬಾಡಿಗೆ ವಿವರ ನೀಡಿದರು.
ಶಾಸಕರು ನಿರ್ಧರಿಸಿರುವ ಬಾಡಿಗೆ ಹೆಚ್ಚಾಗಿದ್ದು, ಕಡಿಮೆ ಮಾಡುವಂತೆ ಬಾಡಿಗೆದಾರರ ಪರವಾಗಿ ಮೇವನ,ಶ್ರೀಕಾಂತ್, ಲಿಯಾಖತ್, ರವಿ, ಇಕ್ರಂ ಅಲಿಖಾನ್ ಒತ್ತಾಯಿಸಿದರು. ಆದರೆ ಬಾಡಿಗೆ ಕಡಿಮೆ ಮಾಡಲು ತಾ.ಪಂ. ಸದಸ್ಯರುಗಳು, ಅಧಿಕಾರಿಗಳು ಒಪ್ಪಲಿಲ್ಲ. ಈ ತಿಂಗಳ 30 ರರೊಳಗೆ ಬಾಕಿ ಇರುವ ಬಾಡಿಗೆ ಹಣವನ್ನು ಕಟ್ಟುವಂತೆ ನಂತರ ಹಣಕಟ್ಟಿದ ಪಕ್ಷದಲ್ಲಿ ಮತ್ತೆ ಸಭೆ ಸೇರಿ ಬಾಡಿಗೆ ದರದ ಬಗ್ಗೆ ಚರ್ಚಿಸಲು ಸಭೆ ಒಪ್ಪಿಗೆ ಸೂಚಿಸಿತು. ತಾ.ಪಂ.ಮಾಜಿ ಅಧ್ಯಕ್ಷರಾದ ಗೋಪಾಲ್‌ಗೌಡ, ಚಂದ್ರಪ್ಪ, ಎಸ್.ವಿ.ಲೋಕೇಶ್, ಪಾರ್ವತಮ್ಮ,ಅಮರಾವತಿ, ಮೂರ್ತಿ, ಪುಟ್ಟಸ್ವಾಮಿ, ಬಾಡಿಗೆದಾರರ ಪರವಾಗಿ ಮಾಂಗಿಲಾಲ್ ಸೋಲೋಂಕಿ, ಲೋಹಿತ್ ಗೌಡ, ತಾ.ಪಂ.ವ್ಯವಸ್ಥಾಪಕಿ ಭಾನುಮತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.