ದಲಿತರಿಗೆ ಶೇ.80 ಕಾಮಗಾರಿ ನೀಡಲು ಆಗ್ರಹ
ಕೋಲಾರ: ಜಿಲ್ಲಾ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಗೆ ಬರುವ ಕಾಮಗಾರಿಗಳಲ್ಲಿ ಶೇ. 80ರಷ್ಟನ್ನು ದಲಿತ ವರ್ಗಕ್ಕೆ ಸೇರಿದ ಗುತ್ತಿಗೆ ದಾರರಿಗೆ ನೀಡಬೇಕೆಂದು ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದ ಜಿಲ್ಲಾಧ್ಯಕ್ಷ ಎಂ. ಮುನಿರಾಜು ಪ್ರಧಾನ ಹಾರೋಹಳ್ಳಿ ವಿ. ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದ ಮುಖಂಡರು, ಜಿಲ್ಲೆಯಲ್ಲಿ ಶೇಕಡಾವಾರು 35 ಅನುಪಾತದಲ್ಲಿ ದಲಿತರ ಸಮುದಾಯದವರಿದ್ದು ಕೆಲವರು ಮಾತ್ರ ಸುಸ್ಥಿತಿಯಲ್ಲಿದ್ದಾರೆ. ದಲಿತ ವಿದ್ಯಾವಂತ ನಿರುದ್ಯೋಗಿಗಳು ತಮ್ಮ ಜೀವನ ನಿರ್ವಹಣೆಗಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಗುತ್ತಿಗೆ ಲೈಸೆನ್ಸ್ ಮಾಡಿಸಿಕೊಂಡಿದ್ದಾರೆ. ಆದರೆ ಇತರೇ ಮೇಲ್ವರ್ಗದವರ ನಡುವೆ ಸ್ಪರ್ಧಿಸಲಾರದೆ ಅಸಹಾಯಕರಾಗಿರುವುದರಿಂದ ದಲಿತ ವರ್ಗಕ್ಕೆ ಕಾಮಗಾರಿಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ದಲಿತರ ಅಭಿವೃದ್ಧಿಗೆ ನೇರವಾಗಿ ನೀಡುವ ಕಾಮಗಾರಿಗಳಲ್ಲಿ ನಿರ್ಮಿತ ಕೇಂದ್ರ, ಭೂ ಸೇನೆ, ಲೋಕೋಪಯೋಗಿ ಇಲಾಖೆ ಹಾಗೂ ಮತ್ತಿತರ ಇಲಾಖೆಗಳು ದಲಿತರಿಗೆ ಹೆಚ್ಚಿನ ಕಾಮಗಾರಿಗಳನ್ನು ನೀಡುವಂತೆ ಆದೇಶ ನೀಡಬೇಕೆಂದು ಸಮಾಜ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸುರೇಶ್, ಮುನಿಯಪ್ಪ ಹಲವಾರು ದಲಿತ ಯುವಕರು ಇದ್ದರು.
ಕಾನೂನು ಪಾಲಿಸಿದರೆ ಸಮಾಜದಲ್ಲಿ ಶಾಂತಿ: ನ್ಯಾ.ಎಸ್.ಮಹೇಶ್
ಶಿಡ್ಲಘಟ್ಟ: ದೇಶದ ಪ್ರತಿಯೂಬ್ಬ ಪ್ರಜೆಯೂ ಕಾನೂನು ಪಾಲಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಸಿವಿಲ್ ಪ್ರಧಾನ ನ್ಯಾಯಾಧೀಶ ಎಸ್.ಮಹೇಶ್ ಅಭಿಪ್ರಾಯಪಟ್ಟರು. ತಾಲೂಕು ಸೇವಾ ಸಮಿತಿಯಿಂದ ಕಾನೂನು ಸಾಕ್ಷರತಾ ರಥ ಹಾಗೂ ಕಾನೂನು ನೆರವು ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಕಾನೂನನ್ನು ಯಾರೂ ನಿರ್ಲಕ್ಷಿಸಬಾರದು ಕಾನೂನು ಪಾಲನೆಯಿಂದ ದೇಶದ ಪ್ರತಿಯೂಬ್ಬ ಪ್ರಜೆಗೂ ಅನುಕೂಲವಾಗುತ್ತದೆ ಎಂದರು.
ತಹಸಿಲ್ದಾರ್ ನಾರಾಯಣಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಪಾಪಿರೆಡ್ಡಿ, ವಕೀಲರಾದ ಈ.ಡಿ.ಶ್ರೀನಿವಾಸ್, ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯ, ಈ ನಾರಾಯಣಪ್ಪ, ವಿ.ಸುಬ್ರಮಣಿ, ಎಂ.ಬಿ.ಲೋಕೇಶ್, ಸಿ.ಡಿ.ಪಿ.ಓ ಪ್ರಕಾಶ್ ಮತ್ತಿತತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

