ಕೋಲಾರ

ನಾನು ಧರ್ಮ ವಿರೋಧಿ ಅಲ್ಲ: ಹುಲಿಕಲ್ ನಟರಾಜ್

Published On :

ಕೊರಟಗೆರೆ: ತಾವು ಧರ್ಮ ವಿರೋಧಿಯಲ್ಲ. ಧರ್ಮ ದುರ್ಬಳಕೆ ಮಾಡಿಕೊಳ್ಳುವವರ ವಿರೋಧಿ ಎಂದು ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಸ್ಪಷ್ಟಪಡಿಸಿದರು.
ಅವರು ಕೊರಟಗೆರೆ ಸಮೀಪದ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಖಾಖಾ ಮಠದ 8 ನೇ ಸಿದ್ಧಶ್ರೀ ವಾರ್ಷಿಕೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ನನ್ನನ್ನು ಧರ್ಮ ವಿರೋಧಿ ಎನ್ನುತ್ತಾರೆ ಕೆಲವರು. ಆದರೆ ನಾನು ಧರ್ಮ ವಿರೋಧಿಯಲ್ಲ. ಧರ್ಮದ ಹೆಸರಿನಲ್ಲಿ ಅಧರ್ಮ ಮತ್ತು ಮೌಢ್ಯತೆ ಬಿಂಬಿಸುವವರ ವಿರೋಧಿಸುವವ ತಾವು ಎಂದರು. ಮುಗ್ಧ ಜನರನ್ನು ಬಂಡವಾಳ ಮಾಡಿಕೊಂಡು ಅವರಿಂದ ಸುಲಿಗೆ ಮಾಡುವರಂತಹವರ ವಿರುದ್ಧ ಹಲವು ವರ್ಷಗಳಿಂದ ನಿತ್ಯ ಹೋರಾಟ ನಡೆಸುತ್ತಿದ್ದೇನೆ ಎಂದರು.ವಿರಸಬೇಡ: ಪ್ರಾಸ್ತಾವಿಕ ನುಡಿಗಳನ್ನಾಡಿದ ಸಿದ್ದರಬೆಟ್ಟದ ಬಾಳೇಹೊನ್ನೂರು ಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಸರ್ವಧರ್ಮಕ್ಕೂ  ಮಹತ್ವ ಇರಬೇಕು. ಒಳ್ಳೆಯ ವಿಚಾರ ಎಲ್ಲೇ ಇದ್ದರೂ, ಅದನ್ನು ಅನುಕರಿಸುವುದನ್ನು ಕಲಿಯಬೇಕು ಎಂದರು. ಆದರ್ಶ ವಿವಾಹದ ಅಡಿಯಲ್ಲಿ ಸಾಮೂಹಿಕ ವಿವಾಹವಾದ ಹೊಸ ಜೋಡಿಗಳನ್ನು ಉದ್ದೇಶಿಸಿ ಮಾತನಾಡಿ ಎಲ್ಲರೂ ದಾಪತ್ಯ ಜೀವನದ ಮಹತ್ವವನ್ನು ಅರಿತು ಬಾಳಬೇಕು. ಎಲ್ಲೂ ವಿರಸ ಕಾಣದೇ ಇರಬೇಕು ಎಂದು ಸಲಹೆ ನೀಡಿದರು.
ಸಹಕಾರಿ: ಶಾಸಕ ಪಿ.ಆರ್. ಸುಧಾಕರ್ ಲಾಲ್ ಮಾತನಾಡಿ ಇಂದು ಮದುವೆಗಳಿಗಾಗಿ ದುಂದು ವೆಚ್ಚ ಮಾಡಬಾರದು. ಎಲ್ಲಾ ಯುವಕ-ಯವತಿಯರು ಆದರ್ಶ ವಿವಾಹದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು.
  ಇದೇ ರೀತಿ ಎಲ್ಲಾ ಮಠಮಾನ್ಯಗಳು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿದಲ್ಲಿ ಬಡವರಿಗೆ ಹಿಂದುಳಿದವರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.